ಭಾರತದಲ್ಲಿ ಆರೋಗ್ಯ ವಲಯ ಅತ್ಯಂತ ಕಠಿಣ ಹಾದಿಯನ್ನು ಸವೆಸಿದೆ. ಸರ್ಕಾರ ಮತ್ತು ಎನ್ಜಿಓಗಳು ನಡೆಸುತ್ತಿರುವ ಆಸ್ಪತ್ರೆಗಳು ಕೂಡ ಆರೋಗ್ಯ ದೇಶದ ಗುರಿಯನ್ನು ತಲುಪಲು ಮತ್ತು ಆರೋಗ್ಯ ವ್ಯವಸ್ಥೆಯನ್ನು ಅತ್ಯಂತ ಬಲಿಷ್ಠಗೊಳಿಸಲು ವಿವಿಧ ಕಾರ್ಯಕ್ರಮ ಮತ್ತು ಯೋಜನೆಗಳ ಮೂಲಕ ಪ್ರಯತ್ನಿಸಿವೆ. ಆದರೆ ಆರೋಗ್ಯ ವಲಯದಲ್ಲಿ ನುರಿತ ಸಿಬ್ಬಂದಿಗಳ ಕೊರತೆ ಮತ್ತು ಸಿಬ್ಬಂದಿಗಳ ಮೇಲಿನ ವಿಪರೀತ ಒತ್ತಡಗಳ ಪರಿಣಾಮದಿಂದಾಗಿ ಈ ಗುರಿಯನ್ನು ತಲುಪುವಲ್ಲಿ ವಿಫಲತೆಯನ್ನು ಅನುಭವಿಸಿದೆವು. ಮೂಲ ಸೌಕರ್ಯಗಳ ಕೊರತೆ, ಅನಕ್ಷರತೆ, ಬಡತನ ಮತ್ತು ಇತ್ಯಾದಿ ಕೊರತೆಗಳು ಕೂಡ ವಿಫಲತೆಗೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಿದೆ. ಬಡತನ ಅತೀದೊಡ್ಡ ಕಾರಣವಾಗಿರುತ್ತದೆ, ಯಾಕೆಂದರೆ ಅದರ ಕಾರಣದಿಂದಲೇ ದೇಶದ ಬಹುತೇಕ ಜನರು ಮೂಲ ವೈದ್ಯಕೀಯ ಸೇವೆ ಪಡೆಯುವುದರಿಂದ ವಂಚಿತಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಮಾನ್ ಭಾರತ್ ಯೋಜನೆ (ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ) ಅತ್ಯಂತ ಭರವಸೆದಾಯಕವಾಗಿ ಕಾಣುತ್ತಿದೆ ಮತ್ತು ಇದು ಆರೋಗ್ಯ ವಲಯದಲ್ಲಿ ಹಿಡಿದಿರುವ ತುಕ್ಕನ್ನು ನಿವಾರಿಸಿ ಆರೋಗ್ಯ ಭಾರತದ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಬಲ್ಲದು ಎಂದೆನಿಸುತ್ತದೆ. ಯಾಕೆಂದರೆ, ಈ ಯೋಜನೆ ಪ್ರಮುಖವಾಗಿ ಬಡವರಿಗೆ ಪ್ರಯೋಜನಕಾರಿಯಾಗಿದೆ ಮತ್ತು ಅಗತ್ಯವಿರುವವರಿಗೆ ಆರೋಗ್ಯ ವಿಮೆಯನ್ನು ಕಲ್ಪಿಸಿ ಕುಟುಂಬದವರ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ. ಸುಮಾರು 1300 ಅನಾರೋಗ್ಯಗಳಿಗೆ ಈ ಯೋಜನೆಯಿಂದ ಕೈಗೆಟುಕುವ ದರದಲ್ಲಿ ಚಿಕಿತ್ಸೆ ದೊರೆಯಲಿದೆ. ಹಲವಾರು ಮಂದಿ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಚಿಕಿತ್ಸೆಗೆ ವ್ಯಯ ಮಾಡುತ್ತಾರೆ ಅಥವಾ ಸಾಲ ಪಡೆಯುತ್ತಾರೆ. ಆಯುಷ್ಮಾನ್ ಭಾರತ್ ಕೈಗೆಟುಕುವ ದರದಲ್ಲಿ ಆರೋಗ್ಯ ಚಿಕಿತ್ಸೆಯನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ.
ಕುಟುಂಬದಲ್ಲಿ ಎಷ್ಟೇ ಜನರಿದ್ದರೂ, ಯಾವುದೇ ವಯಸ್ಸಿನವರಾಗಿದ್ದರೂ ಅವರಿಗೆ ಈ ಯೋಜನೆಯು ವಾರ್ಷಿಕ 5 ಲಕ್ಷ ರೂಪಾಯಿಗಳ ಆರೋಗ್ಯ ವಿಮೆಯನ್ನು ಒದಗಿಸಲಿದೆ. ಸಾಮಾಜಿಕ-ಆರ್ಥಿಕ ಜಾತಿ ಗಣತಿಯ ಆಧಾರದಲ್ಲಿ ಅರ್ಹತೆ ಪಡೆದ, ಬಡತನ ರೇಖೆಗಿಂತ ಕೆಳಗಿರುವ 10.74 ಕೋಟಿ ಕುಟುಂಬಗಳಿಗೆ ಈ ಯೋಜನೆ ಸಿಗಲಿದೆ. ಅಂದಾಜು 50 ಕೋಟಿ ಭಾರತೀಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ಆಡಳಿತಾತ್ಮಕವಾಗಿ ದೃಷ್ಟಿ ಹರಿಸಿದರೆ, ದೇಶದಾದ್ಯಂತ ಹರಡಿರುವ ಇವುಗಳು ಗ್ರಾಮೀಣ ಭಾಗದಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸುತ್ತವೆ. ನಗರಗಳ ಆರೋಗ್ಯ ಸೇವೆಗಳನ್ನು ಪಡೆಯಲು ಶಕ್ತಿಯಿಲ್ಲದ ಗ್ರಾಮೀಣ ಪ್ರದೇಶದ ಜನರಿಗೆ ಸೇವೆ ಸಲ್ಲಿಸುವ ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನಮ್ಮ ಆರೋಗ್ಯ ವ್ಯವಸ್ಥೆಯ ಅತೀಮುಖ್ಯ ಆಧಾರಸ್ತಂಭಗಳಾಗಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆಯುಷ್ಮಾನ್ ಯೋಜನೆಯ ಅಡಿಪಾಯ ಕೂಡ ಆಗಿದೆ. ಸರ್ಕಾರವು ಈ ಕೇಂದ್ರಗಳನ್ನು ಆರೋಗ್ಯ ಮತ್ತು ವೆಲ್ನೆಸ್ ಸೆಂಟರ್ಗಳನ್ನಾಗಿ ಪರಿವರ್ತನೆಗೊಳಿಸಲಿದೆ. 1.5 ಕೋಟಿ ಸೆಂಟರ್ಗಳು ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸಲಿವೆ.
ನಿಜವಾದ ಅರ್ಥದಲ್ಲಿ, ಆಯುಷ್ಮಾನ್ ಭಾರತ್ ಯೋಜನೆಯು ರಾಷ್ಟ್ರೀಯ ಆರೋಗ್ಯ ರಕ್ಷಣಾ ಮಿಶನ್ ಆಗಿದೆ. ಈ ಯೋಜನೆಯಡಿ, ಬಹುತೇಕ ಎಲ್ಲಾ ಆಯಾಮಗಳ ಆರೋಗ್ಯಗಳು ಒಳಪಡಲಿವೆ. ಮೊದಲೇ ಇದ್ದ ರೋಗಗಳು, ಔಷಧಿಗಳು, ಸರ್ಜರಿ, ಡಯಾಗ್ನಿಸಿಸ್, ಪ್ಯಾರಾ ಮೆಡಿಕಲ್ ಸರ್ವಿಸ್, ಅಂಬುಲೆನ್ಸ್ ಸೇವೆಯಿಂದ ಹಿಡಿದು ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳೂ ಒಳಪಡಲಿವೆ. ಈಗ ಅಸ್ತಿತ್ವದಲ್ಲಿ ಇರುವ ಯಾವುದೇ ಆರೋಗ್ಯ ವಿಮಾ ಕಂಪನಿಗಳು ಅಥವಾ ಯೋಜನೆಗಳು ಇವೆಲ್ಲವನ್ನೂ ಒಳಗೊಂಡಿಲ್ಲ. ಆಯುಷ್ಮಾನ್ ಭಾರತ್ ಪ್ರಾಥಮಿಕ ಆರೋಗ್ಯ ಸೇವೆ ಸೇರಿದಂತೆ ಪ್ರಮುಖವಾಗಿ ಸೆಕಂಡರಿ ಮತ್ತು ತೃತೀಯ ಹಂತದ ಚಿಕಿತ್ಸೆಗಳಿಗೆ ಹೆಚ್ಚು ಗಮನ ಕೇಂದ್ರೀಕರಿಸಿದೆ.
ಆಯುಷ್ಮಾನ್ ಭಾರತ್ ಮೋದಿ ಆಡಳಿತ ನೀಡಿರುವ ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆಯಾಗಿದೆ. 1.5 ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಅದು ಅಪಾರ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಸಪೋರ್ಟ್ ಸಿಬ್ಬಂದಿಗಳು ಹೆಚ್ಚಿನ ಪ್ರಮಾಣದಲ್ಲಿ ಈ ಕೇಂದ್ರಗಳಿಗೆ ಬೇಕಾಗಲಿದ್ದಾರೆ. ಸರ್ಕಾರೇತರ ಆಸ್ಪತ್ರೆಗಳಿಂದಲೂ ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಅತ್ಯಧಿಕ ಪ್ರಮಾಣದ ಹೂಡಿಕೆಯನ್ನು ಇದು ಕಾಣಲಿದೆ, ಸಾರ್ವಜನಿಕ ಗುರಿಯನ್ನು ತಲುಪುವತ್ತ ದಾಪುಗಾಲು ಇಡುತ್ತಲೇ ಇದು ಖಾಸಗಿ ವಲಯವನ್ನು ಪ್ರಗತಿಯತ್ತ ಕೊಂಡೊಯ್ಯಲಿದೆ. ಇದು ಭಾರತದ ಆರೋಗ್ಯ ವಲಯಕ್ಕೆ ಸಂಜೀವಿನಿಯಾಗಲಿದೆ. ಆರೋಗ್ಯ ಭಾರತದಿಂದ ನವ ಭಾರತದ ನಿರ್ಮಾಣವಾಗಲಿದೆ.
ಭಾರತದ ಆರೋಗ್ಯ ಸೇವಾ ವಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ತೆಗೆದುಕೊಂಡ ಅತ್ಯಂತ ದೂರದೃಷ್ಟಿಯ ನಿರ್ಧಾರ ಶ್ಲಾಘನಾರ್ಹವಾಗಿದೆ. ಇದಕ್ಕಾಗಿ ಮೋದಿಗೆ ವಿಶ್ವ ನಾಯಕರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ ಮತ್ತು ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವಿಶ್ವದ ಇತರರಿಗೂ ಇದು ಪ್ರೇರಣಾದಾಯಕವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.