ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಚುನಾವಣಾ ಪ್ರಚಾರ ಭಾರತೀಯ ಇತಿಹಾಸದಲ್ಲೇ ಅತ್ಯಂತ ವ್ಯಾಪಕವಾಗಿತ್ತು. ಸುಮಾರು 1.5 ಲಕ್ಷ ಕಿಲೋಮೀಟರ್ ಪ್ರಯಾಣ ನಡೆಸಿದ ಅವರು, 142 ಸಾರ್ವಜನಿಕ ಸಮಾವೇಶಗಳನ್ನು ಆಯೋಜನೆಗೊಳಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
46 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಹಾಗೂ 18 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನದಲ್ಲೂ ಮೋದಿ ಹಿಂಜರಿಯದೆ ವ್ಯಾಪಕವಾದಂತಹ ಸಮಾವೇಶವನ್ನು ನಡೆಸಿದ್ದಾರೆ. ಅಲ್ಲದೆ 7 ಸಾವಿರ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದಾರೆ.
“ಸ್ವಾತಂತ್ರ್ಯ ಬಂದ ಬಳಿಕದ ಅತ್ಯಂತ ಶ್ರಮದಾಯಕ ಮತ್ತು ವ್ಯಾಪಕ ಚುನಾವಣೆ ಇದಾಗಿತ್ತು. ಮೋದಿಯವರ ಜನಸಂಪರ್ಕ ಅಭೂತಪೂರ್ವವಾಗಿತ್ತು. ಫೆಬ್ರವರಿಯಿಂದ ಮೇ ತಿಂಗಳೊಳಗೆ ಮೋದಿ ಭೇಟಿ ನೀಡದ ಭಾರತದ ಭಾಗವೇ ಇಲ್ಲ” ಎಂದಿದ್ದಾರೆ.
ಮಾರ್ಚ್ 28ರಂದು ಮೀರತ್ನಲ್ಲಿ ಮೋದಿಯವರ ಪ್ರಚಾರ ಕಾರ್ಯ ಆರಂಭಗೊಂಡಿತು, ಅಲ್ಲಿಂದ ನಿನ್ನೆಯವರೆಗೂ ಅವರು 142 ಸಾರ್ವಜನಿಕ ಸಮಾವೇಶಗಳನ್ನು ಮತ್ತು ನಾಲ್ಕು ರೋಡ್ ಶೋಗಳನ್ನು ನಡೆಸಿದ್ದಾರೆ. ಈ ಸಮಾವೇಶಗಳಲ್ಲಿ ಅವರು ಸುಮಾರು 1.5 ಕೋಟಿ ಜನರನ್ನು ನೇರವಾಗಿ ಸಂಪರ್ಕಿಸಿದ್ದಾರೆ ಎಂದು ಶಾ ಹೇಳಿದ್ದಾರೆ.
ಅಲ್ಲದೇ ತಾನು 312 ಲೋಕಸಭಾ ಕ್ಷೇತ್ರಗಳನ್ನು ಉದ್ದೇಶಿಸಿ ಮಾತನಾಡಿದ್ದೇನೆ, 161 ಸಮಾವೇಶಗಳನ್ನು ನಡೆಸಿದ್ದೇನೆ, 18 ರೋಡ್ ಶೋಗಳನ್ನು ನಡೆಸಿದ್ದೇನೆ, 1.58 ಲಕ್ಷ ಕಿಮೀ ಸಂಚರಿಸಿದ್ದೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.