ಅಹ್ಮದಾಬಾದ್: ಗುಜರಾತ್ ಸರ್ಕಾರ ವಿವಾದಿತ ‘ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ ನಿಯಂತ್ರಣ ಮಸೂದೆ’ಯನ್ನು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರಗೊಳಿಸಿದೆ.
ಗೃಹ ಸಚಿವ ರಜನಿಕಾಂತ್ ಪಟೇಲ್ ಮಸೂದೆಯನ್ನು ವಿಧಾನಸಭೆಯಲ್ಲಿ ಅನುಮೋದಿಸಿದರು. ಬಳಿಕ ಇದರ ಮೇಲೆ ಸುಧೀರ್ಘ ಚರ್ಚೆ ನಡೆಯಿತು. ಮಸೂದೆಯಲ್ಲಿನ ಕೆಲವೊಂದು ವಿವಾದಿತ ಅಂಶಗಳನ್ನು ಕೈಬಿಡುವಂತೆ ಕಾಂಗ್ರೆಸ್ ಆಗ್ರಹಿಸಿದರೂ ಇದಕ್ಕೆ ಸಚಿವರು ಕಿವಿಗೊಡಲಿಲ್ಲ.
ಸಂಘಟಿತ ಅಪರಾಧ ನಿಯಂತ್ರಣಕ್ಕೆ ಈಗಿರುವ ಕಾನೂನು ಸಾಲದು, ಕಟ್ಟುನಿಟ್ಟಿನ ಕಾನೂನಿ ಅಗತ್ಯವಿದೆ ಎಂದು ರಜನಿಕಾಂತ್ ಪ್ರತಿಪಾದಿಸಿದರು. ಆದರೆ ಕಾಂಗ್ರೆಸ್ ಇದನ್ನೊಪ್ಪದೆ ಸಭಾತ್ಯಾಗ ಮಾಡಿತ್ತು. ಆದರೆ ಇದನ್ನು ಸರ್ಕಾರ ಬಹುಮತದೊಂದಿಗೆ ಅಂಗೀಕಾರಗೊಳಿಸಿತು.
ಈ ಮಸೂದೆಯ ಪ್ರಕಾರ ಪೊಲೀಸರು ಶಂಕಿತರ ದೂರವಾಣಿ ಸಂಭಾಷಣೆಯ ಮೇಲೆ ನಿಗಾ ಇಟ್ಟು, ಅದರ ಧ್ವನಿಮುದ್ರಣವನ್ನು ಕೋರ್ಟ್ ಮುಂದೆ ಸಾಕ್ಷಿಯಾಗಿ ನೀಡಬಹುದು. ಶಂಕಿತರು ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ನೀಡುವ ತಪ್ಪೊಪ್ಪಿಗೆ ಹೇಳಿಕೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು.
ಅಲ್ಲದೇ ಶಂಕಿತರನ್ನು ಈಗಿನ ನಿಯಮದಂತೆ ೧೫ ದಿನಗಳ ಬದಲು ೩೦ ದಿನಗಳವರೆಗೆ ಪೊಲೀಸರು ವಶದಲ್ಲಿ ಇಟ್ಟುಕೊಳ್ಳಬಹುದು. ದೋಷಾರೋಪ ಪಟ್ಟಿ ಸಲ್ಲಿಸಲು ಮೂರುತಿಂಗಳ ಬದಲು ಆರು ತಿಂಗಳು ಕಾಲಾವಕಾಶ ಇರುತ್ತದೆ. ಸೆಕ್ಷನ್ 20(4) ಪ್ರಕಾರ, ರ್ಕಾರಿ ವಕೀಲರ ವಾದವನ್ನು ಆಲಿಸದೇ ಆರೋಪಿಗೆ ಜಾಮೀನು ಕೊಡುವಂತಿಲ್ಲ ಅಥವಾ ಬಾಂಡ್ ಮೇಲೆ ಬಿಡುಗಡೆ ಮಾಡುವಂತಿಲ್ಲ.
ಈ ಮಸೂದೆ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ. ಇದರಿಂದ ಆರೋಪಿಗಳು ಕಿರುಕುಳಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂಬುದು ಹಲವರ ಆರೋಪವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.