ಚೆನ್ನೈ: 8 ವರ್ಷದ ಚೆನ್ನೈ ಬಾಲಕನೊಬ್ಬ 106 ಭಾಷೆಗಳನ್ನು ಓದಬಲ್ಲ ಮತ್ತು ಬರೆಯಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾನೆ. ಇಂಟರ್ನೆಟ್ ಮತ್ತು ಯೂಟ್ಯೂಬ್ ಮೂಲಕ ಭಾಷೆಗಳನ್ನು ಆತ ಓದಲು ಮತ್ತು ಬರೆಯಲು ಕಲಿತುಕೊಂಡಿದ್ದಾನೆ. ಈತನ ಅತ್ಯಂತ ಅಪರೂಪದ ಸಾಧನೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ.
ನಿಯಲ್ ತೊಗುಲುವ 106 ಭಾಷೆಗಳನ್ನು ಬರೆಯುವ ಮತ್ತು ಓದುವ ಸಿದ್ಧಿಯನ್ನು ಗಿಟ್ಟಿಸಿಕೊಂಡ ಬಾಲಕನಾಗಿದ್ದಾನೆ. ಮಾತ್ರವಲ್ಲದೇ, ಈತ ಮಾತನಾಡುವ ಯಾವುದೇ ಭಾಷೆಯ ಉಚ್ಚಾರಣೆಯನ್ನು ತಿಳಿಯಲು ಬಳಸುವ ಸಾರ್ವತ್ರಿಕ ಮಾರ್ಗವಾದ ಇಂಟರ್ನ್ಯಾಷನಲ್ ಫೋನೆಟಿಕ್ ಆಲ್ಫಾಬೆಟ್ (ಐಪಿಎ) ಅನ್ನು ಸಹ ಕಲಿತುಕೊಂಡಿದ್ದಾನೆ.
ಈತ 106 ಭಾಷೆಗಳನ್ನು ಬರೆಯಲು ಮತ್ತು ಓದಲು ಶಕ್ತವಾಗಿದ್ದಾನೆ. 10 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲವನಾಗಿದ್ದಾನೆ ಮತ್ತು ಇನ್ನೂ ಐದು ಭಾಷೆಗಳನ್ನು ಮಾತನಾಡಲು ಕಲಿಯುತ್ತಿದ್ದಾನೆ.
ಅಗಾಧ ಬುದ್ಧಿಮತ್ತೆ ಇರುವ ಈ ಬಾಲಕ ತನ್ನ ಫೋಷಕರಿಗೂ ಭಾಷೆಯ ಉಚ್ಛಾರಣೆಯನ್ನು ಕಲಿಸಿಕೊಡುತ್ತಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.