ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಕೋರಿ ನಿನ್ನೆಯಿಂದ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದಾರೆ. ಇವರ ಧರಣಿಯಲ್ಲಿ ಪಾಲ್ಗೊಂಡ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಡಿಎಂಕೆಯ ಡಿ.ಶಿವ, ಟಿಎಂಸಿಯ ಡೆರೆಕ್ ಒಬ್ರೇನ್ ಅವರು ಮತ್ತೊಮ್ಮೆ ಮಘಾಘಟಬಂಧನ್ ಸಾಮರ್ಥ್ಯ ಪ್ರದರ್ಶಿಸುವ ಪ್ರಯತ್ನ ನಡೆಸಿದ್ದಾರೆ. ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಧರಣಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಈ ಧರಣಿಯನ್ನು ಆಯೋಜಿಸಲು ನಾಯ್ಡು ಅವರು ಅಪಾರ ಪ್ರಮಾಣದ ಹಣವನ್ನು ವ್ಯಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೇಂದ್ರದ ಮೇಲೆ ಒತ್ತಡವನ್ನು ಹೇರುವ ಉದ್ದೇಶದೊಂದಿಗೆ ಆಯೋಜಿಸಲಾದ ಈ ಸಮಾವೇಶಕ್ಕೆ ತಮ್ಮ ಬೆಂಬಲಿಗರನ್ನು ಕರೆತರಲು ನಾಯ್ಡು ಬರೋಬ್ಬರಿ 1 ಕೋಟಿ ರೂಪಾಯಿಗಳನ್ನು ವ್ಯಯಿಸಿದ್ದಾರೆ ಎಂದು ವರದಿಯಾಗಿದೆ. ಇಂಡಿಯಾ ಟುಡೇ ಪ್ರತಿಭಟನಾಕಾರರು ಆಗಮಿಸಿದ್ದ ಎರಡು ರೈಲು, ಒಂದು ಶ್ರಿಕಾಕುಲಂನಿಂದ ಮತ್ತೊಂದು ಅನಂತಪುರದಿಂದ ಬಂದ ರೈಲುಗಳ ಖರ್ಚಿನ ವಿವರವನ್ನು ಪಡೆದುಕೊಂಡಿದೆ. ದೆಹಲಿಗೆ ಆಗಮಿಸಲು ಟಿಡಿಪಿ ಕಾರ್ಯಕರ್ತರಿಗಾಗಿ ಈ ರೈಲುಗಳನ್ನು ಬುಕ್ ಮಾಡಲಾಗಿತ್ತು. ಈ ಕಾರ್ಯಕರ್ತರನ್ನು ಕರೆ ತಂದು ಅವರಿಗೆ ದೆಹಲಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ನಾಯ್ಡು ಸುಮಾರು 60 ಲಕ್ಷ ವ್ಯಯಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಅಂಗನವಾಡಿ ಕಾರ್ಯಕರ್ತರಿಗೂ ಸರಿಯಾಗಿ ವೇತನ ನೀಡದ ನಾಯ್ಡು ಅವರು ಇಷ್ಟೊಂದು ಮೊತ್ತದ ಹಣವನ್ನು ಪ್ರತಿಭಟನಾಕಾರರನ್ನು ಸಾಗಿಸಲು ಬಳಸಿದ್ದು ನಿಜಕ್ಕೂ ಆಘಾತಕಾರಿಯಾಗಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರ ಸಂಘಟನೆಯ ಪ್ರಕಾರ, 2014ರಿಂದ ಅವರಿಗೆ ಸರಿಯಾಗಿ ವೇತನವೇ ಸಿಕ್ಕಿಲ್ಲ, ಕಳೆದ ಮೂರು ತಿಂಗಳುಗಳಿಂದ ಸಾವಿರಾರು ಕಾರ್ಯಕರ್ತರಿಗೆ ವೇತನವೇ ಸಿಕ್ಕಿಲ್ಲ. ನೂರಾರು ಕೋಟಿಗಳ ಬಿಲ್ ಇನ್ನೂ ಪಾವತಿಯಾಗಿಲ್ಲ.
ಮಹಾಮೈತ್ರಿಯಲ್ಲಿ ತಾವು ಮುಂದಾಳು ಆಗಿರಬೇಕು ಎಂಬ ಉದ್ದೇಶದಿಂದಲೇ ನಾಯ್ಡು ಅವರು ಈ ಪ್ರತಿಭಟನೆ ಆಯೋಜಿಸಿದಂತೆ ಕಂಡು ಬರುತ್ತಿದೆ, ಮಮತಾ ಬ್ಯಾನರ್ಜಿಯವರು ಕೋಲ್ಕತ್ತಾದಲ್ಲಿ ರಾತ್ರೋರಾತ್ರಿ ಸಿಬಿಐ ವಿರುದ್ಧ ಪ್ರತಿಭಟನೆ ನಡೆಸಿದ್ದರು, ಇಡೀ ಪ್ರತಿಪಕ್ಷಗಳ ನಾಯಕರು ಮತ್ತು ಮಹಾಘಟಬಂಧನ್ ಮುಖಂಡರು ಅವರ ಬೆಂಬಲಕ್ಕೆ ಧಾವಿಸಿದ್ದರು. ಇದರಿಂದಾಗಿ ಬ್ಯಾನರ್ಜಿ ಕ್ಷಿಪ್ರವಾಗಿ ಮಹಾಘಟ್ಬಂಧನ್ನ ಕೇಂದ್ರ ಬಿಂದುವಾದರು ಮತ್ತು ಅವರು ಪ್ರಬಲ ಪ್ರಧಾನಿ ಅಭ್ಯರ್ಥಿ ಎಂಬ ಊಹೆಯನ್ನು ಯಾರು ಬೇಕಾದರೂ ಮಾಡುವಂತೆ ಮಾಡಿದರು. ಇಂತಹ ಕ್ಲಿಷ್ಟಕರ ವಾತಾವರಣದಲ್ಲಿ, ತಾನು ಟಿಎಂಸಿ ಅಧಿನಾಯಕಿಯ ಮುಂದೆ ಕುಬ್ಜನಾಗುತ್ತಿದ್ದೇನೆ ಎಂಬ ಭಾವ ನಾಯ್ಡುಗೆ ಸಹಜವಾಗಿಯೇ ಕಾಡಿರಬಹುದು. ಹೀಗಾಗಿಯೇ ಅವರಿಗೆ ಪ್ರತಿಭಟನೆ ನಡೆಸಿ, ಸನ್ನಿವೇಶನವನ್ನು ತಮ್ಮತ್ತ ತಿರುಗಿಸುವ ಅನಿವಾರ್ಯತೆ ಉಂಟಾಗಿರಬಹುದು. ಈಗ, ಪ್ರತಿಪಕ್ಷಗಳು ಮತ್ತು ಮಹಾ ಮೈತ್ರಿಗಳು ನಾಯ್ಡು ಬಗ್ಗೆ ಕನಿಕರ ವ್ಯಕ್ತಪಡಿಸಿ ಅವರ ಬೆಂಬಲಕ್ಕೆ ಧಾವಿಸಿವೆ. ನಾಯ್ಡು ಲೈಮ್ಲೈಟ್ಗೆ ಬರಲು ದೊಡ್ಡ ಸಾಹಸವನ್ನೇ ಮಾಡಿದ್ದು, ಮಹಾಮೈತ್ರಿ ನಾಯಕಿಯಾಗಿ ಮಮತಾ ಹೊರಹೊಮ್ಮದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಆದರೆ ನಾಯ್ಡು ಅವರು ಅಮರಾವತಿಯನ್ನು ಬಿಟ್ಟು, ದೆಹಲಿಯಲ್ಲಿ ಯಾಕೆ ಪ್ರತಿಭಟನೆ ಆಯೋಜಿಸಿದ್ದಾರೆ ಎಂಬುದೇ ಪ್ರಶ್ನೆ. ನಾಯ್ಡು ಅಮರಾವತಿಯನ್ನು ವಿಶ್ವದರ್ಜೆಯ ರಾಜಧಾನಿಯನ್ನಾಗಿಸುತ್ತೇನೆ ಎಂಬುದೇ ಚುನಾವಣೆ ಎದುರಿಸಲು ಇರುವ ದೊಡ್ಡ ಅಸ್ತ್ರ. ಇಂತಹ ಸ್ಥಿತಿಯಲ್ಲಿ, ತಮ್ಮ ಧರಣಿಗೆ ಅಮರಾವತಿಯನ್ನು ಬಿಟ್ಟು ದೆಹಲಿಯನ್ನು ಯಾಕೆ ಆಯ್ಕೆ ಮಾಡಿಕೊಂಡರು ಎಂಬ ಪ್ರಶ್ನೆ ಮೂಡುವುದು ಸಹಜ. ನಿಜವೆಂದರೆ, ಅಮರಾವತಿಗಾಗಿ ಕೋಟ್ಯಾಂತರ ಹಣವನ್ನು ವ್ಯಯಿಸಲಾಗಿದೆ, 2015ರಲ್ಲಿ ರಾಜಧಾನಿ ನಿರ್ಮಿಸಲು ಶಿಲಾನ್ಯಾಸವನ್ನೂ ಹಾಕಲಾಗಿದೆ. ಆದರೆ 2018ರ ಸೆಪ್ಟಂಬರ್ನಲ್ಲಿ, ಅಮರಾವತಿಯಲ್ಲಿ ಏನೂ ನಿರ್ಮಾಣವಾಗಿಲ್ಲ ಎಂಬ ವರದಿಗಳು ಪ್ರಕಟವಾಗಿವೆ. ಮೂಲಸೌಕರ್ಯಗಳಾದಂತಹ ವಿದ್ಯುತ್ ಸಂಪರ್ಕ, ಡ್ರೈನೇಜ್ಗಳನ್ನೂ ಅಲ್ಲಿ ಇನ್ನು ನಿರ್ಮಾಣ ಮಾಡಬೇಕಾಗಿದೆ. ಮೊದಮೊದಲು, ವಿಶ್ವದರ್ಜೆಯ ಅಮರಾವತಿಯ ಕಲ್ಪನೆ ನಿಜಕ್ಕೂ ಮಹತ್ವಾಕಾಂಕ್ಷೆಯದ್ದು ಎಂದು ಅನಿಸುತ್ತಿತ್ತು. 7,500 ಚದರ ಅಡಿ ಕಿಲೋಮೀಟರ್ ಪ್ರದೇಶದ ರಾಜಧಾನಿ 10 ವರ್ಷದಲ್ಲಿ ತಲೆ ಎತ್ತುವಂತೆ ಮಾಡಲು ಪ್ರಸ್ತಾಪಿಸಲಾಗಿತ್ತು. ಆದರೆ ಇವತ್ತಿನವರೆಗೆ ಯಾವೊಂದು ಬೆಳವಣಿಗೆಗಳೂ ನಡೆದಿಲ್ಲ. ಈಗಾಗಲೇ ಕೇಂದ್ರ ಅಮರಾವತಿಗಾಗಿ ರೂ.1,500ಕೋಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 500 ಕೋಟಿ ರೂಪಾಯಿ ಗುಂಟೂರು ಮತ್ತು ಇನ್ನು 500 ಕೋಟಿ ವಿಜಯವಾಡಕ್ಕಾಗಿ ನೀಡಲಾಗಿದೆ. ಅಮರಾವತಿಯನ್ನು ಬಿಟ್ಟು ದೆಹಲಿಯಲ್ಲೇಕೆ ನಾಯ್ಡು ಪ್ರತಿಭಟನೆ ನಡೆಸಿದ್ದಾರೆ ಎಂಬುದಕ್ಕೆ ಇದುವೇ ಉತ್ತರವಾಗಿದೆ.
ಇನ್ನೊಂದೆಡೆ ದೆಹಲಿಯಲ್ಲಿ ಧರಣಿ ಕುಳಿತರೆ ಇಡೀ ದೇಶದ ಗಮನ ಸೆಳೆಯಬಹುದು ಆ ಮೂಲಕ ಮಹಾಮೈತ್ರಿಯ ಪ್ರಬಲ ನಾಯಕನಾಗಬಹುದು ಎಂಬ ಯೋಚನೆಯೂ ಅವರಲ್ಲಿರಬಹುದು. ಅಮರಾವತಿಗಾಗಿ ಅಪಾರ ಪ್ರಮಾಣದ ಹಣವನ್ನು ವಿನಿಯೋಗಿಸಲಾಗಿದ್ದರೂ, ಅದರ ನಿರ್ಮಾಣ ಕಾರ್ಯರೂಪದಿಂದ ಇನ್ನೂ ದೂರದಲ್ಲೇ ಇದೆ. ಅವರು ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಾರೆ ಆದರೆ ಅದನ್ನು ತಳಮಟ್ಟದಲ್ಲಿ ಕಾರ್ಯರೂಪಕ್ಕೆ ತರುವುದೇ ಇಲ್ಲ. ಇದು ಅವರ ಆಡಳಿತ ಅಸಮರ್ಥತೆಯನ್ನು ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.