ನವದೆಹಲಿ: ಭಾರತೀಯ ವಾಯುಸೇನೆಯು ಜೈಸಲ್ಮೇರ್ನ ಪೋಖ್ರಾನ್ ಟೆಸ್ಟ್ ಫೈರಿಂಗ್ ರೇಂಜ್ನಲ್ಲಿ ಅಪ್ಗ್ರೇಡ್ ಮಾಡಲಾದ ಜಾಗ್ವಾರ್ ಫೈಟರ್ ಏರ್ಕ್ರಾಫ್ಟ್ ಮೂಲಕ 1,000 ಪೌಂಡ್ ತೂಕದ CBU-105 ಸ್ಮಾರ್ಟ್ ಆ್ಯಂಟಿ-ಟ್ಯಾಂಕ್ ಗೈಡೆಡ್ ಬಾಂಬ್ ಅನ್ನು ಅತ್ಯಂತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ.
ಯುಎಸ್ ಮೂಲದ ಟೆಕ್ಸ್ಟ್ರಾನ್ ಡಿಫೆನ್ಸ್ ಸಿಸ್ಟಮ್ ಮತ್ತು ವಾಯುಸೇನೆ ಜಂಟಿಯಾಗಿ ಇದನ್ನು ತಯಾರಿಸಿದ್ದು, ಈ ಲೆಥಾಲ್ ಬಾಂಬ್ ನಿಖರವಾಗಿ ಗುರಿಯನ್ನು ಹೊಡೆಯುವಂತೆ ಜಿಪಿಎಸ್ನಿಂದ ಸಜ್ಜುಗೊಂಡಿದೆ. ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಲ್ಲೂ ಇದನ್ನು ದಿನ ಮತ್ತು ರಾತ್ರಿಯ ವೇಳೆಯಲ್ಲಿ ಬಳಸಬಹುದಾಗಿದೆ.
ಪರೀಕ್ಷೆಯ ಸಮಯದಲ್ಲಿ, ತಯಾರಕ ಸಂಸ್ಥೆ ಟೆಕ್ರಾನ್ ಡಿಫೆನ್ಸ್ ಸಿಸ್ಟಮ್ ಮತ್ತು ವಾಯುಸೇನೆಯ ಎರಡೂ ಅಧಿಕಾರಿಗಳು ಬಾಂಬಿನ ನಿಖರತೆಯನ್ನು ಗಮನಿಸುವ ಸಲುವಾಗಿ ಪೋಖ್ರಾನ್ ವ್ಯಾಪ್ತಿಯಲ್ಲಿ ಉಪಸ್ಥಿತರಿದ್ದರು.
2010 ರಲ್ಲಿ ಭಾರತ ಸರ್ಕಾರವು 512 ಇಂತಹ CBU-105 ಬಾಂಬುಗಳಿಗೆ ಮೊದಲ ಬಾರಿಗೆ ಆರ್ಡರ್ ನೀಡಿತು. ಅಲ್ಲದೇ, ಈ ಬಾಂಬುಗಳನ್ನು ಸರಿಹೊಂದಿಸಲು ಸಾಧ್ಯವಾಗುವಂತೆ ಜಾಗ್ವಾರ್ ವಿಮಾನದ ಸಾಮರ್ಥ್ಯವನ್ನು ಡ್ರೈನ್ III ನ್ಯಾವಿಗೇಷನ್ ಮತ್ತು ಕಾಂಬಾತ್ ಸಿಸ್ಟಮ್ ಮೂಲಕ ಅಪ್ಗ್ರೇಡ್ ಮಾಡಲಾಯಿತು. ಪರಿಣಾಮವಾಗಿ ಅಪ್ಗ್ರೇಡ್ ಮಾಡಿದ ಜಾಗ್ವಾರ್ ಒಂದೇ ಓಟದಲ್ಲಿ 4-6 CBU-105 ಬಾಂಬುಗಳನ್ನು ಸಾಗಿಸಬಲ್ಲದು.
ಈ ಬಾಂಬುಗಳು ಮತ್ತು ಡ್ರೈನ್ III ಸಂಚಾರದೊಂದಿಗೆ, ಜಾಗ್ವಾರ್ ಅನ್ನು ಈಗ ಡೀಪ್ ಪೆನೆಟ್ರೇಶನ್ ಸ್ಟ್ರೈಕ್ ಏರ್ ಕ್ರಾಫ್ಟ್ ಎಂದು ಕರೆಯಬಹುದು. ಇದು ಭಯೋತ್ಪಾದಕ ಶಿಬಿರಗಳು, ಏರ್ ಬೇಸ್ ಮತ್ತು ಯುದ್ಧನೌಕೆಗಳನ್ನು ತನ್ನ ಹೊಸ ತಲೆಮಾರಿನ ಲೇಸರ್ ಗೈಡೆಡ್ ಬಾಂಬುಗಳು ಮತ್ತು CBU-105 ಸೆನ್ಸರ್ ಬೆರೆತ ಬಾಂಬುಗಳಂತಹ ಆನ್ ಬೋರ್ಡ್ ವೆಪನ್ಸ್ಗಳ ಮೂಲಕ ಧ್ವಂಸ ಮಾಡಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.