ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿ (DRDO) ಬುಧವಾರ Hypersonic Technology Demonstrator Vehicle (HSTDV) ಅನ್ನು ಒರಿಸ್ಸಾದ ಬಾಲಸೋರ್ ಜಿಲ್ಲೆಯಲ್ಲಿರುವ ಅಬ್ದುಲ್ ಕಲಾಂ ಐಸ್ಲ್ಯಾಂಡಿನ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರಾಯೋಗಿಕ ಪರೀಕ್ಷೆಗೊಳಪಡಿಸಿದೆ.
ಈ ದೇಶೀಯ ನಿರ್ಮಿತ ವಾಹಕದ ಪ್ರಾಯೋಗಿಕ ಪರೀಕ್ಷೆಯು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಜರುಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಬೆಳಗ್ಗೆ 11 ಗಂಟೆಗೆ ಇದನ್ನು ಉಡಾವಣೆಗೊಳಿಸಲಾಗಿತ್ತು, ವಿವಿಧ ರೇಡಾರ್, ಟೆಲಿಮೆಟ್ರಿ ಸ್ಟೇಶನ್ ಮತ್ತು ಎಲೆಕ್ಟ್ರೊ-ಆಪ್ಟಿಕಲ್ ಟ್ರ್ಯಾಕಿಂಗ್ ಸೆನ್ಸಾರ್ಗಳು ಇದನ್ನು ಟ್ರ್ಯಾಕ್ ಮಾಡಿದವು ಎಂದು ತಿಳಿಸಿದೆ.
ರಕ್ಷಣಾ ಮೂಲಗಳ ಪ್ರಕಾರ, HSTDVನೊಂದಿಗೆ ಡಿಆರ್ಡಿಓ ಇನ್ನಿತರ ಹಲವಾರು ತಂತ್ರಜ್ಞಾನಗಳ ಪರೀಕ್ಷೆಯನ್ನೂ ಈ ವೇಳೆ ನಡೆಸಿದೆ. ಈ ಪರೀಕ್ಷೆಯಿಂದ ಕೆಲವು ತಂತ್ರಜ್ಞಾನಗಳನ್ನು ಮೌಲ್ಯೀಕರಿಸಲಾಗಿದೆ, ಕೆಲವೊಂದರ ವಿಫಲತೆಯ ಬಗ್ಗೆ ವಿಶ್ಲೇಷಣೆ ನಡೆಸಲಾಗುತ್ತಿದೆ ಎಂದು ಡಿಆರ್ಡಿಓ ಹೇಳಿದೆ.
2008 ರಲ್ಲಿ, ಡಿಆರ್ಡಿಓದ ಮಾಜಿ ಮುಖ್ಯಸ್ಥ ವಿ.ಕೆ. ಸರಸ್ವತ್ ಅವರು, “HSTDV ಯೋಜನೆಯ ಮುಖ್ಯ ಗುರಿ 15 ಕಿ.ಮೀ ನಿಂದ 20 ಕಿ.ಮೀ ಎತ್ತರದಲ್ಲಿ ಸ್ಕ್ರಾಮ್-ಜೆಟ್ ಇಂಜಿನ್ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದಾಗಿದೆ” ಎಂದು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.