ತಿರುವನಂತಪುರಂ: ದೇಶ ಮತ್ತು ವಿದೇಶದಲ್ಲಿ ಭಾರೀ ಖ್ಯಾತಿ ಹೊಂದಿರುವ ಕೇರಳ ಆರ್ಯುವೇದಕ್ಕೆ ಇನ್ನು ಮುಂದೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಟೆನ್ನಿಸ್ ಲೆಜೆಂಡ್ ಸ್ಟೆಫಿ ಗ್ರಾಫ್ ಕಾರ್ಯನಿರ್ವಹಿಸಲಿದ್ದಾರೆ.
ಆರ್ಯುವೇದವನ್ನು ಮತ್ತಷ್ಟು ಪ್ರಸಿದ್ಧಿಗೊಳಿಸುವುದು, ಆ ಮೂಲಕ ದೇಶಿ, ವಿದೇಶಿಗರನ್ನು ಕೇರಳದತ್ತ ಆಕರ್ಷಿಸುವ ಮಹತ್ವದ ಹೊಣೆ ಅವರ ಮೇಲಿದೆ.
ಮದ್ಯ ನಿಷೇಧದಿಂದ ಪ್ರವಾಸೋದ್ಯಮಕ್ಕೆ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಕೇರಳ ಸರ್ಕಾರ ಆರ್ಯುವೇದದ ಮೊರೆ ಹೋಗಿದೆ. ಅದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಜರ್ಮನ್ನ ಲೆಜಂಡರಿ ಟೆನ್ನಿಸ್ ಆಟಗಾರ್ತಿಯನ್ನೇ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಪ್ರವಾಸೋದ್ಯಮದ ಭಾಗವಾದ ’ವಿಸಿಟ್ ಕೇರಳ’ ಯೋಜನೆಯ ಅಡಿಯಲ್ಲಿ ಗ್ರಾಫ್ ಅವರನ್ನು ಆರ್ಯುವೇದ ರಾಯಭಾರಿಯಾಗಿ ನೇಮಿಸಲಾಗಿದೆ.
ಆರ್ಯುವೇದ ರಾಯಭಾರಿ ಆಗಿರುವುದಕ್ಕೆ ಸ್ಟೆಫ ಗ್ರಾಫ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.