ಮಂಗಳೂರು: ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಸಚಿವ ಶಿವರಾಜ್ ತಂಗಡಗಿ ಬೆಂಬಲಿಗರು ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಸಚಿವ ಮತ್ತು ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಶನಿವಾರ ಮಂಗಳೂರಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ತಂಗಡಗಿ ಬೆಂಬಲಿಗರು ಭಾಗಿಯಾಗಿದ್ದು, ಈ ಬಗ್ಗೆ ನೈತಿಕ ಹೊಣೆ ಹೊತ್ತು ತಂಗಡಗಿ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಷಿ ನೇತೃತ್ವದಲ್ಲಿ ರಾಜ್ಯ ನಾಯಕರುಗಳಾದ ಬಿ.ಎಸ್. ಯಡಿಯೂರಪ್ಪ, ಕೆ. ಎಸ್. ಈಶ್ವರಪ್ಪ, ಬಿಜಿಪಿಯ ವಿವಿಧ ಮೋರ್ಚಾಗಳ ಕಾರ್ಯಕರ್ತರು ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ಕರಾವಳಿಯಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೇಧಿಸುವಲ್ಲಿ ಸರಕಾರ ವಿಫಲವಾಗಿದ್ದು, ಗೃಹಸಚಿವ ಜಾರ್ಜ್ ಅವರ ರಾಜೀನಾಮೆಗೂ ಬಿಜೆಪಿ ಅಗ್ರಹಿಸಲಿದೆ. ಇದರ ಅಂಗವಾಗಿ ಜೂ.28ರಂದು ಕೊಪ್ಪಳದಲ್ಲಿ ಪ್ರತಿಭಟನಾ ಧರಣಿ ನಡೆಸುವುದಲ್ಲದೇ, ಸೋಮವಾರದಿಂದ ಪ್ರಾರಂಭವಾಗುವ ಅಧೀವೇಶನದ ಒಳಗೂ ಹೊರಗೂ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಸ್ಟಾಫ್ ನರ್ಸ್ಗಳಿಗೆ ಕನಿಷ್ಟ ವೇತನ 17,500 ನೀಡಬೇಕೆಂದು ಸಚಿವ ಸಂಪುಟ ಸಭೆಯಲ್ಲಿ 12-2-13ರಂದು ನಿರ್ಧಾರ ಕೈಗೊಳ್ಳಲಾಗಿತ್ತು. ಈ ನಿರ್ಧಾರಕ್ಕೆ ಅಂದಿನ ಹಣಕಾಸು ಇಲಾಖೆ ಯಾವುದೇ ತಕರಾರು ಸಲ್ಲಿಸದ ಕಾರಣ ಈ ನಿರ್ಣಯವನ್ನು ಜಾರಿಗೊಳಿಸಲು ರಾಜ್ಯ ಮುಖ್ಯಕಾರ್ಯದರ್ಶಿ ಟಿಪ್ಪಣಿಯನ್ನು ಬರೆದಿದ್ದು ಚುನಾವಣೆ ನೀತಿ ಸಂಹಿತೆ ಫೋಷಣೆಯಾದುದರಿಂದ ಇದನ್ನು ಜಾರಿಗೊಳಿಸಲಿಲ್ಲ.
ಸಚಿವ ಯುಟಿ ಖಾದರ್ ಅವರಿಗೆ 6 ತಿಂಗಳ ಹಿಂದೆ ತಾನು ಈ ವಿಷಯದ ಬಗ್ಗೆ ಸೂಚನಾ ಪತ್ರ ನೀಡಿದ್ದೆ, ಅದಕ್ಕೆ ಉತ್ತರಿಸಿರಲಿಲ್ಲ. ಕಳೆದ ವಾರವೂ ಸೂಚನಾ ಪತ್ರ ನೀಡಿದ್ದೆ ತಾವು ಇದನ್ನು ಗಂಭೀರ ವಾಗಿ ಪರಿಗಣಿಸದಿದ್ದಲ್ಲಿ ತಾನು ಧರಣಿ ನಡೆಸುದಾಗಿ ತಿಳಿಸಿದ್ದೆ. ಅದನ್ನು ಸಚಿವರು ಕಡೆಗಣಿಸಿದ್ದರು. ಕರ್ನಾಟಕದಲ್ಲಿ ಒಟ್ಟು 3500 ಸ್ಟಾಫ್ ನರ್ಸ್ಗಳಿದ್ದು 148 ಮಂದಿ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 889ಜನರನ್ನು ರಾಜ್ಯ ವಲಯ ಮತ್ತು 2500 ನರ್ಮ್(ಮೆಚ್ಆರ್ ಎಂ) ಯೋಜನೆಯಡಿ ನಿಯೋಜನೆಗೊಳಿಸಿದ್ದು, ಅವರೆಲ್ಲರ ಉದ್ಯೋಗ ಖಾಯಂಮಾತಿ ಮಾಡಬೇಕು ಮತ್ತು ಕನಿಷ್ಠ ವೇತನ ನೀಡಬೇಕೆಂದು ಬಿಜೆಪಿ ಆಗ್ರಹಿಸಿತ್ತು. ಆದರೆ ಆರೋಗ್ಯ ಸಚಿವರು ಇದನ್ನು ಉಡುಪಿ ಮತ್ತು ಮಂಗಳೂರಿಗೆ ಸೀಮಿತಗೊಳಿಸಿ ಜನರ ದಾರಿ ತಪ್ಪಿಸುತ್ತಿದ್ದಾರೆ. ನಿನ್ನೆ ಸುರೇಶ್ ಕುಮಾರ್, ರಾಮೇಚಂದ್ರ ಗೌಡ ಮತ್ತು ವಿ.ಸೋಮಣ್ಣ ಮತ್ತಿತರರು ಯುಟಿ ಖಾದರ್ ಅವರನ್ನು ಬೇಟಿಯಾಗಲು ಸಮಯ ಕೇಳಿದ್ದರು ಆದರೆ ಶಾಸಕರು ಪೂರ್ವ ನಿಗಧಿತ ಕಾರ್ಯಕ್ರಮದ ನೆಪವೊಡ್ಡಿ ಅವರ ಅಹವಾಲುಗಳನ್ನು ಕೇಳದೆ ಪ್ರಜಾತಂತ್ರಕ್ಕೆ ಅಪಮಾನ ಎಸಗಿದ್ದಾರೆ ಎಂದು ಆರೋಪಿಸಿದರು.
ಅಲ್ಲದೇ ನಿನ್ನೆ ರಾತ್ರಿ 10 ಸಾವಿರ ರೂಪಾಯಿಗೆ ವೇತನವನ್ನು ಏರಿಸಿ ಆದೇಶ ಹೊರಡಿಸಿದ್ದು, ಇದರಿಂದ ಸಂಪುಟದ ಕನಿಷ್ಠ ವೇತನ 17,500 ರೂಪಾಯಿ ನಿರ್ಧಾರಕ್ಕೆ ಅಪಚಾರವಾಗಿದೆ ಎಂದು ಹೇಳಿದರು.
ಬೆಳಗಾವಿ ಅಧಿವೇಶನದ ವೇಳೆ ಸಚಿವರ ಕೊಠಡಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪತ್ರಿಕಾಗೋಷ್ಠೀಯಲ್ಲಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.