ಆರ್ಬಿಐ ಮಾಹಿತಿಯ ಪ್ರಕಾರ, ಮಾರ್ಚ್ 29ರಲ್ಲಿ ವರದಿಯಾದಂತೆ ಭಾರತದ ವಿದೇಶಿ ವಿನಿಮಯ ನಿಕ್ಷೇಪಗಳು 5.237 ಬಿಲಿಯನ್ ಡಾಲರ್ಗಳಷ್ಟು ಏರಿಕೆ ಕಂಡಿದ್ದು, 412 ಬಿಲಿಯನ್ ಡಾಲರ್ ತಲುಪಿದೆ. ವಿದೇಶಿ ಕರೆನ್ಸಿ ಸ್ವತ್ತುಗಳು, ಒಟ್ಟಾರೆ ಮೀಸಲುಗಳ ಪ್ರಮುಖ ಅಂಶವು 2.248 ಬಿಲಿಯನ್ ಡಾಲರ್ ಏರಿಕೆಯಾಗಿ 384.053 ಬಿಲಿಯನ್ ಡಾಲರ್ ತಲುಪಿದೆ. ಕೆಲವು ದಿನಗಳ ಹಿಂದೆಯೇ ಆರ್ಬಿಐ 5 ಬಿಲಿಯನ್ ಡಾಲರ್ ರೂಪಾಯಿ ವಿನಿಮಯ ಮಾಡಿತು. ಕೇಂದ್ರ ಬ್ಯಾಂಕ್ ಏಪ್ರಿಲ್ 23 ರಂದು ಮತ್ತೊಂದು ಸ್ವಾಪ್ ಹರಾಜು ನಡೆಸಲಿದೆ. ಒಂದು ವಾರದಲ್ಲಿ ಹೆಚ್ಚಾಗಿರುವ ಭಾರತದ ಮೀಸಲು ಪಾಕಿಸ್ಥಾನದ ಒಟ್ಟು ಮೀಸಲುಗಳ ಅರ್ಧಕ್ಕಿಂತಲೂ ಹೆಚ್ಚಾಗಿದೆ. ಸಾಲದ ಪೀಡಿತ ಪಾಕಿಸ್ಥಾನವು 10 ಬಿಲಿಯನ್ ಡಾಲರ್ ವಿದೇಶಿ ವಿನಿಮಯವನ್ನು ಹೊಂದಿದೆ, ಇದು ಕೇವಲ ಎರಡು ತಿಂಗಳ ಆಮದುಗಳನ್ನು ಪೂರೈಸಲು ಸಾಕಾಗುತ್ತದೆ.
ಭಾರತದ ಒಟ್ಟು ವಿದೇಶಿ ವಿನಿಮಯ ನಿಕ್ಷೇಪಗಳು ಪಾಕಿಸ್ಥಾನಕ್ಕಿಂತ 50 ಪಟ್ಟು ಹೆಚ್ಚಾಗಿದೆ. ಆದರೂ, ಯುಎಇ, ಸೌದಿ ಅರೇಬಿಯಾ ಮತ್ತು ಚೀನಾದ ಸಹಾಯದ ನಂತರ ಆ ದೇಶದ ಪರಿಸ್ಥಿತಿ ಕೊಂಚ ಸುಧಾರಣೆಯಾಗಿದೆ. ಪಾಕಿಸ್ಥಾನದ ಒಟ್ಟು ವಿದೇಶಿ ವಿನಿಮಯ ಮೀಸಲುಗಳಿಗಿಂತ ಭಾರತವು ಹೆಚ್ಚು ಚಿನ್ನದ ಮೀಸಲುಗಳನ್ನು ಹೊಂದಿದೆ. ಭಾರತವು ಪಾಕಿಸ್ಥಾನದ ಒಟ್ಟು ಮೀಸಲಿಗಿಂತ ಮೂರು ಪಟ್ಟು ಹೆಚ್ಚಿರುವ ಚಿನ್ನದ ನಿಕ್ಷೇಪವನ್ನು ಹೊಂದಿದೆ.
ವಿದೇಶಿ ವಿನಿಮಯ ಹೂಡಿಕೆದಾರರು (ಎಫ್ಐಐ) ಮಾಡಿರುವ ಭಾರೀ ಪ್ರಮಾಣದ ಹೂಡಿಕೆಯಿಂದಾಗಿ ವಿದೇಶಿ ವಿನಿಮಯವು ಹೆಚ್ಚುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ರಫ್ತು ಮತ್ತು ಆಮದುಗಳ ನಡುವಿನ ಅಂತರವು ಕುಸಿದಿದೆ, ಇದು ವಿದೇಶೀ ವಿನಿಮಯ ಮಟ್ಟದ ಹೆಚ್ಚಳಕ್ಕೆ ಕಾರಣವಾಗಿರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಸ್ಥಿರ ಬೃಹತ್ ಆರ್ಥಿಕ ಪರಿಸ್ಥಿತಿಗಳಿಂದಾಗಿ ವಿದೇಶಿ ಹೂಡಿಕೆದಾರರು ಭಾರತಕ್ಕೆ ಹಿಂದಿರುಗುತ್ತಿದ್ದಾರೆ ಮತ್ತು ಮೋದಿ ಸರಕಾರ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವ ಸೂಚನೆ ಸಿಗುತ್ತಿರುವುದು ಕೂಡ ಅವರ ಹಿಂದಿರುಗುವಿಕೆಗೆ ಕಾರಣವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ಥಾನದೊಳಗೆ ನುಗ್ಗಿ ಭಾರತೀಯ ವಾಯುಸೇನೆಯ ನಡೆಸಿದ ವೈಮಾನಿಕ ದಾಳಿಯಿಂದಾಗಿ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮೋದಿ ಸರ್ಕಾರವು ಮತ್ತೆ ಆಯ್ಕೆಯಾಗುತ್ತದೆ ಎಂಬ ಹೂಡಿಕೆದಾರರ ನಂಬಿಕೆಯನ್ನು ಹೆಚ್ಚಿಸಿದೆ.
ಫೆಬ್ರವರಿಯಲ್ಲಿ ಕಳೆದ 17 ತಿಂಗಳಲ್ಲೇ ಅತೀ ಕಡಿಮೆ ವ್ಯಾಪಾರ ಕೊರತೆ ವರದಿಯಾಗಿದೆ. ರಫ್ತು ಶೇ.2.44 ರಷ್ಟು ಅಂದರೆ 26.67 ಶತಕೋಟಿ ಡಾಲರ್ಗಳಿಗೆ ತಲುಪಿದೆ. ಆಮದುಗಳು 5.41 ರಷ್ಟು ಕುಸಿದಿದೆ. ಅಂದರೆ 36.26 ಬಿಲಿಯನ್ ಡಾಲರ್ಗೆ ಇಳಿದಿದೆ. ಚಿನ್ನದ ಆಮದು ಕಡಿಮೆಯಾಗಿರುವುದು ಇದಕ್ಕೆ ಕಾರಣ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವುದು ಕೂಡ ಒಂದು ಕಾರಣ. ಚಿನ್ನದ ಆಮದು ಶೇ. 10.81 ರಷ್ಟು ಕುಸಿದಿದ್ದು, ಫೆಬ್ರವರಿಯಲ್ಲಿ 2.58 ಬಿಲಿಯನ್ ಡಾಲರ್ಗೆ ಇಳಿದಿದೆ. ಕಳೆದ ವರ್ಷ ಅವಧಿಗೆ ಆಮದು 2.90 ಬಿಲಿಯನ್ ಡಾಲರ್ ಆಗಿತ್ತು.
ಏಷ್ಯಾದ ಉದ್ದಗಲಕ್ಕೂ ಉದಯೋನ್ಮುಖ ಮಾರುಕಟ್ಟೆಗಳು ಚೀನಾದ ಸಮಸ್ಯೆಗಳಿಂದಾಗಿ ನಿಧಾನಗತಿಯೆಡೆಗೆ ಸಾಗುತ್ತಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡರೆ, ಭಾರತದ ರಫ್ತು, ಕರೆನ್ಸಿ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆಯಲ್ಲಿ ಹೆಚ್ಚಳವು ಬಹಳ ಪ್ರೋತ್ಸಾಹದಾಯಕವಾಗಿ ಕಾಣುತ್ತದೆ. ಆರ್ಥಿಕ ಕುಸಿತ ಮತ್ತು ವ್ಯಾಪಾರ ಯುದ್ಧದ ಕಾರಣ ಚೀನಾದ ಆಮದುಗಳು ಮತ್ತು ರಫ್ತುಗಳು ಡಬಲ್ ಡಿಜಿಟ್ ಕುಸಿತ ಕಂಡಿವೆ. 1991 ರಲ್ಲಿ ಭಾರತವು 600 ಮಿಲಿಯನ್ ಡಾಲರ್ಗಳಷ್ಟು ವಿದೇಶೀ ವಿನಿಮಯ ನಿಕ್ಷೇಪಗಳನ್ನು ಹೊಂದಿತ್ತು, ಅದು ಮೂರು ವಾರಗಳ ಆಮದುಗಳನ್ನು ಪೂರೈಸಲು ಸಾಕಾಗುವಷ್ಟು ಆಗಿತ್ತು. ಅಲ್ಲಿಂದ ನಾವು ಬಹಳ ದೂರ ಸಾಗಿ ಬಂದಿದ್ದೇವೆ ಮತ್ತು ಅಂದಿನಿಂದ 600 ಪಟ್ಟು ನಮ್ಮ ವಿದೇಶೀ ವಿನಿಮಯ ನಿಕ್ಷೇಪಗಳು ಏರಿವೆ. ಆದರೂ, ಚೀನಾದ ವಿದೇಶಿ ವಿನಿಮಯವು, ಭಾರತದ ಹೆಚ್ಚಿನ ರಫ್ತು ಅಂಕಿ-ಅಂಶಗಳಿಗಿಂತಲೂ ಅನೇಕ ಪಟ್ಟು ಹೆಚ್ಚಾಗಿದೆ.
ಚೀನಾವು ಅತಿ ಹೆಚ್ಚಿನ ಕರೆಂಟ್ ಅಕೌಂಟ್ ಸರ್ಪ್ಲಸ್ ಅನ್ನು ಪೋಸ್ಟ್ ಮಾಡುತ್ತದೆ ಏಕೆಂದರೆ ಅದರ ರಫ್ತು ಆಮದುಗಳಿಗಿಂತಲೂ ದೊಡ್ಡದಾಗಿದೆ. ಚೀನಾದ ವಿದೇಶಿ ವಿನಿಮಯವು ಸುಮಾರು 3 ಟ್ರಿಲಿಯನ್ ಡಾಲರ್ಗಳಾಗಿದ್ದು, ಇದು ಭಾರತಕ್ಕಿಂತ 7 ಪಟ್ಟು ಹೆಚ್ಚಾಗಿದೆ. ಚೀನಾ, ಜಪಾನ್, ಸ್ವಿಟ್ಜರ್ಲ್ಯಾಂಡ್, ಸೌದಿ ಅರೇಬಿಯಾ, ರಷ್ಯಾ, ತೈವಾನ್, ಹಾಂಕಾಂಗ್ ಮತ್ತು ದಕ್ಷಿಣ ಕೊರಿಯಾದಂತಹ ರಫ್ತು-ಆಧಾರಿತ ಆರ್ಥಿಕತೆಗಳು ಭಾರತಕ್ಕಿಂತ ಹೆಚ್ಚಿನ ವಿದೇಶಿ ನಿಕ್ಷೇಪಗಳನ್ನು ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.