ಕೊನೆಗೂ ಈ ದೇಶದಲ್ಲಿ ದೊಡ್ಡವರೆನ್ನಿಸಿಕೊಂಡವರ ಅಕ್ರಮಗಳಿಗೂ ತಕ್ಕ ಶಾಸ್ತಿಯಾಗುವ ಕಾಲ ಹತ್ತಿರವಾಗುತ್ತಿರುವಂತೆ ತೋರುತ್ತಿದೆ. ಕೆಲವೇ ವರ್ಷಗಳಲ್ಲಿ ಸಾವಿರಾರು ಕೋಟಿ ಒಡೆಯನೆನ್ನಿಸಿಕೊಂಡು ಶ್ರೀಮಂತ ಉದ್ಯಮಿಯಾಯಾಗಿ ಹೊರಹೊಮ್ಮಿ ಜಗತ್ತಿನ ಕಣ್ ಸೆಳೆದಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿರಾ ಗಾಂಧಿಯವರ ಮೊಮ್ಮಗಳಾದ ಶ್ರೀಮತಿ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರ ಕೋಟ್ಯಂತರ ರೂ.ಬೆಲೆಬಾಳುವ ಆಸ್ತಿಯನ್ನು ಇದೀಗ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರ ಒಡೆತನದ ಸ್ಕೈ ಲೈಟ್ ಹಾಸ್ಪಿಟಾಲಿಟಿ ಸಂಸ್ಥೆಯ ಹೆಸರಿನಲ್ಲಿದ್ದ ಅವರ “ನಂಬರ್.268, ಸುಖ್ ದೇವ್ ವಿಹಾರ್, ನವದೆಹಲಿ” ಮನೆಯನ್ನು ಮತ್ತು ಇತರ ಕೆಲ ಸ್ಥಿರಾಸ್ತಿಗಳನ್ನು ಇದೀಗ ಇ.ಡಿ(ED) ತನ್ನ ವಶಕ್ಕೆ ತೆಗೆದುಕೊಂಡಿದೆ. ವಶಪಡಿಸಿಕೊಳ್ಳಲಾದ ಆ ಆಸ್ತಿಯ ಮೌಲ್ಯ ಸುಮಾರು 4.62 ಕೋಟಿ ಎಂದು ಅಂದಾಜಿಸಲಾಗಿದೆ.
ಬಿಕಾನೇರ್ ನಲ್ಲಿ ಭಾರತ ಮತ್ತು ಪಾಕೀಸ್ತಾನದ ಗಡಿಯಂಚಿನಲ್ಲಿರುವ ಸುಮಾರು 110 ಎಕರೆ ಭೂಮಿ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ತಹಶೀಲ್ದಾರ್ ಅವರಿಂದ ದೂರು ಸಲ್ಲಿಕೆಯಾಗಿತ್ತು. ಅದರ ಆಧಾರದ ಮೇಲೆ ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ವಿರುದ್ಧ FIR ಕೂಡಾ ದಾಖಲಾಗಿತ್ತು. ಆದರೆ ಆ ಪ್ರಕರಣದ ತನಿಖೆ ಅಷ್ಟೇನೂ ವೇಗವಾಗಿ ನಡೆದಿರಲಿಲ್ಲ. ಈ ನಡುವೆ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಜಾರಿ ನಿರ್ದೇಶನಾಲಯವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು. ಭೂಮಿ ಖರೀದಿಯ ಬಗ್ಗೆ ಹಲವಾರು ಬಾರಿ ರಾಬರ್ಟ್ ವಾದ್ರಾ ಅವರನ್ನು ವಿಚಾರಣೆ ನಡೆಸಿದರೂ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿ ಇದೀಗ ಜಾರಿ ನಿರ್ದೇಶನಾಲಯವು ವಾದ್ರಾ ಅವರಿಗೆ ಸಂಬಂಧಿಸಿದ ಒಂದಷ್ಟು ಕೋಟಿ ಮೊತ್ತದ ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಈ ಪ್ರಕರಣದಲ್ಲಿ ಕೇವಲ ರಾಬರ್ಟ್ ವಾದ್ರಾ ಅವರಷ್ಟೇ ಅಲ್ಲದೆ ಅವರ ತಾಯಿ ಹಾಗೂ ಪ್ರಿಯಾಂಕಾ ವಾದ್ರಾ ಅವರ ಅತ್ತೆಯವರಾದ ಮೌರೀನ್ ವಾದ್ರಾ ಅವರು ಕೂಡಾ ಫಲಾನುಭವಿಗಳಾಗಿರುವುದಾಗಿ ವರದಿಯಾಗಿದ್ದು ಅವರನ್ನೂ ವಿಚಾರಣೆ ನಡೆಸಲಾಗಿದೆ.
ಈ ಪ್ರಕರಣದ ತನಿಖೆಗೆ ಸಂಬಂಧಪಟ್ಟಂತೆ “ನಾನು ನನ್ನ ಕುಟುಂಬದ ಬೆಂಬಲಕ್ಕಿದ್ದೇನೆ” ಎಂದು ಹೇಳಿಕೆ ನೀಡುವ ಮೂಲಕ ಶ್ರೀಮತಿ ಪ್ರಿಯಾಂಕಾ ವಾದ್ರಾ ಅವರು ತಮ್ಮ ಕುಟುಂಬದ ಪರವಾಗಿ ಬಲವಾಗಿ ನಿಂತಿದ್ದಾರೆ.
ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರು ಕೇವಲ ಇದೊಂದೇ ಪ್ರಕರಣದಲ್ಲಲ್ಲದೆ ರಕ್ಷಣಾ ಸಾಮಗ್ರಿಗಳ ಖರೀದಿ ವ್ಯವಹಾರದಲ್ಲಿ ಕೈಯಾಡಿಸಿದ ಪ್ರಕರಣದಲ್ಲಿ ಹಾಗೂ ದುಬೈ ಮತ್ತು ಲಂಡನ್ ಗಳಲ್ಲಿ ಬೇನಾಮಿ ಆಸ್ತಿ ಖರೀದಿ ಪ್ರಕರಣಗಳಲ್ಲೂ ಆರೋಪಿಗಳಾಗಿದ್ದು ಆ ತನಿಖೆಗಳೂ ನಡೆಯುತ್ತಿವೆ. ಆದರೂ ರಾಬರ್ಟ್ ವಾದ್ರಾ ಅವರು ಈ ದೇಶದ ಅತ್ಯಂತ ಪ್ರಭಾವೀ ಕುಟುಂಬದವರಾಗಿರುವುದರಿಂದ ಅವರ ಮೇಲಿನ ಎಲ್ಲಾ ಅಕ್ರಮಗಳ ಪ್ರಕರಣಗಳ ತನಿಖೆಗಳೂ ಮುಂದೆಯೂ ಹೀಗೆಯೇ ನಡೆಯುತ್ತವೆಯೋ ಅಥವಾ ಒತ್ತಡಗಳಿಗೊಳಗಾಗಿ ನಿಧಾನಗತಿಯಲ್ಲಿ ಸಾಗುತ್ತವೆಯೋ ಎನ್ನುವುದನ್ನಂತೂ ಈಗಲೇ ಹೇಳುವುದು ಕಷ್ಟ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.