ನವದೆಹಲಿ: ಭಾರತೀಯ ವಾಯುಸೇನೆಯ ಮೊತ್ತಮೊದಲ ಮಹಿಳಾ ಫೈಟರ್ ಪೈಲೆಟ್ ಭಾವನಾ ಕಾಂತ್ ಅವರು ತಮ್ಮ ಹಿರಿಮೆಗೆ ಮತ್ತೊಂದು ಗರಿಯನ್ನು ಮೂಡಿಸಿಕೊಂಡಿದ್ದಾರೆ. MiG-21 ಬಿಸನ್ ಏರ್ಕ್ರಾಫ್ಟ್ನ ಡೇ ಆಪರೇಶನಲ್ ಸಿಲೆಬಸ್ ಅನ್ನು ಪೂರ್ಣಗೊಳಿಸಿದ್ದಾರೆ.
ಫೈಟರ್ ಏರ್ಕ್ರಾಫ್ಟ್ ಮೂಲಕ ಒಂದು ದಿನ ಕಾರ್ಯಾಚರಣೆ ನಡೆಸಲು ಅರ್ಹತೆ ಪಡೆದ ಮೊದಲ ಮಹಿಳಾ ಫೈಟರ್ ಪೈಲೆಟ್ ಆಗಿದ್ದಾರೆ. 2017ರ ನವೆಂಬರಿನಲ್ಲಿ ಇವರು ಫೈಟರ್ ಸ್ಕ್ವಾಡ್ರಮ್ ಸೇರಿದ ಇವರು, 2018ರಲ್ಲಿ ಮೊದಲ ಬಾರಿಗೆ ಮಿಗ್-21 ಬಿಸನ್ ಅನ್ನು ಏಕಾಂಗಿಯಾಗಿ ಹಾರಿಸಿದರು.
ಪ್ರಸ್ತುತ ಭಾವನಾ ಅವರು ಬಿಕಾನೇರ್ನ ನಲ್ ಬೇಸ್ನಲ್ಲಿ ನಿಯೋಜನೆಗೊಂಡಿದ್ದಾರೆ. ನೈಟ್ ಮಿಷನ್ ತರಬೇತಿಯನ್ನು ಪಡೆದುಕೊಂಡ ಬಳಿಕ ಅವರು ರಾತ್ರಿವೇಳೆಯಲ್ಲಿ ಫೈಟರ್ ಯುದ್ಧ ವಿಮಾನಗಳನ್ನು ಹಾರಿಸುವ ಸಾಮರ್ಥ್ಯವನ್ನು ಪಡೆಯಲಿದ್ದಾರೆ.
2016ರ ಜುಲೈನಲ್ಲಿ ಫ್ಲಯಿಂಗ್ ಆಫೀಸರ್ಗಳಾಗಿ ನಿಯೋಜನೆಗೊಂಡ ವಾಯುಸೇನೆಯ ಮೂವರು ಮಹಿಳಾ ಫೈಟರ್ಗಳ ಪೈಕಿ ಭಾವನಾ ಕೂಡ ಒಬ್ಬರು. ಅವನಿ ಚತುರ್ವೇದಿ, ಮಮೋಹನಾ ಸಿಂಗ್ ಇತರ ಇಬ್ಬರು ಪೈಲೆಟ್ಗಳಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.