ನವದೆಹಲಿ: ದೇಶಸೇವೆ ಮಾಡುವ ಅದಮ್ಯ ಉತ್ಸಾಹ ಇರುವ ಯುವ ಜನತೆಗೆ ಭಾರತೀಯ ನೌಕಾ ಸೇನೆಯು ಮಹತ್ವದ ಅವಕಾಶವೊಂದನ್ನು ಕಲ್ಪಿಸಿದೆ. ಪದವಿ ಮುಗಿದ ಬಳಿಕ ಅಧಿಕಾರಿಗಳಾಗಿ ನೇರ ಪ್ರವೇಶವನ್ನು ಪಡೆಯಲು ಅವಕಾಶ ನೀಡುವ ಸಲುವಾಗಿ ನೌಕೆಯು ಇದೇ ಮೊದಲ ಬಾರಿಗೆ ಪ್ರವೇಶ ಪರೀಕ್ಷೆಯನ್ನು ಆಯೋಜನೆಗೊಳಿಸುತ್ತಿದೆ. ಕಂಪ್ಯೂಟರ್ ಆಧಾರಿತ INET(ಆಫೀಸರ್ಸ್) ಎಕ್ಸಾಂ ಇದಾಗಿದ್ದು, ವರ್ಷದಲ್ಲಿ ಎರಡು ಬಾರಿ ಜರುಗಲಿದೆ. 2019ರ ಸೆಪ್ಟಂಬರ್ ತಿಂಗಳಿನಲ್ಲಿ ಮೊದಲ ಪರೀಕ್ಷೆ ಆಯೋಜನೆಗೊಳ್ಳಲಿದೆ.
ಇದೇ ಮೊದಲ ಬಾರಿಗೆ ನೌಕಾಸೇನೆಯು ಕಂಪ್ಯೂಟರ್ ಆಧಾರಿತ ಡೈರೆಕ್ಟ್ ಎಂಟ್ರಿ ಆಫೀಸರ್ಸ್ ಎಕ್ಸಾಂ ಅನ್ನು ಆಯೋಜನೆಗೊಳಿಸುತ್ತಿದೆ. ಇದೇ ರೀತಿ, ಯೂನಿವರ್ಸಿಟಿ ಎಂಟ್ರಿ ಸ್ಕೀಮ್(UES ) ಮತ್ತು ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ (CDS)) ಎಕ್ಸಾಂಗಳೂ ಮುಂದುವರೆಯಲಿದೆ.
ಟ್ವಿಟರ್ ಮೂಲಕ ನೌಕಾಸೇನೆಯ ಈ ವಿಷಯವನ್ನು ಬಹಿರಂಗಪಡಿಸಿದ್ದು, ” ಭಾರತೀಯ ನೌಕೆಯು ಇಂಡಿಯನ್ ನೇವಿ ಎಂಟ್ರೆನ್ಸ್ ಟೆಸ್ಟ್(ಆಫೀಸರ್ಸ್) ಅನ್ನು ಎಲ್ಲಾ ಪದವೀಧರ ಪ್ರವೇಶಗಳಿಗಾಗಿ ಪರಿಚಯಿಸುತ್ತಿದೆ. INET(ಆಫೀಸರ್ಸ್) ಅನ್ನು ವರ್ಷದಲ್ಲಿ ಎರಡು ಬಾರಿ ಆಯೋಜನೆಗೊಳಿಸಲಾಗುತ್ತದೆ. ಯೂನಿವರ್ಸಿಟಿ ಎಂಟ್ರಿ ಸ್ಕೀಮ್(UES ) ಮತ್ತು ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ (CDS)) ಎಕ್ಸಾಂಗಳೂ ಮುಂದುವರೆಯಲಿದೆ” ಎಂದಿದೆ.
ಈ ಹೊಸ ಪ್ರಕ್ರಿಯೆಯ ಅನ್ವಯ, ಪ್ರತಿ ಆರು ತಿಂಗಳಿಗೊಮ್ಮೆ ಜಾಹೀರಾತುಗಳನ್ನು ಪ್ರಕಟಗೊಳಿಸಲಾಗುತ್ತದೆ ಮತ್ತು ಅರ್ಜಿದಾರರು ತಮ್ಮ ಪರಿಗಣನೆಯ ಆಯ್ಕೆಯನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು. www.joinindiannavy.gov.in.ಗೆ ವಿಸಿಟ್ ಕೊಟ್ಟರೆ ಎಂಟ್ರಿ, ವಯಸ್ಸು, ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಲಭ್ಯವಾಗಲಿದೆ.
#IndianNavy introduces Indian Navy Entrance Test (Officers) for all graduate entries. INET (Officers) shall be conducted twice a year w.e.f Sep19. University Entry Scheme(UES) & Combined Defence Services (CDS) entries to continue as hitherto. Details @ https://t.co/nxJafk17bp pic.twitter.com/4EZfnjlnII
— SpokespersonNavy (@indiannavy) May 14, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.