ನವದೆಹಲಿ: ಸಬ್ಸಿಡಿ ನೀಡುವಿಕೆ ರೈತರಿಗೆ ಅತ್ಯಂತ ನಿರಾಳತೆಯನ್ನು ಒದಗಿಸುವ ಪ್ರಮುಖ ಕ್ರಮಗಳಲ್ಲಿ ಒಂದು. ಸಬ್ಸಿಡಿಯನ್ನು ಸರಳೀಕರಣಗೊಳಿಸುವ ಸಲುವಾಗಿ, 2ನೇ ಹಂತದ ನೇರ ಲಾಭ ವರ್ಗಾವಣೆ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ರಸಗೊಬ್ಬರಗಳ ಸಬ್ಸಿಡಿಯನ್ನೂ ನೇರವಾಗಿ ರೈತರಿಗೆ ನೀಡುವ ಬಗ್ಗೆ ಗಂಭೀರವಾದ ಚಿಂತನೆಯನ್ನು ನಡೆಸುತ್ತಿದೆ.
2017ರ ಅಕ್ಟೋಬರ್ ತಿಂಗಳಲ್ಲಿ ಮೊದಲ ಹಂತದ ರಸಗೊಬ್ಬರ ನೇರ ಲಾಭ ವರ್ಗಾವಣೆ ಸಮಸ್ಯೆಗೀಡಾಗಿದ್ದು, ಇದರಡಿ ಪಾಯಿಂಟ್ ಆಫ್ ಸೇಲ್ ಮೆಶಿನಿನಡಿ ಪತ್ತೆ ಹಚ್ಚಲಾದ ರಿಟೇಲ್ ಸೇಲ್ಸ್ ಡಾಟಾವನ್ನು ಚೆಕ್ ಮಾಡಿ ಕಂಪನಿಗಳಿಗೇ ಸಬ್ಸಿಡಿಯನ್ನು ನೀಡಲಾಗುತ್ತಿತ್ತು.
ರೈತರಿಗೆ ಕಡಿಮೆ ದರದ ಕೃಷಿ ಪೋಷಕಾಂಶಗಳನ್ನು ಪೂರೈಸುವ ಸಲುವಾಗಿ ಸರ್ಕಾರವು ವಾರ್ಷಿಕ ರೂ.70 ಸಾವಿರ ಕೋಟಿಗಳನ್ನು ಸಬ್ಸಿಡಿಯಾಗಿ ನೀಡುತ್ತದೆ.” ರೈತರ ಬ್ಯಾಂಕು ಖಾತೆಗಳಿಗೇ ನೇರವಾಗಿ ಸಬ್ಸಿಡಿಯನ್ನು ಹಾಕಲು ನಾವು ಬಯಸುತ್ತೇವೆ. ಎರಡನೇ ಹಂತದ ನೇರ ಲಾಭ ವರ್ಗಾವಣೆಗೆ ನಾವು ಸಜ್ಜಾಗಿದ್ದೇವೆ. ಅದನ್ನು ಹೇಗೆ ಮತ್ತು ಯಾವಾಗ ಎಂಬ ಬಗ್ಗೆ ಕೂಲಂಕೂಷವಾದ ಚರ್ಚೆಯನ್ನು ನಡೆಸಲಿದ್ದೇವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ಇರುವ ರಸಗೊಬ್ಬರ ನೇರ ಲಾಭ ವರ್ಗಾವಣೆಯಲ್ಲಿ ಕೆಲವೊಂದು ಸುಧಾರಣೆಗಳನ್ನು ತರಲು ಸರ್ಕಾರ ನಿರ್ಧರಿಸಿದೆ. ರೀಟೇಲರ್ಗಳಿಗೆ ಪಾಯಿಂಟ್ ಆಫ್ ಸೇಲ್ ಮೆಶಿನ್ಗಳ ಜೊತೆಗೆ ಲ್ಯಾಪ್ ಟಾಪ್ ಅಥವಾ ಡೆಸ್ಕ್ ಟಾಪ್ಗಳನ್ನೂ ಒದಗಿಸಿ ಸುಲಲಿತ ಕಾರ್ಯಕ್ಕೆ ಅನುವು ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.