ರಾಜಕೀಯದ ಕಡೆಗಿನ ಆರ್ಎಸ್ಎಸ್ ನಿಲುವು ಸಾಂಪ್ರದಾಯಿಕ ತಿಳುವಳಿಕೆಗಳಿಗಿಂತ ಭಿನ್ನವಾಗಿದೆ, ಆರಂಭದಿಂದಲೂ ಅದು ಸ್ಥಿರವಾಗಿಯೇ ಇದೆ. ಡಾ.ಹೆಡ್ಗೇವಾರ್ ಅವರಿಗೆ ರಾಜಕೀಯ ಅಸ್ಪೃಶ್ಯವಾಗಿರಲಿಲ್ಲ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಪೂರ್ಣ ಪರಿಹಾರವೂ ಆಗಿರಲಿಲ್ಲ. ಮನುಷ್ಯ ನಿರ್ಮಾಣ ಯೋಜನೆಯು ಎಲ್ಲದಕ್ಕಿಂತ ಮಿಗಿಲಾಗಿರಬೇಕು ಎಂದು ಅವರು ನಂಬಿದ್ದರು. ಹಲವು ವರ್ಷಗಳ ಹಿಂದೆ, ರಾಜ್ಯಸಭಾದಲ್ಲಿ ಕೆಲವು ಸ್ನೇಹಿತರು ಒಟ್ಟಾಗಿ ಕುಳಿತಿದ್ದರು. ಒಬ್ಬರು ಕಾಂಗ್ರೆಸ್ ಸದಸ್ಯ, ಮತ್ತಿಬ್ಬರು ಕಮ್ಯೂನಿಸ್ಟ್ ಸದಸ್ಯರು, ಮತ್ತೊಬ್ಬರು ದೇಶದ ಮೊದಲ ಕಾರ್ಮಿಕ ಸಂಘಟನೆ, ಆರ್ಎಸ್ಎಸ್ ಅಂಗ ಸಂಸ್ಥೆ ಭಾರತೀಯ ಮಜ್ದೂರ್ ಸಂಘದ ಸ್ಥಾಪಕ ಶ್ರೀ ದತ್ತೋಪಂಥ್ ಠೇಂಗಡಿ ಅವರು ಪ್ರಚಾರಕರಾಗಿದ್ದರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ ಸ್ಥಾಪನೆ ಮಾಡಿದ್ದರು ಮತ್ತು ಭಾರತೀಯ ಜನಸಂಘದ ಮೊದಲ ತಲೆಗಳಲ್ಲಿ ಅವರೂ ಒಬ್ಬರು. ವ್ಯಂಗ್ಯ ಮಿಶ್ರಿತ ಧ್ವನಿಯಲ್ಲಿ ಕಾಂಗ್ರೆಸ್ ಸದಸ್ಯ ದತ್ತೋಪಂಥ್ ಅವರನ್ನು ಕೇಳಿದರು-ಆರ್ಎಸ್ಎಸ್ ಸ್ಥಾಪಕರು ಯಾರು?, ದತ್ತೋಪಂಥ್ ಅವರು, ಡಾ. ಹೆಗ್ಡೇವಾರ್ ಎಂದು ಪ್ರತಿಕ್ರಿಯಿಸಿದರು. ಅಲ್ಲಿಗೆ ಬಿಡದ ಕಾಂಗ್ರೆಸ್ ಸದಸ್ಯ, ‘ನೋಡಿ ಇಡೀ ವಿಶ್ವಕ್ಕೆ ನೆಹರೂ ಬಗ್ಗೆ ತಿಳಿದಿದೆ, ಆದರೆ ಡಾ. ಹೆಡ್ಗೇವಾರ್ ಬಗ್ಗೆ ಯಾರಿಗೆ ತಿಳಿದಿದೆ? ಎಂದರು. ಈ ವೇಳೆ ಮಧ್ಯಪ್ರವೇಶಿಸಿ ಕಮ್ಯೂನಿಸ್ಟ್ ಸದಸ್ಯ, ‘ಸ್ನೇಹಿತ, ವ್ಯಕ್ತಿಯ ಶ್ರೇಷ್ಠತೆ ಆತ/ಆಕೆ ಸಾರ್ವಜನಿಕ ವಲಯದಲ್ಲಿ ಪ್ರಸ್ತುತ ಹೊಂದಿರುವ ಸ್ಥಾನಮಾನದಿಂದ ಪರಿಗಣಿಸಲ್ಪಡುವುದಿಲ್ಲ. ಆದರೆ, ಇತಿಹಾಸದಲ್ಲಿ ಆತನ ನೆರಳಿನ ದೀರ್ಘತೆಯಿಂದ ಮತ್ತು ಸಮಯದಿಂದ ಸಮಯಕ್ಕೆ ಅದರ ಪ್ರಸ್ತುತತೆಯಿಂದ ಪರಿಗಣಿಸಲ್ಪಡುತ್ತದೆ’ ಎಂದರು.
ನೆಹರೂ ಅವರ 100ನೇ ಜನ್ಮದಿನೋತ್ಸವವನ್ನು ಸರ್ಕಾರ ಯಾವುದೇ ಸಾರ್ವಜನಿಕ ಭಾಗಿಯಿಲ್ಲದೆ ನಡೆಸಬೇಕಾಯಿತು, ಆದರೆ ಡಾ. ಹೆಡ್ಗೇವಾರ್ ಅವರ ಜನ್ಮ ಶತಮಾನೋತ್ಸವವನ್ನು ದೇಶದ ಮೂಲೆ ಮೂಲೆಯ ಜನ ಸಾಮಾನ್ಯರು ಆಚರಿಸಿದರು. ಆರ್ಎಸ್ಎಸ್ ಕಾರ್ಯಗಳಿಗೆ ಹೊಸ ಚಟುವಟಿಕೆಗಳು ಸೇರಿದ್ದು ಮಾತ್ರವಲ್ಲ. 1000 ಸೇವಾ ಯೋಜನೆಗಳ ಗುರಿ ಹೊಂದಲಾಯಿತು. ಅದು 1.70 ಲಕ್ಷಕ್ಕೂ ಅಧಿಕ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.
ಇಲ್ಲಿ ನಾನು ಇಬ್ಬರನ್ನು ಹೋಲಿಕೆ ಮಾಡುತ್ತಿಲ್ಲ. ಆದರೆ ಡಾ.ಹೆಡ್ಗೇವಾರ್ ಅವರ ಸಾರ್ವಜನಿಕ ನೀತಿ ಮತ್ತು ಸಾರ್ವಜನಿಕ ಜೀವನದಲ್ಲಿ ರಾಜಕೀಯದ ಪಾತ್ರದ ಬಗೆಗಿನ ವಿಭಿನ್ನವಾದ ನಿಲುವನ್ನು ಬಹಿರಂಗಪಡಿಸುತ್ತಿದ್ದೇನೆ. ರಾಜಕೀಯದಿಂದ ದೂರವಿರಲು, ಆದರೂ ಅದರ ವಿವಿಧ ಆಯಾಮಗಳೊಂದಿಗೆ ತೊಡಗಿಕೊಂಡಿದ್ದು ಹೆಗ್ಡೇವಾರ್ ಅವರ ವಿಶೇಷತೆಯಾಗಿದೆ. ಹಲವು ವರ್ಷಗಳಿಂದ ಆರ್ಎಸ್ಎಸ್ ಕೂಡ ಈ ನಿರ್ದೇಶನವನ್ನು ಪಾಲನೆ ಮಾಡುತ್ತಾ ಬರುತ್ತಿದೆ.
ಈಗ, ಆರ್ಎಸ್ಎಸ್ ಅನ್ನು ಪಾಲನೆ ಮಾಡುವವರು ಮತ್ತು ಡಾ. ಹೆಡ್ಗೇವಾರ್ ಅವರ ಬಗ್ಗೆ ಓದುವುದಕ್ಕೆ ಬದ್ಧತೆ ತೋರುವವರು ಬಾಲ್ಯದಿಂದಲೇ ದೇಶಪ್ರೇಮಿಗಳು ಎಂಬುದು ಎಲ್ಲರಿಗೂ ಸಾಮಾನ್ಯವಾಗಿ ತಿಳಿದ ಸಂಗತಿಯಾಗಿದೆ. ಕೋಲ್ಕತ್ತಾದಲ್ಲಿ ಅವರು ಕ್ರಾಂತಿಕಾರಿಗಳೊಂದಿಗೆ ಕೆಲಸ ನಿರ್ವಹಿಸಿದ್ದರು. 1918ರಲ್ಲಿ ಕಾಂಗ್ರೆಸ್ ಸೇರಿದರು ಮತ್ತು 1920ರ ಸವಿನಯ ಅವಗ್ಯ ಆಂದೋಲನ (ಅಸಹಕಾರ ಚಳುವಳಿ)ಯಲ್ಲಿ ಪಾಲ್ಗೊಂಡರು ಮತ್ತು ಜೈಲು ಪಾಲಾದರು. ಕಾಂಗ್ರೆಸ್ ಸಾಪ್ತಾಹಿಕದ ಸಂಪಾದಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಗ್ರಾಮ ಗ್ರಾಮಕ್ಕೆ ತೆರಳಿ ಸಾಪ್ತಾಹಿಕದ ಗ್ರಾಹಕರನ್ನು ಹೆಚ್ಚು ಮಾಡಲು ಪ್ರಯತ್ನಿಸಿದರು. ಆರ್ಎಸ್ಎಸ್ ಸ್ಥಾಪನೆ ಮಾಡಿದ ಬಳಿಕವೂ, ಜಂಗಲ್ ಸತ್ಯಾಗ್ರಹದ ಮೂಲಕ 1930ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಮತ್ತೊಮ್ಮೆ ಜೈಲು ಪಾಲಾದರು. ಒಟ್ಟಾರೆಯಾಗಿ ಅವರು, 19 ತಿಂಗಳುಗಳನ್ನು ಎರಡು ಜೈಲುಗಳಲ್ಲಿ ಕಳೆದಿದ್ದಾರೆ. 1929ರಲ್ಲಿ ಕಾಂಗ್ರೆಸ್ ಸಂಪೂರ್ಣ ಸ್ವರಾಜ್ಯದ ಬಗ್ಗೆ ಪ್ರಸ್ತಾವನೆ ಅಂಗೀಕರಿಸಿದಾಗ ಅದನ್ನು ಸಂಭ್ರಮಿಸುವಂತೆ 1930ರ ಜನವರಿ 26ರಂದು ಎಲ್ಲಾ ಆರ್ಎಸ್ಎಸ್ ಶಾಖೆಗಳಿಗೂ ಸುತ್ತೋಲೆಯನ್ನು ಹೊರಡಿಸಿದರು. ಸಂಪೂರ್ಣ ಸ್ವರಾಜ್ಯದ ಬಗೆಗಿನ ಕಾಂಗ್ರೆಸ್ ನಿಲುವನ್ನು ಬೆಂಬಲಿಸಿ ಎಲ್ಲಾ ಸ್ವಯಂಸೇವಕರು ಶಾಖೆಗಳಲ್ಲಿ ಜನವರಿ 26ನ್ನು ಸಂಭ್ರಮಿಸಬೇಕು ಎಂದು ಅವರು ಸೂಚನೆಯನ್ನು ನೀಡಿದ್ದರು. ಅಲ್ಲಿ ಯಾವುದೇ ಸ್ಪರ್ಧೆ ಅಥವಾ ಅಸೂಯೆಯ ಭಾವ ಇರಲಿಲ್ಲ. 1920ರಲ್ಲಿ ಕಾಂಗ್ರೆಸ್ ಮತ್ತು ಜೈಲಿನಲ್ಲಿನ ಅನುಭವದಿಂದ ಅವರು ಹೆಚ್ಚು ಬಲಿಷ್ಠರಾಗಿದ್ದರು. ಪ್ರತಿ ವಿಷಯದಲ್ಲೂ ಹಿಂದೂ ಸಮಾಜದ ಕೋಪವನ್ನು ಅವರು ಕಂಡರು, ಜಾತಿ, ಭಾಷೆ, ಪ್ರಾದೇಶಿಕ ವಿಷಯಗಳಿಂದ ಹಿಂದೂ ಸಮಾಜವ ಇಬ್ಭಾಗವಾಗುತ್ತಿರುವುದನ್ನು ಕಂಡರು. ಮೊಪ್ಲಾ ಹಿಂಸಾಚಾರದ ನಂತರದ ಖಿಲಾಫತ್ ವೈಫಲ್ಯದ ಸಮಯದಲ್ಲಿ ಮುಸ್ಲಿಂ ಸಮುದಾಯದ ಆಕ್ರಮಣಶೀಲ ವರ್ತನೆಯ ಮುಖಾಂತರ ಅದರ ಸೌಮ್ಯತೆಯನ್ನು ನೋಡಿದೆ. ಖಲಿಫತ್ ಸಾಮ್ರಾಜ್ಯ ವೈಫಲ್ಯದ ತರುವಾಯ ಸಂಭವಿಸಿದ ಮೊಪ್ಲಾ ಹಿಂಸಾಚಾರದ ಸಮಯದಲ್ಲಿ ಮುಸ್ಲಿಂ ಸಮುದಾಯದ ಆಕ್ರಮಣಶೀಲಯ ಬಗ್ಗೆ ಹಿಂದೂ ಸೌಮ್ಯತೆಯನ್ನು ಅವರು ಕಂಡರು. ದೇಶದ ಇತರ ಭಾಗದಲ್ಲೂ ಅಂತಹ ಪ್ರಕರಣಗಳು ನಡೆದಿದ್ದವು. ಈ ಆಕ್ರಮಣಕಾರರ ನಿರಂತರ ಆಕ್ರಮಣವನ್ನು ಮಹತ್ತರವಾದ ಯಶಸ್ವಿ ಸಮಾಜದ ಸಹಿಸಿಕೊಳ್ಳಲು ಪ್ರಮುಖ ಕಾರಣ ಏಕತೆ ಮತ್ತು ಹೆಮ್ಮೆಯ ಕೊರತೆ ಎಂದು ಅವರು ಅರಿತುಕೊಂಡರು. ಈ ದೌರ್ಬಲ್ಯಗಳನ್ನು ತೆಗೆದು ಹಾಕಲೇಬೇಕಾಗಿತ್ತು. ಬಹುಪಾಲು ಹಿಂದೂಗಳಿರುವ ಸಮಾಜ ಒಗ್ಗಟ್ಟಾದರೆ ಇತರ ವಿಷಯಗಳು ಸ್ವಯಂಚಾಲಿತವಾಗಿ ಬಗೆಹರಿಯುತ್ತವೆ. ಸ್ವಾತಂತ್ರ್ಯ ಸುಲಭವಾಗುತ್ತದೆ ಎಂದು ಅರಿತುಕೊಂಡರು.
ಈ ಚಿಂತನೆಯೇ 1925ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹುಟ್ಟಿಗೆ ಕಾರಣವಾಯಿತು. ವೈಯಕ್ತಿಕ ಮೋಕ್ಷದಲ್ಲಿ ಕಾರ್ಯನಿರತವಾಗಿದ್ದ, ದೇಶದ ಬಗ್ಗೆ ಸಂಘಟಿತ ದೃಷ್ಟಿಕೋನ, ಮಹತ್ವಾಕಾಂಕ್ಷೆ ಇಲ್ಲದ ಹಿಂದೂ ಸಮಾಜವನ್ನು ಒಗ್ಗೂಡಿಸುವ ಆಧುನಿಕ ರಚನೆಯನ್ನು ಸೃಷ್ಟಿಸುವುದು ಸುದೀರ್ಘ ಅವಧಿಯ ಯೋಜನೆಯಾಗಿತ್ತು. ಅದು ಎಂದಿಗೂ ಪ್ರಯತ್ನಿಸಲ್ಪಟ್ಟ ಕಾರ್ಯವೂ ಆಗಿರಲಿಲ್ಲ, ಇದು ಧಾರ್ಮಿಕತೆಯಿಲ್ಲದ ಒಂದು ರಚನೆಯಾಗಿತ್ತು, ಆದರೆ ಸಮಾಜದ ಉನ್ನತಿಗೆ ಮತ್ತು ಸಮಗ್ರ ಅರ್ಥದಲ್ಲಿ ಭರ ಎಂದು ಪರಿಗಣಿಸಲ್ಪಟ್ಟ ರಾಷ್ಟ್ರಕ್ಕೆ ಇದನ್ನು ಸಮರ್ಪಿಸಲಾಗಿದೆ. 1920 ರಲ್ಲಿ ನಾಗ್ಪುರದ ಕಾಂಗ್ರೆಸ್ ಪ್ಲೆನಂನಲ್ಲಿ ಅದ್ಭುತ ಕಾರ್ಯ ಮಾಡಿದ್ದ ಅವರಿಗೆ ಕಾಂಗ್ರೆಸ್ನಲ್ಲೇ ಸುಲಭವಾಗಿ ಮೇಲೆಕ್ಕೆ ಏರಬಹುದಿತ್ತು, ಆದರೆ ಮಹತ್ವದ ಉದ್ದೇಶಕ್ಕಾಗಿ ಅವರು ತಮ್ಮ ರಾಜಕೀಯ ಭವಿಷ್ಯವನ್ನು ತ್ಯಾಗ ಮಾಡಿಬಿಟ್ಟರು.
ಕಾಂಗ್ರೆಸ್ ಪಕ್ಷದ ಭಾಗವಾಗಿ ಆರ್ಎಸ್ಎಸ್ ದೇಶಕ್ಕೆ ಸೇವೆ ಸಲ್ಲಿಸಬಹುದು ಎಂದು ಸರ್ದಾರ್ ಪಟೇಲ್ ಅವರು ಸಲಹೆ ನೀಡಿದಾಗಲೂ, ಆರ್ಎಸ್ಎಸ್ ಸರಸಂಘಚಾಲಕ ಶ್ರೀ ಗುರೂಜಿಯವರು ಅದನ್ನು ನಿರಾಕರಿಸಿದರು.
ಆರ್ಎಸ್ಎಸ್ ರಾಜಕೀಯದಲ್ಲಿ ನೇರವಾಗಿ ಪ್ರವೇಶಿಸಿದ್ದು ಜೆಪಿಯವರ ಭ್ರಷ್ಟಾಚಾರ ವಿರೋಧಿ ಚಳುವಳಿಯಲ್ಲಿ. ಈ ಧೈರ್ಯಶಾಲಿ ನಡೆ ಜನ ಸಂಘ ಮತ್ತು ಜನತಾ ಪಕ್ಷದ ವಿಲೀನಕ್ಕೆ ಎಡೆಮಾಡಿಕೊಟ್ಟಿತು.
ದೀರ್ಘಾವಧಿಯ ಉದ್ದೇಶವನ್ನು ಇಟ್ಟುಕೊಂಡು ಅವರು ರಾಜಕೀಯದಿಂದ ಹೊರಗುಳಿಯಲು ನಿರ್ಧರಿಸಿದರು. ಹಿಂದೂ ಸಮಾಜವನ್ನು ಒಗ್ಗೂಡಿಸುವುದು, ಆ ಮೂಲಕ ಸ್ವಾತಂತ್ರ್ಯವನ್ನು ಗಳಿಸುವುದು, ಅತ್ಯಂತ ಶಿಸ್ತುಬದ್ಧ ಪಡೆಯನ್ನು ರಚಿಸುವುದು ಅವರ ದೀರ್ಘಾವಧಿಯ ಯೋಜನೆಯಾಗಿತ್ತು. ಅಗತ್ಯಬಿದ್ದಾಗ ಸ್ವಯಂಸೇವಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾದರು, ಆದರೆ ನಾಗರಿಕರಾಗಿಯೇ ಉಳಿದು, ಕಾಂಗ್ರೆಸ್ ಬ್ಯಾನರಿ ಅಡಿ, ಸ್ವಯಂನಿರ್ಧಾರದೊಂದಿಗೆ ಇದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗಿಯಾಗಿಯಾಯಿತು.
ಹಿಂದೂ ಮಹಾಸಭಾ ಇವರು ಸ್ವಯಂ ಸೇವಾ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಬೇಕೆಂದು ನಿರೀಕ್ಷಿಸಿದಾಗ, ಅವರು ಒಪ್ಪಲಿಲ್ಲ. ಹಿಂದೂ ಮಹಾಸಭಾ 1930 ರಲ್ಲಿ ಉಪ್ಪಿನ/ ಜಂಗಲ್ ಸತ್ಯಾಗ್ರಹ ಚಳವಳಿಯಿಂದ ದೂರವಿರಲು ಹೇಳಿದಾಗಲೂ ಅದನ್ನೂ ಅವರು ನಿರಾಕರಿಸಿದರು. ಅವರು ಸ್ವತಃ ಜೈಲಿಗೆ ಹೋದರು, ಆದರೆ ಅವರು ಜೈಲಿಗೆ ಹೋಗುವುದಕ್ಕೆ ಮುಂಚಿತವಾಗಿ ಮತ್ತು ಹಿಂದಿರುಗಿದ ನಂತರ ನೀಡಿದ ಉಪನ್ಯಾಸದಲ್ಲಿ ತಾನು ಸ್ವತಃ ಜೈಲಿನಲ್ಲಿ ಹೋಗುವುದನ್ನು ಮಾತ್ರ ಅಪೇಕ್ಷಣೀಯ ಚಟುವಟಿಕೆಯಾಗಿರಲಿಲ್ಲ ಎಂದು ಹೇಳಿದರು. ಒಬ್ಬ ವ್ಯಕ್ತಿಯು ಜೈಲಿನಿಂದ ಹೊರಗಿರುವಾಗಲೂ ಬಹಳಷ್ಟು ಕೆಲಸ ಮಾಡಬಲ್ಲ. ತಮ್ಮ ಕ್ರಿಯೆಯನ್ನು ನಿರ್ಧರಿಸುವುದನ್ನು ಅವರು ವ್ಯಕ್ತಿಗಳಿಗೆ ಬಿಟ್ಟು ಬಿಟ್ಟರು.
ಡಾ. ಹೆಡ್ಗೇವಾರ್ ಅವರು ರಾಜಕಾರಣಿಗಳೊಂದಿಗೆ ಮತ್ತು ರಾಜಕೀಯ ವಲಯದ ನಾಯಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು. ರುಯ್ಕಿರ್ ಅವರಂತಹ ಕಮ್ಯೂನಿಸ್ಟರಿಂದ, ಸ್ಪಾನಿಷ್ ಸಿವಿಲ್ ವಾರ್ ಬಳಿಕ ಕಮ್ಯೂನಿಸ್ಟ್ ಆಗಿ ಪರಿವರ್ತನೆಗೊಂಡ ಆರ್ಎಸ್ಎಸ್ ಸ್ಥಾಪಕರಲ್ಲಿ ಒಬ್ಬರಾದ ಬಾಲಾಜಿ ಹುದ್ದರ್, ಕಾಂಗ್ರೆಸ್ ನಾಯಕರು, ಹಿಂದೂ ಮಹಾಸಭಾ ನಾಯಕರೊಂದಿಗೂ ಅವರಿ ಉತ್ತಮ ಬಾಂಧವ್ಯ ಹೊಂದಿದ್ದರು. ಅವರನ್ನು ಗೌರವಿಸಿದರು, ಆರ್ಎಸ್ಎಸ್ ಶಾಖೆಗಳಿಗೆ ಕರೆತಂದರು, ರಾಜಕೀಯ ಉನ್ನತ ಉದ್ದೇಶ ಈಡೇರಿಸುವ ಸಾಧನವೇ ಹೊರತು ಅದುವೇ ಒಂದು ಉದ್ದೇಶವಲ್ಲ. ಹೀಗೆ, ಹೆಡ್ಗೇವಾರ್ ಅವರಿಗೆ ರಾಜಕೀಯ ಅಸ್ಪೃಶ್ಯವಾಗಿರಲಿಲ್ಲ. ರಾಷ್ಟ್ರ ನಿರ್ಮಾಣಕ್ಕೆ ಪೂರ್ಣ ಪರಿಹಾರವೂ ಆಗಿರಲಿಲ್ಲ ಎಂಬುದು ಅವರ ಅತೀ ದೊಡ್ಡ ನಂಬಿಕೆಯಾಗಿತ್ತು.
ಸ್ವಾತಂತ್ರ್ಯ ಪೂರ್ವದಲ್ಲಿ, ವಿಭಜನೆಯ ಸಂದರ್ಭದಲ್ಲಿ ಆರ್ಎಸ್ಎಸ್ ಹಿಂದೂ-ಸಿಖ್ ಸಮುದಾಯಕ್ಕೆ ರಕ್ಷಕನಂತೆ ಪಾತ್ರ ನಿಭಾಯಿಸಿತು, ಕಾಂಗ್ರೆಸ್ಗೆ ಸದಾ ಬೆಂಬಲ ನೀಡಿತು. ಆದರೆ ಕಾಂಗ್ರೆಸ್ ಭಾಗವಾಗುವಂತೆ ಸರ್ದಾರ್ ನೀಡಿದ ಸಲಹೆಯನ್ನು ಶ್ರೀ ಗುರೂಜಿ ತಿರಸ್ಕರಿಸಿದರು.
ಗಾಂಧಿ ಹತ್ಯೆಯಾದ ನಂತರ, ಆರ್ಎಸ್ಎಸ್ ಮೇಲೆ ನಿಷೇಧವಿದ್ದ ಸಂದರ್ಭದಲ್ಲಿ, ಹಲವಾರು ಮಂದಿ ಯುವಕರು ಅವರ ಬಳಿ ಬಂದು ನಾವು ಪ್ರತ್ಯೇಕ ರಾಜಕೀಯ ಪಕ್ಷವನ್ನು ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದ್ದರು. ಗಾಂಧಿ ಹತ್ಯೆಯಲ್ಲಿ ಪಾತ್ರ ವಹಿಸಿದ ಬಗ್ಗೆ ಯಾವುದೇ ಸಾಕ್ಷಿಯಿಲ್ಲದಿದ್ದರೂ ನಿಷೇಧದ ವೇಳೆ ಯಾವ ಪಕ್ಷವೂ ಅವರ ಬೆಂಬಲಕ್ಕೆ ಬಾರದೇ ಇದ್ದುದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಇತರ ಸಹೋದ್ಯೋಗಿಗಳು ಅವರಿಗೆ ಈ ಸಲಹೆಯನ್ನು ನೀಡಿದರು. ಈ ವೇಳೆ ಭಾರತೀಯ ಜನ ಸಂಘಕ್ಕೆ ಗುರೂಜಿ ಆಯ್ದ ಪ್ರಚಾರಕರನ್ನು ನೀಡಿದರು. ದೀನ್ ದಯಾಳ್ ಉಪಾಧ್ಯಾಯ ಅವರಿಗೆ ಪ್ರತ್ಯೇಕ ರಾಜಕೀಯ ಸಿದ್ಧಾಂತದ ಐಡಿಯಾ ನೀಡುವಂತೆ ಸೂಚಿಸಿದರು. ಇದು ಏಕಾತ್ಮ ಮಾನವ ಧರ್ಮ ತತ್ವದಡಿ ಪಕ್ಷ ಉಗಮಕ್ಕೆ ಕಾರಣವಾಯಿತು.
ಹಲವು ಸಾಮಾಜಿಕ ಕಾರ್ಯದ ವಲಯಗಳಲ್ಲಿ ರಾಜಕೀಯವೂ ಒಂದು ಎಂಬುದನ್ನು ಅರಿತುಕೊಂಡಿರುವ ಆರ್ಎಸ್ಎಸ್, ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ ಮತ್ತು ಸುಧಾರಿತ ಹಿಂದೂ ಸಮಾಜದ ದೃಷ್ಟಿಯನ್ನು ಹೊಂದಿದೆ, 2014ರಲ್ಲಿ ಶೇ. 100ರಷ್ಟು ಮತದಾನ ಮಾಡುವಂತೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಕರೆ, ದೇಶದೆಡೆಗಿನ ಕರ್ತವ್ಯದ ಸಂಕೇತವಾಗಿದೆ, ಈ ವರ್ಷವೇ ಶೇ. 100 ರಷ್ಟು ಮತದಾನವಾಗುವಂತೆ ನೋಡಿಕೊಳ್ಳಲು ಅವರು ತಮ್ಮ ಸ್ವಯಂಸೇವಕರಿಗೆ ಕರೆ ನೀಡಿದ್ದಾರೆ. ನಿರ್ವಹಣೆ ಎಂಬುದು ಅಷ್ಟೊಂದು ಸುಲಭದ ವಿಷಯವಲ್ಲ, ಆದರೆ ಆರ್ಎಸ್ಎಸ್ ಇದುವರೆಗೆ ಎಲ್ಲಾ ವಿಷಯದಲ್ಲೂ ಯಶಸ್ಸನ್ನು ಸಾಧಿಸುತ್ತಾ ಬಂದಿದೆ.
Source : Organiser
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.