ದೇಶದ ಯುವಜನತೆ ಸಮಾಜದ ಅತೀ ಮುಖ್ಯ ವರ್ಗ. ಯುವಜನತೆಗೆ ದೇಶಕ್ಕೆ ಅತ್ಯಮೂಲ್ಯವಾದ ಆಸ್ತಿ. ಯಂತ್ರಕ್ಕೆ ಅತ್ಯುತ್ತಮವಾದ ಆಯಿಲ್ ಇದ್ದಂತೆ, ದೇಶಕ್ಕೆ ಯುವ ಜನತೆ ಇರುತ್ತಾರೆ. ನಮ್ಮ ಇಂದಿನ ಸರ್ಕಾರ ಯುವಜನತೆಯ ಪ್ರಾಮುಖ್ಯತೆಯ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡಿದೆ. ಹೀಗಾಗಿ ಯುವಕ ಯುವತಿಯರಿಗೆ ಪ್ರಯೋಜನಕಾರಿಯಾದಂತಹ ಹಲವಾರು ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಮೋದಿ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಯುವಶಕ್ತಿಯನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಯುವ ಶಕ್ತಿಯನ್ನು ಅಮೋಘವನ್ನಾಗಿಸಲು, ಸರ್ಕಾರವು ಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುವ, ಕ್ರೀಡಾ ಮತ್ತು ಇತರ ಚಟುವಟಿಕೆಗಳನ್ನು ಉತ್ತೇಜಿಸುವ ಕಡೆಗೆ ಕಾರ್ಯೋನ್ಮುಖಗೊಂಡಿದೆ. ವಾಸ್ತವವಾಗಿ, ಶಿಕ್ಷಣ ವ್ಯವಸ್ಥೆಯ ವಿಚಾರದಲ್ಲಿ, ಅಧ್ಯಯನವನ್ನು ಉತ್ತಮಗೊಳಿಸುವತ್ತ ಮತ್ತು ಉತ್ತಮ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವತ್ತ ಮಾತ್ರ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗುತ್ತಿಲ್ಲ, ಬದಲಿಗೆ ಅಧ್ಯಯನದ ಪರಿಸರವನ್ನು ಹೆಚ್ಚು ಆರಾಮದಾಯಕ ಮತ್ತು ಅನುಕೂಲಕರವನ್ನಾಗಿಸಲಾಗುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿ ಶೈಕ್ಷಣಿಕ ಮೂಲ ಸೌಕರ್ಯವನ್ನು ಸರ್ಕಾರವು ವೃದ್ಧಿಸುತ್ತಿದೆ. ಈ ಮೂಲಕ ಶಿಕ್ಷಣವು ದೇಶದ ಮೂಲೆ ಮೂಲೆಯನ್ನೂ ತಲುಪುವಂತೆ ನೋಡಿಕೊಳ್ಳಲಾಗುತ್ತಿದೆ. ಆಳವಾದ ಮತ್ತು ಶೈಕ್ಷಣಿಕವಾದ ಒಂದು ಆರಂಭವನ್ನು ಹೊಂದಲು ಪ್ರತಿ ಮಗುವಿಗೆ ಅವಕಾಶ ದೊರೆಯುವುದರೊಂದಿಗೆ, ಶೈಕ್ಷಣಿಕ ವ್ಯವಸ್ಥೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದರಿಂದ ಬರುವ ಕೌಶಲ್ಯಗಳ ಕಾರಣದಿಂದ ಜೀವನದ ಗುಣಮಟ್ಟವು ಖಂಡಿತವಾಗಿ ಹೆಚ್ಚಾಗುತ್ತದೆ ಎಂಬುದನ್ನು ನಾವು ಊಹಿಸಬಹುದಾಗಿದೆ.
ನವೀನ ಕೌಶಲ್ಯಗಳನ್ನು ಬೆಳೆಸುವ ಪ್ರವೃತ್ತಿ ಈಗ ಶಾಲೆಗಳಲ್ಲಿ ಹೆಚ್ಚಳವಾಗಿದೆ ಮತ್ತು ಕೌಶಲ್ಯಭರಿತ ಶಿಕ್ಷಣ ನಿರ್ಮಾಣ ಪ್ರಕ್ರಿಯೆಯಲ್ಲಿ 60 ಲಕ್ಷ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾಗಿದೆ. ಇದಲ್ಲದೆ, ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳ ಪ್ರಮಾಣವು ದೇಶದ ಶೈಕ್ಷಣಿಕ ಸಂಸ್ಥೆಗಳಿಗೆ ಸರಿಹೊಂದುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಆದ್ದರಿಂದ, ಬೇಡಿಕೆ ಮತ್ತು ಪೂರೈಕೆಯನ್ನು ಸರಿ ಹೊಂದಿಸಲು ಹಲವಾರು ವಿಶ್ವವಿದ್ಯಾನಿಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 7 ಐಐಟಿಗಳು, 7 ಐಐಎಂಗಳು, 14 ಐಐಐಟಿಗಳು, 1 ಎನ್ಐಟಿ, 2 ಐಐಎಸ್ಇಆರ್ ಗಳು, 103 ಕೇಂದ್ರೀಯ ವಿದ್ಯಾಲಯಗಳು ಮತ್ತು 62 ನವೋದಯ ವಿದ್ಯಾಲಯಗಳನ್ನು ಸರ್ಕಾರವು ತೆರೆದಿದೆ. ಸರ್ಕಾರವು 60 ವಿಶ್ವವಿದ್ಯಾನಿಲಯಗಳಿಗೆ ಶ್ರೇಣೀಕೃತ ಸ್ವಾಯತ್ತತೆಯನ್ನು ನೀಡಿದೆ ಮತ್ತು ಐಐಎಂ ಕಾಯ್ದೆಯನ್ನು ಅಂಗೀಕರಿಸುವ ಮೂಲಕ ಅನೇಕ ಗುಣಮಟ್ಟದ ಸಂಸ್ಥೆಗಳಿಗೆ ಸ್ವಾಯತ್ತತೆಯನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಅನುಭವವನ್ನು ಹೆಚ್ಚಿಸಲು ಹಲವಾರು ಆಧುನಿಕ ವ್ಯವಸ್ಥೆಯನ್ನು ಒದಗಿಸಲಾಗಿದೆ ಮತ್ತು ದಿವ್ಯಾಂಗ ಮಕ್ಕಳಿಗೆ ಆರಾಮದಾಯಕತೆಯನ್ನು ಒದಗಿಸಲು 50,000 ವಿಶೇಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಉತ್ತಮ ಶಿಕ್ಷಕ ತರಬೇತಿಗೆ ಹೆಚ್ಚಿನ ಗಮನವನ್ನು ನೀಡುವ ಮೂಲಕ ಅತ್ಯುತ್ತಮ ಗುಣಮಟ್ಟದ ಶಿಕ್ಷಕರನ್ನು ತಯಾರಿಸುವತ್ತ ಸರ್ಕಾರ ಚಿತ್ತ ಹರಿಸಿದೆ. ಉತ್ತಮ ಶಿಕ್ಷಕರಿಂದ ಮಾತ್ರ ಅತ್ಯುತ್ತಮ ಶಿಕ್ಷಣವನ್ನು ಒದಗಿಸಲು ಸಾಧ್ಯ.
ಭಾರತದಲ್ಲಿ ಅಧ್ಯಯನದ ಸನ್ನಿವೇಶವನ್ನು ಮತ್ತಷ್ಟು ವರ್ಧಿಸಲು ಏನು ಮಾಡಲಾಗುತ್ತಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆಯೆಂದರೆ, ಸರ್ಕಾರವು 5 ವರ್ಷಗಳಿಗೆ ರೂ. 70,000- ರೂ. 80,000ದವರೆಗೆ ಪಿಎಂ ರಿಸರ್ಚ್ ಫೆಲೋಶಿಪ್ ವಿದ್ಯಾರ್ಥಿವೇತನವನ್ನು ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಸಂಶೋಧನೆಯನ್ನು ನಡೆಸಲು Ph.D ಗೆ ರೂ. 2 ಲಕ್ಷ ವಾರ್ಷಿಕ ಅನುದಾನವನ್ನು ಒದಗಿಸುತ್ತಿದೆ. ಇದು ಅಧ್ಯಯನಗಳನ್ನು ಕೈಗೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಕೇವಲ ಸಹಾಯಕವಾಗುತ್ತಿರುವುದು ಮಾತ್ರವಲ್ಲ, ಉನ್ನತ ಶಿಕ್ಷಣವನ್ನು ಪರಿಗಣಿಸಲು ಮತ್ತು ಗರಿಷ್ಠ ಮಿತಿಗೆ ತಮ್ಮ ಪ್ರತಿಭೆಯನ್ನು ಬಳಸಿಕೊಳ್ಳಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುತ್ತದೆ. ಈಗ, ಎಲ್ಲಾ ವೃತ್ತಿಪರ ಪರೀಕ್ಷೆಗಳನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಗಳು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ನಡೆಸುತ್ತಿವೆ.
ಸ್ವಾವಲಂಬನೆಯ ಪ್ರಾಮುಖ್ಯತೆ
ಬದಲಾಗುತ್ತಿರುವ ಸಮಯದೊಂದಿಗೆ ಬದಲಾಗಬೇಕಾದ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡ ನಂತರ ಮತ್ತು ದೇಶದ ಯುವಜನರಿಗೆ ಸಹಾಯ ಮಾಡುವ ಕಾರ್ಯವನ್ನು ಕೈಗೊಂಡ ನಂತರ, ಮೋದಿ ಸರಕಾರ ಸ್ವಯಂ ಉದ್ಯೋಗದ ಅವಕಾಶಗಳನ್ನು ಯುವಕರಿಗೆ ಒದಗಿಸುವಲ್ಲಿ ಸಹಾಯ ಮಾಡುತ್ತಿದೆ. 15,005 ಸ್ಟಾರ್ಟ್ಅಪ್ಗಳನ್ನು ಗುರುತಿಸಲಾಗಿದೆ ಮತ್ತು ಭಾರತದ ಸ್ಟಾರ್ಟ್ಅಪ್ ಸನ್ನಿವೇಶವನ್ನು ಬಲಪಡಿಸಲು ಹೂಡಿಕೆಯನ್ನು ಮಾಡಲಾಗುತ್ತಿದೆ ಮತ್ತು ಯುವಕರನ್ನು ತಮ್ಮ ಕಾಲಿನ ಮೇಲೆ ನಿಂತುಕೊಳ್ಳಲು ಈ ಮೂಲಕ ಸಹಾಯ ಮಾಡಲಾಗುತ್ತಿದೆ. NASSCOM ವರದಿಯ ಪ್ರಕಾರ, ಸ್ಟಾರ್ಟ್ಅಪ್ ಉದ್ಯಮವು ಕಳೆದ ಕೆಲವು ವರ್ಷಗಳಲ್ಲಿ 4 ರಿಂದ 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಮತ್ತು ಅಭಿವೃದ್ಧಿ ಹೊಂದಿದ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯ ರಾಷ್ಟ್ರಗಳ ಪೈಕಿ ಭಾರತಕ್ಕೆ 3 ನೇ ಸ್ಥಾನ ಬರುವಂತೆ ಮಾಡಿದೆ.
ಯಾವಾಗಲೂ ಹೊಸ ವ್ಯವಹಾರವನ್ನು ಪ್ರಾರಂಭಿಸುವುದಕ್ಕೆ ಹಣದ ಅಗತ್ಯವಿರುತ್ತದೆ, ಆದರೆ ಈ ಹಣವು ದೊಡ್ಡ ಮಟ್ಟದಲ್ಲಿ ಅಥವಾ ಸಣ್ಣ ಮಟ್ಟದಲ್ಲಿ ಬೇಕಾಗಬಹುದು. ಆದರೆ ಹೊಸ ವ್ಯವಹಾರವನ್ನು ಶುರುಮಾಡಬೇಕೆಂದು ಬಯಸುವ ಬಹಳಷ್ಟು ಜನರು ಬ್ಯಾಂಕುಗಳು ಸಾಲಗಳನ್ನು ನೀಡದ ಕಾರಣದಿಂದಾಗಿ ಹಣವನ್ನು ಹೊಂದಿಸುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ಸರ್ಕಾರ ಮುದ್ರಾ ಯೋಜನೆಯನ್ನು ಪರಿಚಯಿಸಿದೆ. 2015 ರ ಏಪ್ರಿಲ್ ನಿಂದ ಸುಮಾರು 15.33 ಕೋಟಿ ಮುದ್ರಾ ಸಾಲಗಳನ್ನುನೀಡಿ ಜನರಿಗೆ ತಮ್ಮ ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯ ಮೂಲಕ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ತರಬೇತಿಯ ಅವಕಾಶವನ್ನು ಸರ್ಕಾರ ಹೆಚ್ಚಿಸಿದೆ. ಈ ಕೌಶಲ್ಯ ಪ್ರಮಾಣೀಕರಣ ಯೋಜನೆಯ ಉದ್ದೇಶವು ಹೆಚ್ಚಿನ ಸಂಖ್ಯೆಯ ಭಾರತೀಯ ಯುವಕರನ್ನು ಉದ್ಯಮ-ಸಂಬಂಧಿತ ಕೌಶಲ್ಯ ತರಬೇತಿಯನ್ನು ಪಡೆಯಲು ಅನುಕೂಲವಾಗುವಂತೆ ಮಾಡುವುದಾಗಿದೆ. ಅದು ಯುವಕರಿಗೆ ಉತ್ತಮ ಜೀವನಾಧಾರವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಈ ಯೋಜನೆಯಡಿಯಲ್ಲಿ, ತರಬೇತಿ ಮತ್ತು ಮೌಲ್ಯಮಾಪನ ಶುಲ್ಕಗಳನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸುತ್ತದೆ.
ದೇಶದ ಕ್ರೀಡೆಗೆ ಉತ್ತೇಜನ
ಕ್ರೀಡೆ ಜೀವನದ ಅವಿಭಾಜ್ಯ ಭಾಗವಾಗಿದೆ ಮತ್ತು ಇದನ್ನು ಮೋದಿ ಸರ್ಕಾರ ಚೆನ್ನಾಗಿಯೇ ಅರ್ಥಮಾಡಿಕೊಂಡಿದೆ. ಹೀಗಾಗಿ ಅವರು ಖೇಲೋ ಇಂಡಿಯಾದಡಿ ಪ್ರತಿಭಾವಂತ ಕ್ರೀಡಾಪಟುಗಳಿಗೆ 8 ವರ್ಷಗಳವರೆಗೆ ಹಣಕಾಸು ನೆರವನ್ನು ನೀಡುತ್ತಿದ್ದಾರೆ. ಈ ಹಣವನ್ನು ಕ್ರೀಡಾಪಟುಗಳು ತರಬೇತಿಯನ್ನು ಪಡೆಯಲು, ಕ್ರೀಡಾ ಪರಿಕರಗಳನ್ನು ಪಡೆಯಲು ಬಳಸಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೇ, ಸರ್ಕಾರ ಪ್ರತಿಭಾವಂತ ಕ್ರೀಡಾಳುಗಳ ಹುಡುಕಾಟಕ್ಕಾಗಿ ಪೋರ್ಟಲ್ ಅನ್ನು ಕೂಡ ಹೊರತಂದಿದೆ. ಇಲ್ಲಿ ಪ್ರತಿಭಾವಂತ ಯುವಕರು ತಮ್ಮ ಸಾಧನೆಗಳ ಬಗ್ಗೆ ಹೇಳಿಕೊಳ್ಳಬಹುದು. ಈ ಮಾರ್ಗದ ಮೂಲಕ ಕೇಂದ್ರ ಉತ್ತಮ ಫಲಿತಾಂಶವನ್ನು ಪಡೆಯಲು ಕ್ರೀಡಾಳುಗಳನ್ನು ಪ್ರೇರೇಪಿಸುತ್ತಾ ಬಂದಿದೆ.
ಏನೂ ಸಾಧನೆ ಮಾಡದೆ ಉತ್ತಮ ಭವಿಷ್ಯದ ಕನಸು ಕಾಣುವುದು ವ್ಯರ್ಥ. ಎಲ್ಲಾ ಅರ್ಥದಲ್ಲೂ ಭಾರತವನ್ನು ಶ್ರೇಷ್ಠ ಭಾರತವನ್ನಾಗಿಸಲು ಪ್ರಧಾನಿಯವರು ಎಲ್ಲಾ ಕ್ಷೇತ್ರದಲ್ಲೂ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ನಮಗಾಗಿ ಸರ್ಕಾರ ಏನು ಮಾಡಿದೆಯೋ ಅದರಿಂದ ಪ್ರೇರಣೆಯನ್ನು ಪಡೆದುಕೊಂಡು, ನಾವು ನಮ್ಮಿಂದಾದ ಕೊಡುಗೆಯನ್ನು ನೀಡಬೇಕು, ಈ ಮೂಲಕ ಅತ್ಯುನ್ನತ ಶ್ರೇಷ್ಠ ರಾಷ್ಟ್ರದ ನಿರ್ಮಾಣ ಮಾಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.