ನಾಗಪುರ: ಮನುಕುಲದ ಒಳಿತಿಗಾಗಿ ರಾಷ್ಟ್ರ ಸೇವೆಯಲ್ಲಿ ನಿರತವಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ 25 ದಿನಗಳ ಶಿಬಿರ ಮಹಾರಾಷ್ಟ್ರದ ನಾಗಪುರದಲ್ಲಿ ಗುರುವಾರದಿಂದ ಆರಂಭಗೊಂಡಿದೆ. ದೇಶದಾದ್ಯಂತದ ಸುಮಾರು 800 ಮಂದಿ ಸ್ವಯಂಸೇವಕರು ಇದರಲ್ಲಿ ಭಾಗಿಯಾಗಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ಭಯ್ಯಾಜಿ ಜೋಶಿಯವರು, ರೇಷ್ಮೆಭಾಗ್ನ ಡಾಕ್ಟರ್ ಹೆಡ್ಗೆವರ್ ಸ್ಮೃತಿ ಮಂದಿರದಲ್ಲಿ ನಡೆಯಲಿರುವ ತೃತೀಯ ವರ್ಷದ ಸಂಘ ಶಿಕ್ಷಾ ವರ್ಗಕ್ಕೆ ಚಾಲನೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಅವರು, ಇಡೀ ಸಮಾಜವನ್ನು ಸಂಘಟಿಸುವ ಮೂಲಕ ದೇಶವನ್ನು ಮಹಾನ್ ವೈಭವದತ್ತ ಕೊಂಡೊಯ್ಯುವುದು ಆರ್.ಎಸ್.ಎಸ್. ಧ್ಯೇಯವಾಗಿದೆ ಎಂದರು.
Purity and commitment of mind is the core teaching of Sangh Shiksha Varg – Bhaiyyaji Joshihttps://t.co/JUeRtaTaLV
— RSS (@RSSorg) May 23, 2019
Tritiya Varsh Sangh Shiksha Varg ( 3rd yr training camp ) started in Nagpur today. Sarkaryavaah Sri Bhayyaji Joshi, Varg Sarvadhikari Sri Anirudha Deshpande, Varg Palak Sri Jagdishji,Varg Karyavaah Sri Bharat ji were present on the occasion. https://t.co/JUeRtaTaLV pic.twitter.com/DGzn44bRoO
— RSS (@RSSorg) May 23, 2019
“ರಾಷ್ಟ್ರದ ಪ್ರಗತಿಗಾಗಿ ವಿಶಾಲ ದೃಷ್ಟಿಕೋನ ಅಗತ್ಯ. ಪ್ಯಾನ ಇಂಡಿಯಾ ದೃಷ್ಟಿಕೋನ ಮತ್ತು ಪ್ಯಾನ್ ಇಂಡಿಯನೆಸ್ ಇವೆರಡು ವಿಭಿನ್ನ ವಿಷಯಗಳಾಗಿದ್ದು, ಒಬ್ಬ ಸ್ವಯಂಸೇವಕನಾಗಿ ನೀವು ಪ್ಯಾನ್ ಇಂಡಿಯಾ ದೃಷ್ಟಿಕೋನ ಹೊಂದಿರುತ್ತೀರಿ. ಆದರೆ ಈ ತರಬೇತಿ ನಿಮಗೆ ಪ್ಯಾನ್-ಇಂಡಿಯನೆಸ್ನ ಅನುಭವ ನೀಡುತ್ತದೆ ಇದು ನಿಮ್ಮ ಪ್ಯಾನ್ ಇಂಡಿಯಾ ದೃಷ್ಟಿಕೋನವನ್ನು ಇನಷ್ಟು ವಿಸ್ತರಿಸುತ್ತದೆ ಎಂದು ಜೋಶಿ ಹೇಳಿದರು.
ಅರ್.ಎಸ್.ಎಸ್. ಸಂಸ್ಥಾಪಕ ಹೆಡ್ಗೇವಾರ್ ಅವರ ಪ್ರಕಾರ, ಸಂಘದ ದೃಷ್ಟಿಕೋನವನ್ನು ಸಮಾಜಕ್ಕೆ ದೊಡ್ಡಮಟ್ಟದಲ್ಲಿ ತಲುಪಿಸುವಂತಹ ಸ್ವಯಂಸೇವಕರನ್ನು ಸಿದ್ಧಪಡಿಸುವುದು ತರಬೇತಿಯ ಉದ್ದೇಶವಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.