ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರಕ್ಕೇರಿಸಲು ಅನಿವಾಸಿ ಭಾರತೀಯರು ಟೊಂಕ ಕಟ್ಟಿದ್ದಾರೆ. ಬರೋಬ್ಬರಿ 30 ದೇಶಗಳಲ್ಲಿ ಮೋದಿಯವರ ಪರವಾಗಿ ಅಭಿಯಾನ ನಡೆಯಲಿದೆ. ಭಾನುವಾರ ಐಕಾನಿಕ್ ಸಿಡ್ನಿ ಒಪೇರಾ ಹೌಸ್ನಲ್ಲಿ ದೊಡ್ಡ ಮಟ್ಟದ ಸಮಾವೇಶ ನಡೆಯಲಿದೆ. ಅಪಾರ ಸಂಖ್ಯೆಯ ಅನಿವಾಸಿ ಭಾರತೀಯರು ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
NRI 4 NAMO ಎಂಬ ಶೀರ್ಷಿಕೆಯಡಿಯಲ್ಲಿ ಹಲವಾರು ಸಭೆ ಸಮಾರಂಭಗಳು ಭಾರತದ ಹೊರಗಡೆ ನಡೆಯಲಿದೆ. ಓವರ್ ಸೀಸ್ ಫ್ರೆಂಡ್ಸ್ ಆಫ್ ದಿ ಭಾರತೀಯ ಜನತಾ ಪಾರ್ಟಿ ಸಭೆಗಳ ಉಸ್ತುವಾರಿಯನ್ನು ನೋಡಿಕೊಳ್ಳಲಿದೆ. ಕಳೆದ ಐದು ವರ್ಷದಲ್ಲಿ ಈ ಸಂಘಟನೆ 3 ವಿವಿಧ ದೇಶಗಳಿಗೆ ತನ್ನ ನೆಲೆಯನ್ನು ವಿಸ್ತಾರಗೊಳಿಸಿದೆ.
ಭಾರತ ಮತ್ತು ತಾವು ನೆಲೆಸಿರುವ ದೇಶಗಳಲ್ಲಿ ಬಿಜೆಪಿ ಪರವಾಗಿ ಅಭಿಯಾನವನ್ನು ನಡೆಸಲು ಈ ಅನಿವಾಸಿ ಭಾರತೀಯರು ಸಹಾಯ ಮಾಡುತ್ತಿದ್ದಾರೆ.
ಪ್ರಧಾನಿಯಾದ ಬಳಿಕ ಮೋದಿಯವರು ವಿದೇಶಗಳಿಗೆ ತೆರಳಿ ಆ ದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರೊಂದಿಗೆ ಸಂವಾದ ಸಮಾಲೋಚನೆಗಳನ್ನು ನಡೆಸುತ್ತಲೇ ಬಂದಿದ್ದಾರೆ. ಇದರಿಂದಾಗಿ ಅವರಿಗೆ ವಿದೇಶದಲ್ಲಿ ಅಭಿಮಾನಿ ಬಳಗ ಹೆಚ್ಚಾಗುತ್ತಲೇ ಬರುತ್ತಿದೆ. 2014ಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಅನಿವಾಸಿ ಭಾರತೀಯರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದರಿಂದಾಗಿ ಓವರ್ ಸೀಸ್ ಫ್ರೆಂಡ್ಸ್ ಆಫ್ ದಿ ಭಾರತೀಯ ಜನತಾ ಪಾರ್ಟಿ ತನ್ನ ನೆಲೆಯನ್ನು 30 ದೇಶಗಳಲ್ಲಿ ವಿಸ್ತರಿಸಲು ಸಹಾಯಕವಾಗಿದೆ.
2019ರ ಚುನಾವಣೆಯ ವೇಳೆಗೆ ಅಪಾರ ಪ್ರಮಾಣದ ಅನಿವಾಸಿ ಭಾರತೀಯರು ಭಾರತಕ್ಕೆ ಬಂದು ಮೋದಿ ಪರವಾಗಿ ಮತ ಚಲಾವಣೆ ಮಾಡುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.