ಭುವನೇಶ್ವರ: ಒರಿಸ್ಸಾದ ಮುಖ್ಯಮಂತ್ರಿಯಾಗಿ ಸತತ ಐದನೆಯ ಬಾರಿಗೆ ನವೀನ್ ಪಟ್ನಾಯಕ್ ಅವರು ಬುಧವಾರ ಬೆಳಿಗ್ಗೆ ಪ್ರಮಾಣವಚನವನ್ನು ಸ್ವೀಕಾರ ಮಾಡಿದರು.
ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಒರಿಸ್ಸಾ ರಾಜ್ಯಪಾಲ ಗಣೇಶ್ ಲಾಲ್ ಅವರು ಪಟ್ನಾಯಕ್ ಅವರ ಶಿಫಾರಸ್ಸಿನ ಮೇರೆಗೆ ಮಂಗಳವಾರ ಸಂಜೆ 11 ಸಂಪುಟ ಸಚಿವರನ್ನು ಮತ್ತು 9 ರಾಜ್ಯ ಖಾತೆ ಸಚಿವರನ್ನು ನೇಮಕಗೊಳಿಸಿದರು. ಇವರೆಲ್ಲರೂ ಪಟ್ನಾಯಕ್ ಜೊತೆಗೆ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದುವರೆಗೆ ಪಶ್ಚಿಮಬಂಗಾಳದ ಜ್ಯೋತಿ ಬಸು ಮತ್ತು ಸಿಕ್ಕಿಂನ ಪವಣ್ ಚಾಮ್ಲಿಂಗ್ ಮಾತ್ರ ಐದು ಅವಧಿಗೆ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಈ ಸಾಲಿಗೆ ನವೀನ್ ಪಟ್ನಾಯಕ್ ಸೇರ್ಪಡೆಗೊಳ್ಳುತ್ತಿದ್ದಾರೆ.
ಒರಿಸ್ಸಾದಲ್ಲಿ ಅತಂತ್ರ ವಿಧಾನಸಭೆ ಬರಬಹುದು ಎಂದು ಸಮೀಕ್ಷೆಗಳು ಹೇಳಿದರೂ ಕೂಡ 112 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಡಿ ಒರಿಸ್ಸಾದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. 2014ಕ್ಕಿಂತ ಅದು ಕೇವಲ ನಾಲ್ಕು ಸ್ಥಾನಗಳನ್ನು ಕಡಿಮೆ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.