ಗೋಕುಲೋತ್ಸವ ಸಮಾರೋಪದಲ್ಲಿ ಶ್ರೀ ವೆಂಕಟರಮಣ ಹೊಳ್ಳ
ಮಂಜೇಶ್ವರ (ಬಾಯಾರು): ಭಾರತೀಯ ಸಂಸ್ಕೃತಿಯ ಹಾಗೂ ಮೌಲ್ಯಗಳ ರಕ್ಷಣೆ ಹಾಗೂ ವ್ಯಕ್ತಿ ನಿರ್ಮಾಣದ ಕೆಲಸವನ್ನು ಬಾಲ ಗೋಕುಲಗಳು ಮಾಡುತ್ತಿವೆ. ಈ ಮೂಲಕ ಮಕ್ಕಳನ್ನು ರಾಷ್ಟ್ರಭಕ್ತರನ್ನಾಗಿ ಮಾಡಲಾಗುತ್ತದೆ ಎಂಬುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸೇವಾಪ್ರಮುಖ್ ಶ್ರೀ ವೆಂಕಟರಮಣ ಹೊಳ್ಳ ಹೇಳಿದರು. ಅವರು ಬಾಯಾರಿನ ಶ್ರೀ ದುರ್ಗಾಸದನ, ಆವಳ ಮಠ ಇದರ ಸಭಾಭವನದಲ್ಲಿ ನಡೆದ ಮಂಜೇಶ್ವರ ತಾಲೂಕಿನ ಬಾಲಗೋಕುಲಗಳ ಗೋಕುಲೋತ್ಸವದ ಸಮಾರೋಪ ಸಭೆಯಲ್ಲಿ ಮಾತನಾಡುತ್ತಾ ಇಂದಿನ ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿಯ ಕುರಿತಾಗಿ ತಿಳಿಸುವ ಕೆಲಸ ಆಗುತ್ತಿಲ್ಲ. ಇಂದಿಗೂ ಬ್ರಿಟಿಷರು ಅಳವಡಿಸಿದ ಮೆಕಾಲೆ ಶಿಕ್ಷಣ ಪದ್ಧತಿ ಚಾಲನೆಯಲ್ಲಿದೆ. ಅದರಲ್ಲಿ ಭಾರತದ ನಿಜವಾದ ಭವ್ಯ ಇತಿಹಾಸವನ್ನು ತಿಳಿಸುವ ಕೆಲಸ ಆಗುತ್ತಿಲ್ಲ. ನಿಜವಾಗಿ ಭಾರತ ಗೆಲುವಿನ ಇತಿಹಾಸ ಹೊಂದಿದ್ದು ಹಿಂದಿನಿಂದಲೇ ಆಯರ್ವೇದ, ವಿಜ್ಞಾನ, ಯೋಗ ಗಣಿತ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆ ಮಾಡಿದ ಶ್ರೇಷ್ಠ ಇತಿಹಾಸ ಹೊಂದಿದೆ. ನಮ್ಮ ಗತಕಾಲದ ನೈಜ ಹಾಗೂ ಭವ್ಯ ಇತಿಹಾಸವನ್ನು ನಮ್ಮ ಮಕ್ಕಳಿಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆ ಕೆಲಸವು ಬಾಲಗೋಕುಲಗಳ ಮೂಲಕ ಆಗಬೇಕಿದ್ದು ತನ್ಮೂಲಕ ನಮ್ಮ ಮಕ್ಕಳನ್ನು ರಾಷ್ಟ್ರಭಕ್ತರನ್ನಾಗಿ ಮಾಡೋಣ ಎಂದು ಹೇಳಿದರು.
ಗೋಕುಲೋತ್ಸವದ ಆರಂಭದಲ್ಲಿ ಬಾಲಗೋಕುಲದ ಮಕ್ಕಳ ಆಕರ್ಷಕ ಶೋಭಾಯಾತ್ರೆ ಸರ್ಕುತ್ತಿಯಿಂದ ಆವಳ ಮಠದವರೆಗೆ ನಡೆಯಿತು. ನಂತರ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ವಸಂತ ಪಂಡಿತ್ ಗುಂಪೆ ಹಾಗೂ ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಪ್ರಜ್ವಲನದೊಂದಿಗೆ ಶ್ರೀ ಗಣಪತಿ ಭಟ್ ಆವಳ ಮಠ ಇವರು ನಡೆಸಿದರು. ಪ್ರಸ್ತಾವನೆಯನ್ನು ಶ್ರೀ ವಿಶ್ವನಾಥ, ಜಿಲ್ಲಾ ಸೇವಾ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಇವರು ನಡೆಸಿದರು. ನಂತರ ವಿವಿಧ ಬಾಲಗೋಕುಲದ ಮಕ್ಕಳದ ಸಾಮೂಹಿಕ ಬೌದ್ಧಿಕ, ಶಾರೀರಿಕ ಕಾರ್ಯಕ್ರಮಗಳು ನಡೆದವು. ಭೋಜನದ ನಂತರ ಬಾಲಗೋಕುಲ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು. ಕೊನೆಯದಾಗಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಬ್ರಮಣ್ಯ ಭಟ್ ಅವರು ವಹಿಸಿದ್ದರು. ಅತಿಥಿಗಳಾಗಿ ಎನ್ ಟಿ ಯು ರಾಜ್ಯ ಸಮಿತಿಯ ಕಾರ್ಯದರ್ಶಿ ಶ್ರೀ ವೆಂಕಪ್ಪ ಶೆಟ್ಟಿ ಪಿ. ಹಾಗೂ ಕೃಷ್ಣ ಗುರುಸ್ವಾಮಿ ಕುರುಡಪದವು ಇವರು ವಹಿಸಿದ್ದರು. ಮಂಜೇಶ್ವರ ತಾಲೂಕಿನ ಪೈವಳಿಕೆ, ಮೀಂಜ, ವರ್ಕಾಡಿ ಹಾಗೂ ಮಂಜೇಶ್ವರ ಪಂಚಾಯತಿಗೆ ಒಳಪಟ್ಟ ಬಾಲಗೋಕುಲಗಳ ಸುಮಾರು 230 ಮಂದಿ ಮಕ್ಕಳು ಈ ಗೋಕುಲೋತ್ಸವದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.