ಬಂಟ್ವಾಳ : ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಬಿಸಿ ರೋಡ್ ರಂಗೋಲಿ ಹಾಲ್ ನಲ್ಲಿ ಸೇವಾ ಭಾರತಿ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಸಾರ್ವಜನಿಕ ವಿಶ್ವಯೋಗ ದಿನಚರಣೆಯನ್ನು ಜೂ. ೨೧ರಂದು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ ಪಿ ಎಸ್ ರಾಹುಲ್ ಕುಮಾರ್ {ಹೆಚ್ಚುವರಿ ಪೋಲೀಸ್ಅಧೀಕ್ಷಕರು} ವಹಿಸಿ ಮಾತನಾಡಿದ ಅವರು ಯೋಗವನ್ನು ಪ್ರತಿಯೊಬ್ಬ ವ್ಯಕ್ತಿಯು ಅನುಸರಿಸಬೇಕಾದ ಅನಿವಾರ್ಯತೆ ಇಂದು ನಿರ್ಮಾಣವಾಗಿದೆ. ವಿಶ್ವಯೋಗದಿನದ ಈ ಶುಭ ಸಂಧರ್ಭದಲ್ಲಿ ಸಾಮಾನ್ಯ ಜನರಿಗೆ ಕೂಡ ಯೋಗವನ್ನು ಮುಟ್ಟಿಸುವ ಸಲುವಾಗಿ ಸೇವಾ ಭಾರತಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಶ್ಲಾಂಘನೀಯವಾಗಿದೆ ಎಂದು ಶುಭ ಹಾರೈಸಿದರು.
ನ್ಯಾಯವಾದಿ ಪ್ರಸಾದ್ ಕುಮಾರ್ ವಿಶ್ವಯೋಗ ದಿನದ ಮಹತ್ವವನ್ನು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾಪ್ರಸಾದ್ ವಂದೇಮಾತರಂನೊಂದಿಗೆ ಯೋಗ ಶಿಕ್ಷಕರಾದ ಸಂಜಯ ಸಿ.ವಿ. ಅವರು ಯೋಗ ಪ್ರಾತ್ಯಕ್ಷತೆ ಮತ್ತು ಯೋಗದಿಂದ ಜನರಿಗೆ ಪ್ರಯೋಜನಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಂಟ್ವಾಳ ಸಂಘ ಚಾಲಕಕರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ಸೇವಾ ಭಾರತಿ ಬಂಟ್ವಾಳ ಇದರ ಅಧ್ಯಕ್ಷರಾಗಿರುವ ನ್ಯಾಯವಾದಿ ರಮೇಶ ಉಪದ್ಯಾಯ ಉಪಸ್ಥಿತರಿದ್ದರು. ಬಳಿಕ ನಡೆದ ಪ್ರಾಣಾಯಮ ಸೂರ್ಯನಮಸ್ಕಾರ ಅಭ್ಯಾಸ ವರ್ಗ ನಡೆಸಲಾಯಿತು. ಅಲ್ಲದೇ ಮಧು ಮೇಹ ಮುಕ್ತ ಭಾರತ ನಿರ್ಮಾಣ ಮಾಡುವ ಕುರಿತು ವಿಶೇಷ ಮಾಹಿತಿ ನೀಡಿ-೧೦ದಿನದ ಮಧು ಮೇಹ ಮುಕ್ತ ಯೋಗ ಶಿಬಿರವನ್ನು ಬ್ರಾಹ್ಮನ ಪರಿಷತ್ ಬಂಟ್ವಾಳ ಇಲ್ಲಿ ಹಮ್ಮಿಕೊಳ್ಳಲಾಗುವುದು ಅಲ್ಲದೇ ಪ್ರತೀ ದಿನ ಬೆಳಗ್ಗೆ ಯೋಗ ಶಿಕ್ಷಣ ಮುಂದುವರಿಸಲಾಗುವುದು ಎಂದು ದಾಮೋದರ ನೆತ್ತೆರ್ಕೆರೆ ಹೇಳಿದರು. ಸತೀಶ ಪಲ್ಲಮಜಲು ಧನ್ಯವಾದ ವಿತ್ತರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.