ಮುಂಬಯಿ: ಮಹಾರಾಷ್ಟ್ರವು ಜಾನುವಾರು ಸ್ನೇಹಿ ರಾಜ್ಯವಾಗುವತ್ತ ಹೆಜ್ಜೆ ಇಡುತ್ತಿದೆ. ಗೋಶಾಲೆಗಳ ಮೇವು ಮತ್ತು ನೀರಿಗಾಗಿ ನೀಡುತ್ತಿರುವ ಅನುದಾನವನ್ನು ಅದು ಹೆಚ್ಚಳಗೊಳಿಸಿದೆ.
ಪ್ರಸ್ತುತ, ಮಹಾರಾಷ್ಟ್ರದಲ್ಲಿ 1,417 ಗೋಶಾಲೆಗಳಿವೆ, ಇದರಲ್ಲಿ 9.39 ಲಕ್ಷ ಹಸುಗಳಿವೆ. ಇದುವರೆಗೆ, ದೊಡ್ಡ ಹಸುಗಳ ನೀರು ಮತ್ತು ಮೇವಿಗಾಗಿ ರೂ. 90ನ್ನು ನೀಡಲಾಗುತ್ತಿತ್ತು, ಕರುಗಳಿಗೆ ರೂ.45 ನೀಡಲಾಗುತ್ತಿತ್ತು, ಇದೀಗ ರೂ.10 ಅನ್ನು ಹೆಚ್ಚಳ ಮಾಡಲಾಗಿದೆ.
ಪಶಸಂಗೋಪನಾ ಸಚಿವ ಚಂದ್ರಕಾಂತ್ ಪಾಟೀಲ್ ಅವರು ಈ ಬಗ್ಗೆ ಘೋಷಣೆಯನ್ನು ಮಾಡಿದ್ದು, “ಗೋಶಾಲೆಯಲ್ಲಿನ ದೊಡ್ಡ ಹಸುಗಳು ರೂ.100 ಮತ್ತು ಕರುಗಳು ರೂ.50 ಅನ್ನು ಮೇವು ಮತ್ತು ನೀರಿಗಾಗಿ ಪಡೆಯಲಿವೆ” ಎಂದಿದ್ದಾರೆ.
चारा छावण्यातील जनावरांना आता 90 ऐवजी 100 रुपये मिळणार https://t.co/UqTOnZqL4Y
— Chowkidar Chandrakant Patil (@ChDadaPatil) May 15, 2019
ಗೋವುಗಳಿಗೆ ನೀಡುವ ಹಣ ಮೇವುಗಳ ಖರೀದಿ, ಮೇವುಗಳ ಸಾಗಾಣೆಗೆ ಬಳಕೆ ಮಾಡಲಾಗುತ್ತದೆ. ದೊಡ್ಡ ಹಸುವಿಗೆ ನಿತ್ಯ 18 ಕೆಜಿ ಮೇವು, ಕರುವಿಗೆ ವಾರಕ್ಕೆ ಮೂರು ಬಾರಿ 1 ಕೆಜಿ ಮೇವು ಅನ್ನು ನೀಡಲಾಗುತ್ತದೆ.
ಸಚಿವ ಸಂಪುಟದ ಉಪ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
4,331 ಗ್ರಾಮಗಳು ಮತ್ತು 9,470 ವಾಡೆಗಳಿಗೆ 5,493 ವಾಟರ್ ಟ್ಯಾಂಕುಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.