ನವದೆಹಲಿ: ಪೂರ್ವ ಭಾರತದಲ್ಲಿ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ವಾಯು ಸಂಪರ್ಕವನ್ನು ಉತ್ತೇಜಿಸುವ ಸಲುವಾಗಿ ಇಂಡಿಗೋ, ಕೋಲ್ಕತ್ತಾ-ಗಯಾ ಮತ್ತು ವಾರಣಾಸಿ ನಡುವೆ ನಿತ್ಯ 12 ಹೊಸ ಹಾರಾಟಗಳನ್ನೊಳಗೊಂಡ ವಾಯು ಸಂಪರ್ಕವನ್ನು ಘೋಷಣೆ ಮಾಡಿದೆ. ಬುದ್ಧಿಸ್ಟ್ ಸರ್ಕ್ಯುಟ್ ಟೂರಿಸಂ ಅನ್ನು ಉತ್ತೇಜಿಸುವುದಕ್ಕಾಗಿ ಇದನ್ನು ಪರಿಚಯಿಸಲಾಗಿದೆ.
2019ರ ಆಗಸ್ಟ್ ತಿಂಗಳಿನಿಂದ ವಿಮಾನ ಕಾರ್ಯಾಚರಿಸಲಿದ್ದು, ಗುರುವಾರದಿಂದಲೇ ಟಿಕೆಟ್ ಬುಕಿಂಗ್ ಆರಂಭಗೊಂಡಿದೆ. ಕೋಲ್ಕತ್ತಾ-ಗಯಾ, ಕೋಲ್ಕತ್ತಾ-ಪಾಟ್ನಾ, ಕೋಲ್ಕತ್ತಾ-ವಾರಣಾಸಿ ಮತ್ತು ಗಯಾ-ವಾರಣಾಸಿ ಮಾರ್ಗವನ್ನು ಆಯ್ಕೆ ಮಾಡಲಾಗಿದೆ.
ಬುದ್ಧಿಸ್ಟ್ ಸರ್ಕ್ಯುಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಇಂಡಿಗೋದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೊನೊಜಾಯ್ ದತ್ತ ಅವರು, “ಹಿಂದೆಂದು ಇದನ್ನು ಮಾಡಲಾಗಿಲ್ಲ, ನಾವು ಕೋಲ್ಕತ್ತಾ ಮತ್ತು ದೆಹಲಿ ಎರಡನ್ನೂ ಕನೆಕ್ಟ್ ಮಾಡುತ್ತಿದ್ದೇವೆ, ಈ ಮಾರುಕಟ್ಟೆಗಳಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ” ಎಂದಿದ್ದಾರೆ.
ಹೊಸ ವಿಮಾನಗಳು ಆಗ್ನೇಯ ಏಷ್ಯಾ ಮತ್ತು ಸುತ್ತಮುತ್ತಲಿನ ಬೌದ್ಧ ಆಧ್ಯಾತ್ಮಿಕ ಕೇಂದ್ರಗಳಿಗೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಮಾಡುತ್ತವೆ ಎಂಬುದು ಗಮನಾರ್ಹ, ಇಲ್ಲಿ ಇಂಡಿಗೊ ವಿಯೆಟ್ನಾಂ, ಹಾಂಗ್ ಕಾಂಗ್ ಮತ್ತು ಚೀನಾದ ಸೇವೆಗಳನ್ನು ಒಳಗೊಂಡಂತೆ ಕೋಲ್ಕತ್ತಾಗೆ ಹೊಸ ಮಾರ್ಗಗಳನ್ನು ಸೇರಿಸುವ ಮೂಲಕ ತನ್ನ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.