ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜೂನ್ 17 ರಂದು ಆರಂಭಗೊಳ್ಳಲಿದ್ದು, ಜುಲೈ 26 ಕ್ಕೆ ಅಂತ್ಯಗೊಳ್ಳಲಿದೆ ಎಂದು ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ.
ಮೊದಲ ಸಂಸತ್ತು ಅಧಿವೇಶನದ ದಿನಾಂಕವನ್ನು ಶುಕ್ರವಾರ ಜರುಗಿದ ಮೊದಲ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿದೆ. ಫಲಿತಾಂಶ ಹೊರ ಬಿದ್ದು ವಿಜೆಪಿ ವಿಜಯಿ ಎಂದು ಘೋಷಣೆಯಾದ ಒಂದು ವಾರಗಳ ಬಳಿಕ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದೆ, ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಸಂಪುಟ ಸಭೆ ಜರುಗಿದೆ.
ಮೊದಲ ಸಂಪುಟ ಸಭೆಯಲ್ಲಿ ಬಜೆಟ್ ಅಧಿವೇಶನದ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಜೂನ್ 17 ರಿಂದ ಜುಲೈ 26 ರ ವರೆಗೆ ನಡೆಯಲಿರುವ ಅಧಿವೇಶನದಲ್ಲಿ ಜುಲೈ 4 ರಂದು ಆರ್ಥಿಕ ಸಮೀಕ್ಷೆಯನ್ನು ಮಂಡನೆಗೊಳಿಸಲಾಗುತ್ತದೆ ಮತ್ತು ಜುಲೈ 5 ರಂದು ಬಜೆಟ್ ಮಂಡನೆಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಜೂನ್ 17 ರಂದು ಹಂಗಾಮಿ ಸ್ಪೀಕರ್ ಅವರ ನೇಮಕವಾಗಲಿದೆ. ಜೂನ್ 19 ಕ್ಕೆ ಪೂರ್ಣಾವಧಿ ಸ್ಪೀಕರ್ ಅವರ ಆಯ್ಕೆ ನಡೆಯಲಿದೆ. ಜೂನ್ 20 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮೋದಿಯವರ ಎರಡನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಅಧಿವೇಶ ಇದಾಗಲಿರುವುದರಿಂದ ಹಲವಾರು ಮಹತ್ವ ಘೋಷಣೆಗಳು ಹೊರ ಬೀಳುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.