ವಿರೋಧ ಪಕ್ಷಗಳು ಹಿಂದುಗಳ ದಾರಿ ತಪ್ಪಿಸುವ ಭಾಗವಾಗಿ ಮೋದಿ ಸರ್ಕಾರ ಇದುವರೆಗೂ ರಾಮ ಮಂದಿರವನ್ನು ನಿರ್ಮಿಸದೆ ಮೋಸಗೊಳಿಸಿದೆ ಎನ್ನುವ ಆರೋಪಗಳನ್ನು ಮಾಡುತ್ತಲೇ ಬಂದಿವೆ. ಅಷ್ಟಾಗಿಯೂ ಎಲ್ಲ ವಿವಾದಗಳಿಂದಲೂ ಮುಕ್ತವಾಗಿ ಮುಂದೆಂದೂ ಯಾವುದೇ ಅದೇ ತಡೆಗಳೂ ಉಂಟಾಗದ ರೀತಿಯಲ್ಲಿ ಸಂವಿಧಾನಬದ್ಧ ಮಾರ್ಗದಲ್ಲಿಯೇ ರಾಮ ಮಂದಿರ ನಿರ್ಮಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮೋದಿ ಸರ್ಕಾರ ಮುಂದುವರಿಸಿದೆ. ಆದರೆ ಅಂತಹಾ ಪ್ರಯತ್ನಗಳಿಗೂ ಅಡ್ಡಗಾಲು ಹಾಕುತ್ತಿರುವ ವಿರೋಧ ಪಕ್ಷಗಳ ನಾಯಕರುಗಳಲ್ಲಿ ಒಬ್ಬರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಇತ್ತೀಚೆಗಷ್ಟೇ 2019 ರ ಲೋಕಸಭೆ ಚುನಾವಣೆ ಫಲಿತಾಂಶದ ತನಕ ರಾಮ ಮಂದಿರ ವಿವಾದದ ತೀರ್ಪು ಮುಂದೂಡಬೇಕೆಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾರೆ. ವಿರೋಧಪಕ್ಷಗಳ ಒಡೆದು ಆಳುವ ನೀತಿಯನ್ನು ಇದರಿಂದಲೇ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ.
ಇತ್ತೀಚೆಗಷ್ಟೇ ದೇಶದ ಜನರು ಈ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದರಿಂದ ವಿಚಾರಣೆಯನ್ನು ಚುರುಕುಗೊಳಿಸಿ ಆದಷ್ಟು ತ್ವರಿತಗತಿಯಲ್ಲಿ ತೀರ್ಪು ನೀಡಬೇಕಾಗಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಕೂಡಾ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ನಡುವೆ ವಿವಾದಿತ 2.7 ಎಕರೆ ಭೂಮಿಯನ್ನು ಹೊರತುಪಡಿಸಿ, ವಿವಾದಿತವಲ್ಲದ 67 ಎಕರೆ ಭೂಮಿಯನ್ನು ರಾಮ ಮಂದಿರ ನಿರ್ಮಾಣ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ವಿವಾದಿತವಲ್ಲದ ಭೂಮಿಯ ಹಸ್ತಾಂತರಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದರೆ ಯಾವುದೇ ಕ್ಷಣದಲ್ಲೂ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿಬಿಡಲಿದೆ.
ಧಾರ್ಮಿಕವಾಗಿ ಅತ್ಯಂತ ಮಹತ್ವದ ಹಾಗೂ ಭಕ್ತರು ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿರುವ ಅಯೋಧ್ಯೆಯನ್ನು ತಲುಪುವ 84 ಕೋಸಿ ಪರಿಕ್ರಮ ಯಾತ್ರೆಯ ಮಾರ್ಗ ಹಾಗೂ ರಾಮ ವನ ಗಮನ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು 2015ಕ್ಕೂ ಮುನ್ನವೇ ಈ ಮಹತ್ವದ ಯೋಜನೆಗಳ ರೂಪು ರೇಷೆಯನ್ನು ತಯಾರಿ ಮಾಡಿಕೊಳ್ಳಲಾಗಿತ್ತು. ಇದೀಗ 84 ಕೋಸಿ ಪರಿಕ್ರಮ ಮಾರ್ಗವನ್ನು ವಿಸ್ತರಣೆ ಮಾಡಿ ನಾಲ್ಕು ಪಥದ ರಸ್ತೆಯನ್ನಾಗಿಸಲಾಗುತ್ತಿದೆ. 250 ಕಿ.ಮೀ ಇರುವ ರಸ್ತೆಯನ್ನು 91 ಕಿ.ಮೀ ನಷ್ಟು ವಿಸ್ತರಣೆ ಮಾಡಲಾಗುತ್ತಿದೆ. ಪವಿತ್ರ ಅಯೋಧ್ಯಾ ನಗರಕ್ಕೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿಟ್ಟಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇವುಗಳ ಜೊತೆಗೆ
• ರಾಮಾಯಣದ ಎಲ್ಲಾ ಮಾಹಿತಿಗಳನ್ನು ಹೊಂದಿರುವ ಸಂಗ್ರಹಾಲಯದ ಸ್ಥಾಪನೆಗೆ ಚಾಲನೆ
• ರಾಮಾಯಣ ಥೀಮ್ ಪಾರ್ಕ್ ನಿರ್ಮಾಣಕ್ಕೆ ಚಾಲನೆ
• ಅಯೋಧ್ಯೆ ಅಭಿವೃದ್ಧಿಗೆ 5000 ಕೋಟಿ ಅನುದಾನ
• ಸರಯೂ ನದಿಯ ದಂಡೆಯಲ್ಲಿ 221 ಅಡಿ ಎತ್ತರದ ಭಗವಾನ್ ಶ್ರೀ ರಾಮನ ಮೂರ್ತಿ
• ರಾಜ ದಶರಥನ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಮೆಡಿಕಲ್ ಕಾಲೇಜ್
ಹೀಗೆ ರಾಮ ಮಂದಿರ ನಿರ್ಮಾಣಕ್ಕೆ ಪೂರಕವಾಗಿ ಏನೇನು ಮಾಡಬೇಕೋ ಅದೆಲ್ಲವನ್ನೂ ಈಗಾಗಲೇ ಮಾಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.