ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST)ಯ ಸಕಾರಾತ್ಮಕ ಫಲಿತಾಂಶಗಳು ತೆರಿಗೆ ಮೂಲದ ಏರಿಕೆ ಮತ್ತು ಸುಲಲಿತ ಉದ್ಯಮಗಳ ಮೂಲಕ ಎಲ್ಲಾ ವಲಯದಲ್ಲೂ ಎದ್ದು ಕಾಣುತ್ತಿದೆ. 2017ರ ಜುಲೈನಲ್ಲಿ GST ಅನುಷ್ಠಾನಕ್ಕೆ ಬಂದಿತು. ಎರಡು ವರ್ಷಗಳ ಕಡಿಮೆ ಅವಧಿಯಲ್ಲೇ ಇದು ಸರಕು ಸಾಗಾಣೆಯ ದರ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಇದರಿಂದಾಗಿ ಗ್ರಾಹಕರಿಗೂ ಸರಕುಗಳು ಕಡಿಮೆ ದರದಲ್ಲಿ ಸಿಗುವಂತಾಗಿದೆ. ಕಂಪನಿಗಳ ಲಾಭವೂ ಏರಿಕೆಯಾಗಿದೆ.
GST ಯಿಂದಾಗಿ ಬಾರ್ಡರ್ ಚೆಕ್ಪೋಸ್ಟ್ಗಳು ರದ್ದುಗೊಂಡಿವೆ. ಇದರಿಂದಾಗಿ ಶೇ. 20ರಷ್ಟು ಪ್ರಮಾಣದಲ್ಲಿ ಹಣ ಉಳಿತಾಯವಾಗುತ್ತಿದೆ. ಸಮಯದ ಉಳಿತಾಯವೂ ಆಗುತ್ತಿದೆ. GSTಗೂ ಮುನ್ನ ಟೋಲ್ ಟ್ಯಾಕ್ಸ್ ಪಾವತಿಗೇ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಬೇಕಾಗಿತ್ತು.
ICRA ನಡೆಸಿದ 50 ಸಾರಿಗೆ ಕಂಪನಿಗಳ ಮತ್ತು 15 ಗ್ರಾಹಕ ಆಧಾರಿತ ಕಂಪೆನಿಗಳ ಮೇಲೆ ಅಧ್ಯಯನ ನಡೆಸಿದ ಪ್ರಕಾರ, GST ಅನುಷ್ಠಾನಗೊಂಡ ಬಳಿಕ ಸರಕು ಸಾಗಾಣೆಯ ಸಮಯದಲ್ಲೂ ಶೇ.18-20 ರಷ್ಟು ಉಳಿತಾಯವಾಗುತ್ತಿದೆ. ಮಾತ್ರವಲ್ಲ, ಅಂತರ್ ರಾಜ್ಯ ಗಡಿಗಳಲ್ಲಿ ನಡೆಯುತ್ತಿದ್ದ ಕಿರುಕುಳಗಳಿಂದಲೂ ಸಾಗಾಣೆದಾರರು ಮುಕ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಇ-ವೇ ಬಿಲ್ ಪರಿಚಯ ಮಾಡಿರುವುದು ಕೂಡ ಸಕಾರಾತ್ಮಕ ಪ್ರಭಾವವನ್ನು ಬೀರುತ್ತಿದೆ. ಪ್ರಕ್ರಿಯೆ ನಡೆಸಲು ಕಾಗದ ಪತ್ರಗಳನ್ನು ಬಳಸಬೇಕಾದ ಅನಿವಾರ್ಯತೆ ಈಗ ಇಲ್ಲ.
“ಬಾರ್ಡರ್ ಚೆಕ್ ಪೋಸ್ಟ್ಗಳನ್ನು ತೆಗೆದು ಹಾಕಲಾಗಿರುವುದರಿಂದ ಇಡೀ ದೇಶ ಏಕ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿದೆ. ಟ್ರಕ್ಗಳ ಸಂಚಾರ ಅವಧಿಯೂ ಗಣನೀಯವಾಗಿ ತಗ್ಗಿದೆ. ಸುಲಲಿತ ಸಾರಿಗೆ ನಮ್ಮ ಆದ್ಯತೆ” ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚಿಗೆ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.