ನವದೆಹಲಿ: ಮತಯಂತ್ರಗಳನ್ನು ಶೇ. 50 ರಷ್ಟು ವಿವಿಪ್ಯಾಟ್ಗಳೊಂದಿಗೆ ತುಲನೆ ಮಾಡಿ ನೋಡಬೇಕು ಎಂದು ಪ್ರತಿಪಕ್ಷಗಳು ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ನ್ಯಾಯಪೀಠವು, ‘ಹಿಂದಿನ ಆದೇಶವನ್ನು ಬದಲಾಯಿಸುವ ಯಾವ ಒಲವು ನಮಗಿಲ್ಲ’ ಎಂದು ಸ್ಪಷ್ಟಪಡಿಸಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ 21 ಪ್ರತಿಪಕ್ಷಗಳು, ಮತಯಂತ್ರಗಳ ಮತವನ್ನು ವಿವಿಪ್ಯಾಟ್ಗಳೊಂದಿಗೆ ತುಲನೆ ಮಾಡುವ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಕೋರಿ ಸುಪ್ರೀಂಗೆ ಅರ್ಜಿಯನ್ನು ಸಲ್ಲಿಸಿದ್ದವು.
ಪ್ರತಿ ವಿಧಾನಸಭಾ ಕ್ಷೇತ್ರಗಳ ಕನಿಷ್ಠ 5 ಮತಗಟ್ಟೆಗಳ ವಿವಿಪ್ಯಾಟ್ಗಳನ್ನು ಮತಯಂತ್ರಕ್ಕೆ ತಾಳೆ ಮಾಡಿ ನೋಡುವಂತೆ ಎಪ್ರಿಲ್ 8ರಂದು ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚನೆಯನ್ನು ನೀಡಿತ್ತು. ಈ ಸೂಚನೆಯನ್ನು ಮರುಪರಿಶೀಲಿಸಬೇಕು ತಾಳೆ ಮಾಡಿ ನೋಡುವ ವಿವಿಪ್ಯಾಟ್ಗಳ ಪ್ರಮಾಣವನ್ನು ಹೆಚ್ಚಿಸಬೇಕು ಎಂಬುದು ಪ್ರತಿಪಕ್ಷಗಳ ಬೇಡಿಕೆಯಾಗಿತ್ತು.
ಆದರೀಗ ಸುಪ್ರೀಂ ತನ್ನ ಹಿಂದಿನ ಆದೇಶಕ್ಕೆ ಬದಲಾವಣೆಯನ್ನು ತರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಪ್ರತಿಪಕ್ಷಗಳಿಗೆ ಮುಖಭಂಗವುಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.