ನವದೆಹಲಿ: ಕ್ರಿಕೆಟ್ ವಿಶ್ವಕಪ್ ಕ್ರೇಜ್ ಇಡೀ ವಿಶ್ವವನ್ನೇ ಆವರಿಸಿದೆ. ಅದರಂತೆ ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನ ಕೂಡ ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ತಮಿಳುನಾಡಿನ ಚೆನ್ನೈ ವಿದ್ಯಾರ್ಥಿಗಳು ವಿಶ್ವಕಪ್ ಮತ್ತು ವಿಶ್ವ ಯೋಗ ದಿನ ಎರಡನ್ನೂ ಮಿಳಿತಗೊಳಿಸಿದ್ದಾರೆ. ವಿಶ್ವಕಪ್ ಟ್ರೋಫಿ ಮಾದರಿಯಲ್ಲಿ ಯೋಗ ರಚನೆಯನ್ನು ಮಾಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡಕ್ಕೆ ಬೆಂಬಲವನ್ನು ಸೂಚಿಸುವ ಸಲುವಾಗಿ ಚೆನ್ನೈನ ವಿದ್ಯಾರ್ಥಿಗಳು ವಿಶ್ವಕಪ್ ಟ್ರೋಫಿಯ ಆಕಾರದಲ್ಲಿ ಯೋಗ ರಚನೆಯನ್ನು ಮಾಡಿದ್ದಾರೆ. ಈ ಯೋಗ ರಚನೆಯನ್ನು ಐಸಿಸಿ ವರ್ಲ್ಡ್ ಕಪ್ 2019 ರ ಅಧಿಕೃತ ಖಾತೆ ಕ್ರಿಕೆಟ್ ವರ್ಲ್ಡ್ ಕಪ್ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಚೆನ್ನೈನ ಶಾಲಾ ಮಕ್ಕಳು ಟೀಮ್ ಇಂಡಿಯಾ ಮತ್ತು ಅಂತಾರಾಷ್ಟ್ರೀಯ ಯೋಗದಿನಕ್ಕೆ ಮಹತ್ವದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ” ಎಂದಿದೆ.
Incredible commitment levels to #TeamIndia and International Yoga Day from these school children in Chennai, India 🧘 pic.twitter.com/D7BCfKk6JT
— Cricket World Cup (@cricketworldcup) June 21, 2019
ತ್ರಿವರ್ಣ ಧ್ವಜದ ಮುಂಬಾಗದಲ್ಲಿ ಶಾಲೆಯ ಮೈದಾನದಲ್ಲಿ ಹಲವಾರು ವಿದ್ಯಾರ್ಥಿಗಳು ಸೇರಿ ಯೋಗದಲ್ಲಿ ವಿಶ್ವಕಪ್ ಟ್ರೋಫಿ ರಚನೆಯನ್ನು ಮಾಡಿದ್ದಾರೆ. ಎಲ್ಲಾ ಕಡೆಯಿಂದಲೂ ಇದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಾರಿ 5ನೇ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದನ್ನು ಪುರಸ್ಕರಿಸಿ ಪ್ರತಿ ವರ್ಷ ಜೂನ್ 21 ಅನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.