ನವದೆಹಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನು ಬರೆದಿದ್ದು, ನೂತನ ಸರ್ಕಾರದಲ್ಲಿ ತನಗೆ ಯಾವ ಜವಾಬ್ದಾರಿಯನ್ನೂ ನೀಡುವುದು ಬೇಡ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನಲೆಯಲ್ಲಿ ಅವರು ಈ ಮನವಿಯನ್ನು ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಜೇಟ್ಲಿಯವರು, “ಕಳೆದ ಕೆಲವು ತಿಂಗಳುಗಳಿಂದ ನಾನು ಗಂಭೀರ ಆರೋಗ್ಯ ಸವಾಲುಗಳಿಂದ ಬಳಲುತ್ತಿದ್ದೇನೆ. ಹೀಗಾಗಿ ಯಾವುದೇ ಜವಾಬ್ದಾರಿಯಿಂದ ದೂರವಿರಲು ಬಯಸುತ್ತೇನೆ. ತನಗಾಗಿ ಒಂದಿಷ್ಟು ಸಮಯ ಬೇಕಾಗಿದ್ದು, ಹೀಗಾಗಿ ಹೊಸ ಸರ್ಕಾರದ ಜವಾಬ್ದಾರಿಗಳಲ್ಲಿ ಭಾಗಿಯಾಗಲು ಬಯಸುತ್ತಿಲ್ಲ” ಎಂದಿದ್ದಾರೆ.
I have today written a letter to the Hon’ble Prime Minister, a copy of which I am releasing: pic.twitter.com/8GyVNDcpU7
— Arun Jaitley (@arunjaitley) May 29, 2019
ಮೋದಿಗೆ ಧನ್ಯವಾದ ತಿಳಿಸಿರುವ ಜೇಟ್ಲಿ, ಕಳೆದ ಐದು ವರ್ಷದಲ್ಲಿ ಅವರ ನೇತೃತ್ವದ ಸರ್ಕಾರದಲ್ಲಿ ಭಾಗಿಯಾಗಿದ್ದುದು ಅತ್ಯಂತ ಗೌರವ ಮತ್ತು ಕಲಿಕೆಯ ಅನುಭವವನ್ನು ನೀಡಿದೆ. ಎನ್ಡಿಎ ಸರ್ಕಾರ ನನಗೆ ಜವಾಬ್ದಾರಿಗಳನ್ನು ನೀಡಿ ಆಶಿರ್ವದಿಸಿದೆ, ಪ್ರತಿಪಕ್ಷದಲ್ಲಿದ್ದಾಗಲೂ ಜವಾಬ್ದಾರಿಗಳನ್ನು ಪಡೆದುಕೊಂಡಿದೆ. ಇದಕ್ಕಿಂತ ಹೆಚ್ಚಿನದನ್ನು ಬಯಸಲು ಏನೂ ಇಲ್ಲ ಎಂದಿದ್ದಾರೆ.
“ಕಳೆದ 18 ತಿಂಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದ್ದು, ಅದರಿಂದ ನನ್ನನ್ನು ಹೊರತರುವುದು ನನ್ನ ವೈದ್ಯರಿಗೂ ಸಾಧ್ಯವಾಗಿಲ್ಲ. ಹೀಗಾಗಿ ನನ್ನನ್ನು ಜವಾಬ್ದಾರಿಯಿಂದ ಮುಕ್ತಗೊಳಿಸಿ ಎಂದು ಮನವಿ ಮಾಡುತ್ತೇನೆ. ಇದರಿಂದ ನನಗೆ ನನ್ನ ಚಿಕಿತ್ಸೆ ಮತ್ತು ಆರೋಗ್ಯದ ಕಡೆ ಗಮನ ನೀಡುವುದು ಸಾಧ್ಯವಾಗಲಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.