ನವದೆಹಲಿ: 1965ರ ಪಾಕಿಸ್ಥಾನ ವಿರುದ್ಧ ಯುದ್ಧದಲ್ಲಿ ಭಾರತ ಅಭೂತಪೂರ್ವ ಜಯಗಳಿಸಿದ ಸಂಭ್ರಮಕ್ಕೆ ಮುಂದಿನ ತಿಂಗಳು 50 ವರ್ಷಗಳು ತುಂಬುತ್ತಿವೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬೃಹತ್ ಸಮಾರಂಭವನ್ನು ನಡೆಸಲು ಉದ್ದೇಶಿಸಿದೆ. ಆದರೆ ಇದಕ್ಕೆ ಪಾಕಿಸ್ಥಾನದ ಕಡೆಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಭಾರತ ಹಿಂದೆಂದೂ ಯುದ್ಧದ ಗೆಲುವನ್ನು ಆಚರಣೆಯ ಮೂಲಕ ಸಂಭ್ರಮಿಸಿಲ್ಲ, 1971ರಲ್ಲಿ ಪಾಕಿಸ್ಥಾನದ 80 ಸಾವಿರ ಸೈನಿಕರು ಶರಣಾದಾಗಲೂ ಭಾರತ ಇದನ್ನು ಸಂಭ್ರಮಿಸಲಿಲ್ಲ. ಆದರೀಗ 1965 ವಿಜಯವನ್ನು ಅದ್ದೂರಿಯಾಗಿ ಸಂಭ್ರಮಿಸಲು ಸರ್ಕಾರ ನಿರ್ಧರಿಸಿದೆ. ಈ ಯುದ್ಧದಲ್ಲಿ ಭಾಗಿಯಾದ ಸೈನಿಕರಿಗೆ ಸನ್ಮಾನವನ್ನೂ ನಡೆಸಲು ಚಿಂತಿಸಿದೆ. ಮಿನಿ ಪೆರೇಡ್ಗಳನ್ನು ಆಯೋಜಿಸಲು ಮುಂದಾಗಿದೆ. ಆಗಸ್ಟ್ 28ರಿಂದ ಸೆಪ್ಟಂಬರ್ 26ರವರೆಗೆ ದೆಹಲಿಯಲ್ಲಿ ಸಂಭ್ರಮಾಚರಣೆ ಮುಂದುವರೆಯಲಿದೆ.
ಪಾಕಿಸ್ಥಾನ ಭಾರತದ ಈ ನಿರ್ಧಾರಕ್ಕೆ ಅಧಿಕೃತವಾಗಿ ಯಾವುದೇ ವಿರೋಧವನ್ನು ವ್ಯಕ್ತಪಡಿಸಿಲ್ಲ, ಆದರೆ ಅಲ್ಲಿನ ಅಧಿಕಾರಿಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ, ಇದು ಎರಡು ದೇಶಗಳ ಬಾಂಧವ್ಯವನ್ನು ಹಾಳು ಮಾಡಲಿದೆ ಎಂದು ಅಭಿಪ್ರಾಯಿಸಿದ್ದಾರೆ ಎನ್ನಲಾಗಿದೆ.
ಅದೇನೆಯಿರಲಿ 1965ರಲ್ಲಿ ಯುದ್ಧವನ್ನು ಗೆದ್ದ ಭಾರತ ತನ್ನ ಗೆಲುವನ್ನು ಸಂಭ್ರಮಿಸುವ ತವಕದಲ್ಲಿದೆ, ಆದರೆ ಯುದ್ಧದಲ್ಲಿ ಸೋತು ಸುಣ್ಣವಾದ ಪಾಕಿಸ್ಥಾನಕ್ಕೆ ಭಾರತದ ಸಂಭ್ರಮವನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂಬುದು ಸ್ಪಷ್ಟ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.