ಶ್ರೀನಗರ: ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ಕೈಗೊಳ್ಳಲು ನೂರಾರು ಭಕ್ತರು ಸನ್ನದ್ಧರಾಗಿದ್ದಾರೆ. ಮಂಜುಗಡ್ಡೆಯಿಂದ ನಿರ್ಮಿತವಾಗುವ ಶಿವಲಿಂಗದ ದರ್ಶನವನ್ನು ಪಡೆಯಲು ಜುಲೈ 2ರಿಂದ ಯಾತ್ರೆ ಆರಂಭವಾಗಲಿದೆ.
ಉಗ್ರರ ದಾಳಿಯ ಭೀತಿ ಇರುವ ಹಿನ್ನಲೆಯಲ್ಲಿ ಯಾತ್ರೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಸ್ವತಃ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರೇ ಬುಧವಾರ ಇಲ್ಲಿಗೆ ಆಗಮಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಲಿದ್ದಾರೆ. ಇವರಿಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸೈಯದ್ ಸಾಥ್ ನೀಡಲಿದ್ದಾರೆ.
ಭದ್ರತೆಯನ್ನು ಪರಿಶೀಲನೆ ನಡೆಸುವುದು ಮಾತ್ರವಲ್ಲದೇ, ರಾಜನಾಥ್ ಸಿಂಗ್ ಅಮರನಾಥನ ದರ್ಶನವನ್ನೂ ಪಡೆಯಲಿದ್ದಾರೆ. ಜುಲೈ 2ರಿಂದ ಯಾತ್ರೆಕೈಗೊಳ್ಳುವ ಮೊದಲ ತಂಡದೊಂದಿಗೆ ಇವರು ಯಾತ್ರೆ ಆರಂಭಿಸಲಿದ್ದಾರೆ.
ಅಮರನಾಥ ಮಂದಿರ ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿದೆ, ಇಲ್ಲಿ ಮಂಜುಗಡ್ಡೆಯಿಂದ ಶಿವಲಿಂಗ ನಿರ್ಮಿತವಾಗುತ್ತದೆ ಮತ್ತು ಇದು ಶಿವಶಕ್ತಿಯ ಪ್ರತೀಕವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.