ಮುಂಬಯಿ: CEAT ಇಂಟರ್ನ್ಯಾಷನಲ್ ಕ್ರಿಕೆಟ್ ಅವಾರ್ಡ್ಸ್ 2019ರ ಸಂದರ್ಭದಲ್ಲಿ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರು ಇಂಟರ್ನ್ಯಾಷನಲ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನಾ ಅವರು ಇಂಟರ್ನ್ಯಾಷನಲ್ ವುಮೆನ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿಯವರು ಏಕದಿನ ಪಂದ್ಯದಲ್ಲಿ 10843 ರನ್ಗಳನ್ನು ಗಳಿಸಿದ್ದಾರೆ, ಟೆಸ್ಟ್ ಕ್ರಿಕೆಟಿನಲ್ಲಿ 6613 ರನ್ಗಳನ್ನು ಪಡೆದುಕೊಂಡಿದ್ದಾರೆ. ಸ್ಮೃತಿ ಮಂಧಾನಾ ಅವರು ಏಕದಿನ ಪಂದ್ಯಗಳಲ್ಲಿ 1951 ರನ್ಗಳನ್ನು ಪಡೆದುಕೊಂಡಿದ್ದಾರೆ. 20-20ಯಲ್ಲಿ 1298 ರನ್ಗಳನ್ನು ಪಡೆದುಕೊಂಡಿದ್ದಾರೆ.
ಆಲ್ ರೌಂಡರ್ ಆಗಿದ್ದ ಮಹೀಂದರ್ ಅಮರನಾಥ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಬಾರಿ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಭಾರತದ ನಾಯಕತ್ವವನ್ನು ವಿರಾಟ್ ಕೊಹ್ಲಿ ಅವರು ವಹಿಸುತ್ತಿದ್ದಾರೆ. ಇದು ಕೊಹ್ಲಿ ಅವರಿಗೆ ನಾಯಕನಾಗಿ ಮೊದಲ ವಿಶ್ವಕಪ್. ಆದರೆ ಮಹೇಂದ್ರ ಸಿಂಗ್ ದೋನಿ ನೇತೃತ್ವದಲ್ಲಿ ಅವರು ವಿಶ್ವಕಪ್ ಪಂದ್ಯವನ್ನಾಡಿದ ಅನುಭವವನ್ನು ಹೊಂದಿದ್ದಾರೆ.
ಜೂನ್ 5ರಂದು ಭಾರತ ಈ ಬಾರಿಯ ವಿಶ್ವಕಪ್ ಪಂದ್ಯದ ಮೊದಲ ಆಟದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.