ಕಾಬೂಲ್: ರಕ್ಷಣಾ ಸಂಬಂಧವನ್ನು ವೃದ್ಧಿಸುವ ಮೂಲಕ ಅಫ್ಘಾನಿಸ್ಥಾನದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಬಲಗೊಳಿಸಲು ಭಾರತ ಮುಂದಾಗಿದೆ. ಇದೀಗ ಆ ದೇಶಕ್ಕೆ ಮಿ-24 ಅಟ್ಯಾಕ್ ಹೆಲಿಕಾಫ್ಟರ್ನ ಮೊದಲ ಜೋಡಿಯನ್ನು ಹಸ್ತಾಂತರ ಮಾಡಿದೆ.
ಅಫ್ಘಾನಿಸ್ಥಾನದಲ್ಲಿನ ಭಾರತೀಯ ರಾಯಭಾರಿ ವಿನಯ್ ಕುಮಾರ್ ಅವರು ಅಲ್ಲಿನ ರಕ್ಷಣಾ ಸಚಿವ ಅಸಾದುಲ್ಲಾಹ ಖಲೇದ್ ಅವರಿಗೆ ಮಿ-24 ಅಟ್ಯಾಕ್ ಹೆಲಿಕಾಫ್ಟರ್ ಅನ್ನು ಹಸ್ತಾಂತರ ಮಾಡಿದರು.
ಆ ದೇಶದ ಪ್ರತಿ ಕಷ್ಟದಲ್ಲೂ ಉತ್ತಮ ಸ್ನೇಹಿತನಂತೆ ಅಫ್ಘಾನಿಸ್ಥಾನಕ್ಕೆ ಸಾಥ್ ನೀಡುತ್ತಿರುವ ಭಾರತ, 2015ರ ಡಿಸೆಂಬರಿನಲ್ಲಿ ಮೊದಲ ಮಿ-24 ಹೆಲಿಕಾಫ್ಟರ್ ಅನ್ನು ಹಸ್ತಾಂತರ ಮಾಡಿತ್ತು.
ಜುಲೈ ವೇಳೆಗೆ ಭಾರತ ಅಫ್ಘಾನಿಸ್ಥಾನಕ್ಕೆ ನಾಲ್ಕು ಗನ್ಶಿಪ್ ಹೆಲಿಕಾಫ್ಟರ್ಗಳನ್ನು ಪೂರೈಕೆ ಮಾಡುವ ನಿರೀಕ್ಷೆ ಇದೆ. ಭಾರತ ಅಫ್ಘಾನಿಸ್ಥಾನಕ್ಕೆ ಅತೀಹೆಚ್ಚು ಕೊಡುಗೆಗಳನ್ನು ನೀಡುವ ದೇಶವಾಗಿದ್ದು, 2001ರಿಂದ ಸುಮಾರು $3ಬಿಲಿಯನ್ ಅನುದಾನ ನೀಡಿದೆ.
ಭಾರತ ಪೂರೈಕೆ ಮಾಡುವ ಹೆಲಿಕಾಫ್ಟರ್ ಅಫ್ಘಾನಿಸ್ಥಾನಕ್ಕೆ ತಾಲಿಬಾನ್ ವಿರುದ್ಧ ಹೋರಾಡುವಲ್ಲಿ ಹೆಚ್ಚಿನ ಬಲ ನೀಡಲಿದೆ.
Two Mi-35 helicopters have been given to the Afghan Air Force by India to fight terrorism and counter insurgency. pic.twitter.com/a6jgQYv03i
— Asadullah Khalid (@AsadullahKhaled) May 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.