ಎನ್ಡಿಎ ಸರ್ಕಾರ ಆಡಳಿತಕ್ಕೆ ಬರುವ ಮೊದಲು, 21ನೇ ಶತಮಾನದ-ಕೈಗಾರಿಕಾ ಉನ್ನತಿಯೊಂದಿಗೆ ಹೊಂದಿಕೊಳ್ಳವುದು ನಮ್ಮ ದೇಶಕ್ಕೆ ಒಂದು ದೊಡ್ಡ ಸವಾಲಾಗಿತ್ತು. MSME ವಲಯವು ಬಹುತೇಕ ವಿವಿಧ ಸಂಸ್ಥೆಗಳ ದೀರ್ಘಾವಧಿ ಮತ್ತು ಅಲ್ಪಾವಧಿಯ ಸಾಲಗಳ ಮೇಲೆ ಅವಲಂಬಿತವಾಗಿ ಕಾರ್ಯನಿರ್ವಹಿಸುತ್ತಿದ್ದವು, ವಾಣಿಜ್ಯೋದ್ಯಮಿಗಳು ತಾವು ಸಲ್ಲಿಸಿದ ಅರ್ಜಿ ಅನುಮೋದನೆಗೊಳ್ಳುವಂತೆ ಮಾಡಲು ಓಡಾಡಿ ಚಪ್ಪಲಿ ಸವೆಸಬೇಕಾಗುತ್ತಿತ್ತು. ಆದರೆ ಮೋದಿ ಸರ್ಕಾರ, www.psbloansin59minutes.com ಪೋರ್ಟಲ್ ಮೂಲಕ ಕೈಗಾರಿಕೋದ್ಯಮಿಗಳ ಸಹಾಯಕ್ಕೆ ಧಾವಿಸಿತು ಮತ್ತು ಅದರ ಮೂಲಕ ಒಂದು ಕ್ರಾಂತಿಯನ್ನೇ ಸೃಷ್ಟಿಸಿತು ಎಂದರೆ ತಪ್ಪಾಗಲಾರದು. ಈ ಪೋರ್ಟಲ್ MSME ಗಳಿಗೆ ಭರವಸೆಯ ಕಿರಣ ಆಗಿದೆ. ಈ ಪೋರ್ಟಲ್ ಮೂಲಕ ಕೈಗಾರಿಕಾ ಕ್ರಾಂತಿಯನ್ನು ಮಾಡಿ ಸಾಮಾನ್ಯರ ಜೀವನವನ್ನು ಪರಿವರ್ತನೆಗೊಳಿಸಿತು ಮೋದಿ ಸರ್ಕಾರ. ಮಾತ್ರವಲ್ಲ ದೇಶದಲ್ಲಿ ಸಣ್ಣ ವ್ಯಾಪಾರ ಅಭಿವೃದ್ಧಿ ಹೊಂದುತ್ತಾ ಬರಲು ನೆರವಾಯಿತು. ರಾಷ್ಟ್ರೀಯ ಹಣಕಾಸು ಬ್ಯಾಂಕುಗಳು ಮತ್ತು ಸಿಐಡಿಬಿಗಳಿಂದ ಸಣ್ಣ ಉದ್ಯಮಗಳಿಗೆ ಒಂದು ಗಂಟೆಯೊಳಗೆ ಒಂದು ಕೋಟಿ ರೂಪಾಯಿಗಳಷ್ಟು ಮೂಲ ಸಾಲಗಳನ್ನು ನೀಡುವ ಉದ್ದೇಶದೊಂದಿಗೆ ಈ ಪೋರ್ಟಲ್ನ್ನು ಆರಂಭಿಸಿದ ಬಳಿಕ, ಇದುವರೆಗೆ ಸುಮಾರು 30 ಸಾವಿರ ಕೋಟಿ ರೂಪಾಯಿಗಳನ್ನು ಸಾಲಗಾರರಿಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಭಾರತೀಯ ರಿಸರ್ವ್ ಬ್ಯಾಂಕ್, ಇಪ್ಪತ್ತೈದು ಮೂಲ ದರ ಕಡಿತವನ್ನು ಘೋಷಿಸಿದ ಮತ್ತು ಬ್ಯಾಂಕುಗಳು ಇವುಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತಂದಿದ್ದರಿಂದ ಉದ್ಯಮಶೀಲರಿಗೆ ದೊಡ್ಡ ಉತ್ತೇಜನ ಸಿಕ್ಕಂತಾಯಿತು.
ಆಗಸ್ಟ್ 2017ರಿಂದ ಮೊದಲ ದರ ಕಡಿತಗೊಂಡಾಗ ರಿಸರ್ವ್ ಬ್ಯಾಂಕ್ ತನ್ನ ದ್ವಿ-ಮಾಸಿಕ ವಿತ್ತೀಯ ನೀತಿಯಲ್ಲಿ ಪ್ರಮುಖ ನೀತಿ ದರಗಳನ್ನು ಶೇ.0.25ರಷ್ಟು ಕಡಿತಗೊಳಿಸಿತ್ತು.
ಹಣಕಾಸಿನ ಏಜೆನ್ಸಿಗಳು, 24 ಸಾವಿರ ಹೊಸ ಸಾಲಗಾರರಿಗೆ ರೂ.6 ಸಾವಿರ ಕೋಟಿಯಷ್ಟು ಪೋರ್ಟಲ್ ಮೂಲಕ ಸಾಲ ನೀಡಿದೆ ಮತು 68 ಸಾವಿರ ಪುನಾರಾವರ್ತಿತ ಸಾಲಗಾರರಿಗೆ ರೂ,23,439 ಕೋಟಿಯಷ್ಟನ್ನು ಸಾಲ ನೀಡಿದೆ.
ಈ ಪೋರ್ಟಲ್ನ ಹಿರಿಮೆಗೆ ಮತ್ತೊಂದು ಗರಿಯೆಂದರೆ, ಸಾಲಕ್ಕೆ ಸಂಬಂಧಿಸಿದ ಎಲ್ಲಾ ಕಾಗದ ಕೆಲಸಗಳನ್ನು ಪೋರ್ಟಲ್ನಲ್ಲಿಯೇ ಮಾಡಬಹುದಾಗಿದೆ. ಮಂಜೂರಾತಿ ಪ್ರಕ್ರಿಯೆಯಲ್ಲಿ ಜನರ ಹಸ್ತಕ್ಷೇಪಕ್ಕೆ ಇಲ್ಲಿ ಅವಕಾಶ ಇರುವುದು ತುಂಬಾ ಕಡಿಮೆ ಮತ್ತು ಸ್ವಜನ ಪಕ್ಷಪಾತ ಮತ್ತು ಉದ್ದೇಶಪೂರ್ವಕ ವಿಳಂಬ ಧೋರಣೆಗಳಿಗೆ ಇಲ್ಲಿ ಅವಕಾಶವೇ ಇರುವುದಿಲ್ಲ. ಆದಾಯ ತೆರಿಗೆ ರಿಟರ್ನ್ಸ್ ಬಗೆಗಿನ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಲು ಮಾತ್ರ ಸಾಲಗಾರನಿಗೆ ಈ ಪೋರ್ಟಲ್ ಕೇಳುತ್ತದೆ.
ಸಣ್ಣ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳಿಗೆ ತಮ್ಮ ಹಾದಿಯನ್ನು ವಿಶಾಲಗೊಳಿಸಲು ವಿಸ್ತಾರವಾದ ಅವಕಾಶವನ್ನು ಈ ಪೋರ್ಟಲ್ ಒದಗಿಸುತ್ತದೆ. ನಮ್ಮ ದೇಶದಲ್ಲಿ ಉತ್ಪಾದನೆ ಮತ್ತು ಸುಸ್ಥಿರ ಜೀವನೋಪಾಯ ವಲಯದ ಸಂಪೂರ್ಣ ಕನಸು ನನಸಾಗುವ ಹಾದಿಯಲ್ಲಿದೆ ಮತ್ತು ನಮ್ಮ ಪ್ರಧಾನ್ ಸೇವಕರಾದ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಆರ್ಥಿಕತೆಯನ್ನು ವೇಗಗೊಳಿಸಿ, ಅದನ್ನು ಉತ್ತುಂಗಕ್ಕೇರಿಸುವ ಹಾದಿಯಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.