ನವದೆಹಲಿ: 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಮೇ 23 ಕ್ಕೆ ಹೊರಬೀಳಲಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗಾಗಲೇ ತಾನು ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು, ನೀತಿ ಆಯೋಗ, ಪಿಎಂಓ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರರಿಗೆ, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಡಬಲ್ ಡಿಜಿಟ್ ಜಿಡಿಪಿ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಮುಂದಿನ ಸರ್ಕಾರದ ಮೊದಲ 100 ದಿನಗಳ ಅಜೆಂಡಾವನ್ನು ಸೆಟ್ ಮಾಡವಂತೆ ಸೂಚನೆ ನೀಡಿದ್ದಾರೆ.
ಮೋದಿ ಸರ್ಕಾರದ ಹಿರಿಯ ಅಧಿಕಾರಿಗಳ ಪ್ರಕಾರ, ಚುನಾವಣಾ ಪ್ರಚಾರದ ಒತ್ತಡದ ನಡುವೆಯೂ ತನ್ನ ಅಧಿಕಾರಿಗಳಿಗೆ ಮೋದಿಯವರು ಕಾರ್ಯವನ್ನು ವಹಿಸಿಕೊಟ್ಟಿದ್ದಾರೆ. ಸ್ವಚ್ಛ ಭಾರತ, ಆರ್ಥಿಕ ಪ್ರಗತಿ ಮತ್ತು ಅಧಿಕಾರಶಾಹಿ ಸುಧಾರಣೆಗಳ ಮೇಲೆ ಅವರು ಯೋಜನೆ ರೂಪಿಸುವಂತೆ ತಿಳಿಸಿದ್ದಾರೆ.
‘ತೈಲ ಮತ್ತು ಅನಿಲ, ಮಿನರಲ್ಸ್, ಮೂಲಸೌಕರ್ಯ ಮತ್ತು ಶಿಕ್ಷಣ ಮುಂತಾದ ವಿಷಯಗಳ ಮೇಲೆಯೂ ಅಜೆಂಡಾ ಸೆಟ್ ಮಾಡಲು ಸೂಚಿಸಿದ್ದಾರೆ. 2047 ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು 100 ದಿನಗಳ ಯೋಜನೆ ಹಾಕಿಕೊಳ್ಳಲಾಗುತ್ತದೆ. ಪ್ರಮುಖ ವಲಯಗಳಲ್ಲಿ ಭ್ರಷ್ಟಾಚಾರ, ಲೂಟಿಯನ್ನು ತಡೆಗಟ್ಟುವುದರಿಂದ ಜಿಡಿಪಿಯನ್ನು ಮತ್ತೆ ಶೇ.2.5 ರಷ್ಟು ಉತ್ತೇಜಿಸಬಹುದು ಎಂದು ನಂಬಿದ್ದೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉದ್ಯೋಗ ಸೃಷ್ಟಿಯತ್ತ ಅವರು ಮುಂದಿನ ಅವಧಿಯಲ್ಲಿ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಿದ್ದಾರೆ ಎಂದು ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.