ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್ ಎನ್ಡಿಎ ಮತ್ತೊಮ್ಮೆ ಅಧಿಕಾರಕ್ಕೇರುವುದನ್ನು ಖಚಿತಪಡಿಸಿದೆ. ಈ ಹಿನ್ನಲೆಯಲ್ಲಿ ಸೆನ್ಸೆಕ್ಸ್ 808 ಪಾಯಿಂಟ್ ಮೀರಿ ಜಿಗಿತವನ್ನು ಕಾಣುತ್ತಿದೆ.
808 ಪಾಯಿಂಟ್ ಅಥವಾ ಶೇ.2.07 ಅನ್ನು ಪಡೆದ ಬಳಿಕ BSE S&P ಸೆನ್ಸೆಕ್ಸ್ 40,000 ಲೆವೆಲ್ನಲ್ಲಿ ಟ್ರೇಡಿಂಗ್ ಆಗುತ್ತಿದೆ. NSE Nifty 236.30 ಪಾಯಿಂಟ್ ಅಥವಾ ಶೇ.2.01 ಅನ್ನು ಪಡೆದು 12,000 ಲೆವೆಲ್ನಲ್ಲಿ ಟ್ರೇಡಿಂಗ್ ಆಗುತ್ತಿದೆ.
ಸ್ಥಿರ ಸರ್ಕಾರದ ಸೂಚನೆ ದೊರೆಯುತ್ತಿದ್ದಂತೆ ಹೂಡಿಕೆದಾರರ ವಿಶ್ವಾಸ ಗರಿಗೆದರಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
300ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆಯನ್ನು ಪಡೆದುಕೊಂಡಿರುವ ಎನ್ಡಿಎ ಮತ್ತೊಂದು ಅವಧಿಗೆ ಸರ್ಕಾರವನ್ನು ರಚಿಸುವುದು ಬಹುತೇಕ ಖಚಿತಗೊಂಡಿದೆ. ಬಿಜೆಪಿ ಪಕ್ಷವೊಂದೇ ಸರಳ ಬಹುಮತವನ್ನು ಪಡೆದುಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.