ಜಮ್ಮು: ಸುಪ್ರೀಂಕೋಟ್ನ ಆದೇಶದಂತೆ ಅಮರನಾಥ ಯಾತ್ರಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಬಾರಿ ಯಾತ್ರೆಯ ವೇಳೆ ತಂಪು ಪಾನೀಯ, ಜಂಕ್ ಫುಡ್ಗಳಿಗೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.
ದೇಗುಲದ ಸಮೀಪವೂ ಯಾವುದೇ ತಂಪು ಪಾನೀಯ ಮತ್ತು ಜಂಕ್ ಫುಡ್ಗಳನ್ನು ಮಾರುವುದಕ್ಕೆ ಶ್ರೀ ಅಮರನಾಥ ದೇವಸ್ಥಾನ ಮಂಡಳಿ ಸಂಪೂರ್ಣ ನಿಷೇಧವನ್ನು ಹೇರಿದೆ.
2012ರಲ್ಲೇ ಸುಪ್ರೀಂಕೋರ್ಟ್ ಅಮರನಾಥ ಯಾತ್ರೆಯ ವೇಳೆ ಇಂತಹ ತಿನಿಸುಗಳ ಮಾರಾಟವನ್ನು ನಿಷೇಧ ಮಾಡಬೇಕು, ಅಲ್ಲಿ ಆಮ್ಲಜನಕದ ಕೊರತೆಯಿರುವುದರಿಂದ ಇಂತಹ ತಿನಿಸುಗಳು ಅಪಾಯಕಾರಿಯಾಗುವ ಸಂಭವವಿದೆ ಎಂಬ ಎಚ್ಚರಿಕೆ ನೀಡಿತ್ತು.
ಆಮ್ಲಜನಕದ ಕೊರತೆ ಇರುವ ಪ್ರದೇಶದಲ್ಲಿ ತಂಪುಪಾನೀಯ, ಜಂಕ್ಫುಡ್ಗಳನ್ನು ತಿಂದರೆ ಜೀರ್ಣವಾಗುವುದು ಕಷ್ಟ, ಇದರಿಂದ ಉಸಿರಾಟ ತೊಂದರೆ ಉದ್ಭವವಾಗಬಹುದು. ಇದು ಯಾತ್ರೆಗೆ ಅಡ್ಡಿಪಡಿಸಬಹುದು ಎಂದು ತಜ್ಞರುಗಳು ಅಭಿಪ್ರಾಯಪಟ್ಟಿದ್ದಾರೆ.
2013, 2014ರಲ್ಲೂ ಯಾತ್ರೆಯ ವೇಳೆ ಇದಕ್ಕೆ ನಿಷೇಧ ಹೇರಲಾಗಿತ್ತು, ಆದರೆ ಈ ಬಾರಿ ಅದರ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.