ಲಕ್ನೋ: ಜೂನ್ 17 ರಂದು ಜಮ್ಮು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಮೇಜರ್ ಕೇತನ್ ಶರ್ಮಾ ಅವರ ಕುಟುಂಬಕ್ಕೆ ಉತ್ತರಪ್ರದೇಶ ಸರ್ಕಾರವು ರೂ. 25 ಲಕ್ಷ ಪರಿಹಾರ ಮತ್ತು ಕುಟುಂಬದವರಿಗೆ ಒಂದು ಸರ್ಕಾರಿ ಉದ್ಯೋಗವನ್ನು ಘೋಷಣೆ ಮಾಡಿದೆ. ಮಾತ್ರವಲ್ಲದೇ, ಅವರ ಸ್ಮರಣಾರ್ಥ ರಸ್ತೆಯೊಂದಕ್ಕೆ ಅವರ ಹೆಸರನ್ನಿಡಲು ನಿರ್ಧರಿಸಿದೆ.
ಉತ್ತರಪ್ರದೇಶದ ಸಚಿವ ಸುರೇಶ್ ರಾಣಾ ಅವರು ಈ ಬಗ್ಗೆ ಘೋಷಣೆ ಮಾಡಿದ್ದು, ಮೇಜರ್ ಕೇತನ್ ಶರ್ಮಾ ಹೆಸರನ್ನು ರಸ್ತೆಯೊಂದಕ್ಕೆ ಇಡುವುದಾಗಿ ತಿಳಿಸಿದ್ದಾರೆ.
ಜೂನ್ 17ರಂದು ಶರ್ಮಾ ಹುತಾತ್ಮರಾಗಿದ್ದು, ಮಂಗಳವಾರ ಅವರ ಅಂತ್ಯ ಸಂಸ್ಕಾರವನ್ನು ಮೀರತ್ನ ಅವರ ಹುಟ್ಟೂರಲ್ಲಿ ನೆರವೇರಿಸಲಾಗಿದೆ. ಅನಂತನಾಗ್ ಜಿಲ್ಲೆಯ ಅಚ್ಬಲ್ ಪ್ರದೇಶದಲ್ಲಿ ಸೋಮವಾರ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಇಹಲೋಕವನ್ನು ತ್ಯಜಿಸಿದ್ದರು.
1987ರ ಅಕ್ಟೋಬರ್ 4ರಂದು ಜನಿಸಿ ಮೇಜರ್ ಶರ್ಮಾ, 2012ರಲ್ಲಿ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡಮಿಯಿಂದ ಪಾಸ್ ಔಟ್ ಆಗಿ ಭಾರತೀಯ ಸೇನೆಯ ಸಿಖ್ ಲೈಟ್ ಇನ್ಫಾಂಟ್ರಿಯಲ್ಲಿ ಲೆಫ್ಟಿನೆಂಟ್ ಆಗಿ ಸೇರಿದರು. ಮೊದಲು ಪುಣೆಯಲ್ಲಿ ಕರ್ತವ್ಯದಲ್ಲಿದ್ದ ಇವರು ಎರಡು ವರ್ಷಗಳ ಹಿಂದೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಗೊಂಡಿದ್ದರು. ಜಮ್ಮು ಕಾಶ್ಮೀರದ ಕೌಂಟರ್-ಇನ್ಸರ್ಜೆನ್ಸಿ ಆಪರೇಶನ್ ಭಾಗವಾಗಿ ಅವರು 19 ರಾಷ್ಟ್ರೀಯ ರೈಫಲ್ಸ್ನಲ್ಲಿ ನಿಯೋಜನೆಗೊಂಡರು.
ಆರು ವರ್ಷಗಳ ಹಿಂದೆ ಇವರು ವಿವಾಹವಾಗಿದ್ದು, ಮೂರು ವರ್ಷದ ಮಗಳಿದ್ದಾಳೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಅನೇಕ ಗಣ್ಯರು ಮೇಜರ್ ಶರ್ಮಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
UP Min Suresh Rana: UP CM Yogi Adityanath has announced financial assistance of Rs 25 lakh and a govt job to a family member of Army Major Ketan Sharma who lost his life in Anantnag encounter on June 17, a road will also be named after his name. (18-06) pic.twitter.com/DHJPE11MJ3
— ANI UP (@ANINewsUP) June 19, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.