ಸ್ವಾತಂತ್ರ್ಯದ ನಂತರ ಸುದೀರ್ಘ ಅವಧಿಯವರೆಗೂ ದೇಶದ ಈಶಾನ್ಯ ಭಾಗ ಭಾರತದಲ್ಲಿ ಇದ್ದೂ ಇಲ್ಲದಂತಿತ್ತು. ಇಲ್ಲಿನ ರಾಜ್ಯಗಳಿಗೆ ಅಭಿವೃದ್ಧಿ ತಲುಪಿಯೇ ಇರಲಿಲ್ಲ ಮತ್ತು ಅಲ್ಲಿನ ಜನರು ದೇಶದಿಂದ ಭಾಗಶಃ ಸಂಪರ್ಕವನ್ನು ಕಡೆದುಕೊಂಡಿದ್ದರು. ಆದರೆ, ಕೆಲವು ವರ್ಷಗಳಿಂದ ಅದರಲ್ಲೂ ಮುಖ್ಯವಾಗಿ 2014ರ ಚುನಾವಣೆಯ ಬಳಿಕ ಈಶಾನ್ಯ ಭಾಗದ ಉದ್ಧಾರಕ್ಕಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲಿನ ಜನರಿಗೆ ಉತ್ತಮ ಬದುಕು ಸಿಗುವಂತಾಗುತ್ತಿದೆ.
ಈಶಾನ್ಯ ಭಾಗದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಏನೇನು ಮಾಡಲಾಗಿದೆ, ಅಲ್ಲಿನ ಜನರ ಬದುಕು ಸುಧಾರಣೆಗಾಗಿ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಈ ಲೇಖನ ಬೆಳಕು ಚೆಲ್ಲಲಿದೆ. ಅಭಿವೃದ್ಧಿ ಮತ್ತು ಕೆಲವು ಸರ್ಕಾರಿ ಯೋಜನೆಗಳು ಹೇಗೆ ಈಶಾನ್ಯ ರಾಜ್ಯಗಳ ಜನರ ಬದುಕನ್ನು ಸುಧಾರಣೆಗೊಳಿಸಿದೆ ಎಂಬ ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಈಶಾನ್ಯ ಮಾತ್ರವಲ್ಲದೇ, ಇಡೀ ಭಾರತಕ್ಕಾಗಿ ನರೇಂದ್ರ ಮೋದಿ ಸರ್ಕಾರ ಆರಂಭಿಸಿದ ಒಂದು ಮಹತ್ವದ ಯೋಜನೆಯೆಂದರೆ ಅದು ‘ಸ್ವಚ್ಛ ಭಾರತ ಅಭಿಯಾನ’. ರೋಗಗಳನ್ನು ನಿರ್ಮೂಲನೆ ಮಾಡಬೇಕಾದರೆ ಸಮರ್ಪಕ ನೈರ್ಮಲ್ಯದ ಅಗತ್ಯ ಇದ್ದೇ ಇದೆ. ನೈರ್ಮಲ್ಯಕ್ಕಾಗಿ ಶೌಚಾಲಯಗಳು ನಿರ್ಮಾಣವಾಗಲೇ ಬೇಕು. 2014ರ ಪೂರ್ವದಲ್ಲಿ ಈಶಾನ್ಯ ಭಾಗದ ರಾಜ್ಯಗಳಲ್ಲಿ ಶೇ.40–60ರಷ್ಟು ನೈರ್ಮಲ್ಯಗಳಿತ್ತು. ಆದರೆ ಇಂದು ಇಲ್ಲಿನ ಎಲ್ಲಾ ರಾಜ್ಯಗಳು ಬಯಲುಶೌಚ ಮುಕ್ತಗೊಂಡಿವೆ ಮತ್ತು ಶೇ.100ರಷ್ಟು ನೈರ್ಮಲ್ಯಕ್ಕೆ ಒಳಪಟ್ಟಿವೆ.
ಇದನ್ನು ಹೊರತುಪಡಿಸಿ, ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಯಡಿ ಇಲ್ಲಿ ಎಂದಿಗಿಂತ ನಾಲ್ಕು ಪಟ್ಟು ಹೆಚ್ಚು ಗ್ರಾಮೀಣ ಮನೆಗಳನ್ನು ಐದು ವರ್ಷದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಕೆಳಗಿನ ಅಂಕಿಅಂಶದಲ್ಲಿ ಅದರ ಸ್ಪಷ್ಟ ವಿವರಣೆ ಇದೆ.
ತಲೆ ಮೇಲೊಂದು ಸೂರು ಇರುವುದು ಪ್ರತಿಯೊಬ್ಬನ ಮೂಲಭೂತ ಅಗತ್ಯತೆ. ದುರಾದೃಷ್ಟವೆಂದರೆ, ಹಿಂದಿನ ಸರ್ಕಾರ ಮನೆಗಳ ನಿರ್ಮಾಣದ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿತ್ತೇ ಹೊರತು ಆ ಭರವಸೆಯನ್ನು ಈಡೇರಿಸುವಲ್ಲಿ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ, 2019ರ ಫೆಬ್ರವರಿ 14ರವರೆಗೆ ಈಶಾನ್ಯ ಭಾಗದ ಸುಮಾರು 28,72,373 ಕುಟುಂಬಗಳಿಗೆ ಅಡುಗೆ ಅನಿಲದ ಸಂಪರ್ಕವನ್ನು ನೀಡಲಾಗಿದೆ. ಈ ಮೂಲಕ ಅಲ್ಲಿನ ಜನರಿಗೆ ಕಟ್ಟಿಗೆಯ ಅಡುಗೆಯಿಂದ ಮುಕ್ತಿಯನ್ನು ನೀಡಲಾಗಿದೆ. ಈ ಮೂಲಕ ಅವರ ಸುರಕ್ಷತೆ ಮತ್ತು ಆರೋಗ್ಯವನ್ನು ವೃದ್ಧಿಸುವ ಕಾರ್ಯವನ್ನು ಮಾಡಲಾಗಿದೆ. ಎಲ್ಪಿಜಿ ಸಂಪರ್ಕವನ್ನು ಒದಗಿಸುವುದರಿಂದ ಮಹಿಳೆಯರಿಗೆ ಅಸ್ತಮಾ ಸಮಸ್ಯೆ ಬಾದಿಸುವುದನ್ನು ತಡೆಗಟ್ಟಲಾಗುತ್ತಿದೆ.
ಇನ್ನು ಸೌಭಾಗ್ಯ ಯೋಜನೆಯಡಿ ಶೇ.100ರಷ್ಟು ವಿದ್ಯುದೀಕರಣದ ಸಾಧನೆಯನ್ನು ಮಾಡಲಾಗಿದೆ. ಅಡೆತಡೆಯಿಲ್ಲದೆ ಈಶಾನ್ಯದ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗುವಂತೆ ಮಾಡಲಾಗಿದೆ. ಇದರಿಂದ ಅಲ್ಲಿನ ಮಕ್ಕಳ ಓದುವಿಕೆ, ಜನರ ಕೆಲಸ ಕಾರ್ಯ, ಇನ್ನಿತರ ಕಾರ್ಯಗಳು ಸುಗಮವಾಗಿ ಸಾಗುತ್ತಿದೆ. ಶೇ.100ರಷ್ಟು ವಿದ್ಯುತ್ನ್ನು ಆ ಭಾಗಕ್ಕೆ ಪೂರೈಸಿದ ಬಳಿಕ ಅಲ್ಲಿನ ಸಾಕಷ್ಟು ಸಮಸ್ಯೆಗಳು ಬಗೆಹರಿದಿವೆ.
ಫೆಬ್ರವರಿ 14 ರಂತೆ ಒಟ್ಟು 1,73,17,204 ಬ್ಯಾಂಕ್ ಖಾತೆಗಳನ್ನು ಪ್ರಧಾನ್ ಮಂತ್ರಿ ಜನ ಧನ್ ಯೋಜನೆಯಡಿಯಲ್ಲಿ ಇಲ್ಲಿ ತೆರೆಯಲಾಗಿದೆ. ಇದರ ಮೂಲಕ ಸರ್ಕಾರದ ಯೋಜನೆಗಳು ಅಥವಾ ಬ್ಯಾಂಕಿಂಗ್ ಯೋಜನೆಗಳನ್ನು ಅವರು ಪಡೆಯಬಹುದು. ಈ ಬ್ಯಾಂಕ್ ಖಾತೆಯಿಂದ ಅನೇಕ ಪ್ರಯೋಜನಗಳಿವೆ, ಶೂನ್ಯ ಠೇವಣಿಯಲ್ಲಿ ಇದನ್ನು ತೆರೆಯಬಹುದಾಗಿದೆ. ಬ್ಯಾಂಕ್ ಖಾತೆಗಳನ್ನು ತೆರೆದ ನಂತರ, ಈ ಪ್ರದೇಶಗಳಲ್ಲಿ ನೇರ ಲಾಭದ ವರ್ಗಾವಣೆ ವ್ಯಾಪಕವಾಗಿ ಜನಪ್ರಿಯವಾಗಿದೆ ಎಂದು ಹೇಳಲಾಗಿದೆ, ಮತ್ತು ರೂ.6053 ಕೋಟಿ ಮೊತ್ತದ 4.87 ಕೋಟಿ ವ್ಯವಹಾರಗಳನ್ನು ಇದರಡಿ ಮಾಡಲಾಗುತ್ತಿದೆ. ಭೀಮ್, ಯುಪಿಐನಂತಹ ಅಪ್ಲಿಕೇಶನ್ಗಳು ಇಡೀ ದೇಶವನ್ನು ಪ್ರೋತ್ಸಾಹಿಸಿದ್ದು, ಆನ್ಲೈನ್/ನಗದು ರಹಿತ ವಹಿವಾಟುಗಳನ್ನು ಗಣನೀಯವಾಗಿ ಹೆಚ್ಚಿಸಿದೆ.
ಮುದ್ರಾ ಯೋಜನೆಯ ಮೂಲಕ ರೂ.10 ಲಕ್ಷದಷ್ಟು ಸಾಲಗಳನ್ನು ಕಾರ್ಪೋರೇಟ್-ಅಲ್ಲದ, ಕೃಷಿ-ಅಲ್ಲದ ಸಣ್ಣ/ಸಣ್ಣ ಉದ್ಯಮಗಳಿಗೆ ನೀಡುತ್ತಿರುವುದು ಮತ್ತೊಂದು ದೊಡ್ಡ ಸಾಧನೆಯಾಗಿದೆ. ಫೆಬ್ರವರಿ 14 ರವರೆಗೆ 62 ಲಕ್ಷಕ್ಕೂ ಅಧಿಕ ಮಂದಿಗೆ ಮುದ್ರಾ ಸಾಲವನ್ನು ಮಂಜೂರು ಮಾಡಲಾಗಿದೆ. ಯಾರು ಬೇಕಾದರೂ ಕನಸುಗಳನ್ನು ಕಾಣಬಹುದು ಮತ್ತು ಆ ಕನಸುಗಳನ್ನು ಹಣದ ಬಗ್ಗೆ ಚಿಂತೆ ಮಾಡದೆ ಈಡೇರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು ಎಂಬುದನ್ನು ಈ ಯೋಜನೆ ತೋರಿಸಿಕೊಟ್ಟಿದೆ. ಯಾಕೆಂದರೆ ಕನಸುಗಳ ಸಾಕಾರಕ್ಕೆ ಬೇಕಾದ ಹಣಕಾಸಿನ ನೆರವನ್ನು ಈ ಯೋಜನೆಯಡಿ ಸರ್ಕಾರ ಅವರಿಗೆ ನೀಡಿದೆ.
ಮೊದಲ ಬಾರಿಗೆ, ಈಶಾನ್ಯ ಭಾರತದ ರಾಜ್ಯಗಳು ನೈಜವಾಗಿ ಭಾರತದೊಂದಿಗೆ ಏಕೀಕರಣಗೊಂಡಿವೆ ಮತ್ತು ಬೆಚ್ಚಗಿನ ಭಾವನೆಯನ್ನು ಮೂಡಿಸಿಕೊಂಡಿವೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷವನ್ನು ಈಶಾನ್ಯದಲ್ಲಿನ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಜನರು ಆಯ್ಕೆ ಮಾಡಿಕೊಂಡಿದ್ದು, ಅವರ ಸರ್ಕಾರದೆಡೆಗಿನ ಮೆಚ್ಚುಗೆಯನ್ನು ಪ್ರತಿಬಿಂಬಿಸುತ್ತದೆ.
source: inreportcard
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.