ಮುನಿಚ್ : ಜರ್ಮನಿಯಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ISSF) ವರ್ಲ್ಡ್ ಕಪ್ ರೈಫಲ್ ಮತ್ತು ಪಿಸ್ತೂಲ್ ಟೂರ್ನಮೆಂಟ್ನಲ್ಲಿ ಭಾರತೀಯರು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯನ್ನು ಜಯಿಸಿರುವ ಅಪೂರ್ವಿ ಚಾಂಡೇಲಾ ಅವರು ಬಂಗಾರದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 251 ಪಾಯಿಂಟ್ ಗಳಿಸುವ ಮೂಲಕ ಚೀನಾದ ಆಟಗಾರ್ತಿಯನ್ನು ಫೈನಲ್ನಲ್ಲಿ ಇವರು ಮಣಿಸಿದ್ದಾರೆ. ಚೀನಾ ಆಟಗಾರ್ತಿ 250.8 ಪಾಯಿಂಟ್ ಗಳಿಸಿದ್ದಾರೆ.
ಇದು ಅಪೂರ್ವಿ ಈ ವರ್ಷ ಪಡೆದ ಎರಡನೇಯ ISSF ವರ್ಲ್ಡ್ ಕಪ್ ಬಂಗಾರದ ಪದಕವಾಗಿದೆ. ಫೆಬ್ರವರಿ ತಿಂಗಳಿನಲ್ಲಿ ನಡೆದ ISSF ವಲ್ಡ್ ಕಪ್ನಲ್ಲಿ ಅವರು ಬಂಗಾರ ಜಯಿಸಿದ್ದರು.
It’s GOLD again for world no.1 @apurvichandela as she wins the women’s 10m Air Rifle at the @ISSF_Shooting World Cup in Munich. This is her second wc Gold on the trot in the event. Congratulations! #champion
— NRAI (@OfficialNRAI) May 26, 2019
ಮತ್ತೋರ್ವ ಭಾರತೀಯ ಆಟಗಾರ್ತಿ ಇಲವೆನಿಲ್ ವಲರಿವನ್ ಫೈನಲ್ ತಲುಪಿದ್ದಾರೆ. ಆದರೆ ಚೀನಾ ಆಟಗಾರ್ತಿಯ ಎದುರು ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ರಹಿ ಸರ್ನೊಬೊಟ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.