ಮುಘಲ್ ರಾಜ ಅಕ್ಬರ್ 450 ವರ್ಷಗಳ ಹಿಂದೆ ನಿಷೇಧ ಮಾಡಿದ್ದ ಪಂಚಕೋಶಿ ಪರಿಕರ್ಮ ಪ್ರಯಾಗ್ರಾಜ್ನ ಕುಂಭಮೇಳದಲ್ಲಿ ಮತ್ತೆ ಆರಂಭಗೊಂಡಿದೆ. ಸಂತ ಸಮುದಾಯ ಮತ್ತು ಆಡಳಿತದ ಸುಧೀರ್ಘ ಪ್ರಯತ್ನ ಹಿನ್ನಲೆಯಲ್ಲಿ ಪರಿಕರ್ಮ ಪುನಃ ಸ್ಥಾಪನೆಯಾಗಿದೆ. ಪರಿಕರ್ಮವನ್ನು ಕೆಲ ಸಾಧುಗಳು ಬಳಿಕ ಆರಂಭಿಸಿದ್ದರೂ, 1993ರಲ್ಲಿ ಅದು ನಿರ್ವಹಣಾ ಸಾಮರ್ಥ್ಯವಿಲ್ಲದೆ ಸ್ಥಗಿತಗೊಂಡಿತ್ತು.
ಗಂಗಾ ಆರತಿಯನ್ನು ನಡೆಸಿದ ಬಳಿಕ ವೇದಿಕ ಮಂತ್ರೋಚ್ಚಾರಣೆಯ ಮೂಲಕ ಪರಿಕರ್ಮ ಆರಂಭವಾಯಿತು. ಅಖಾರ ಪರಿಷದ್ ಅಧ್ಯಕ್ಷ ಮಹಂತ ಮಹೇಂದ್ರ ಗಿರಿ, ಜುಮ ಪೀಠಾಧೀಶ್ವರ ಅವದೇಶಾನಂದ ಗಿರಿ, ಅಖಾರ ಪರಿಷದ್ನ ಪ್ರಧಾನ ಕಾರ್ಯದರ್ಶಿ ಮಹಂತ ಹರಿಗಿರಿ, ಸರ್ಕಾರಿ ಅಧಿಕಾರಿಗಳು ಈ ಧಾರ್ಮಿಕ ಆಚರಣೆಯಲ್ಲಿ ಭಾಗಿಯಾದರು.
ಪೂರ್ವದಲ್ಲಿ ಋಷಿ ದುರ್ವಾಸ, ಪಶ್ಚಿಮದಲ್ಲಿ ಋಷಿ ಭಾರಧ್ವಜ್, ಉತ್ತರದಲ್ಲಿ ಋಷಿ ಪಾಂಡೇಶ್ವರ ಮಹಾದೇವ್, ದಕ್ಷಿಣದಲ್ಲಿ ಋಷಿ ಪರಶರ್ ಆಶ್ರಮಗಳಿಗೆ ಭೇಟಿಕೊಡುವುದರ ಮೂಲಕ ಪಂಚಕೋಶಿ ಪರಿಕರ್ಮವನ್ನು ಆಚರಿಸಲಾಗುತ್ತದೆ. ಮೊದಲ ಮೂರು ದಿನಗಳ ಪರಿಕರ್ಮದಲ್ಲಿ, ಭಕ್ತರು ಮೊದಲ ದಿನವನ್ನು ಅಕ್ಷಯ್ವಟ, ಸರಸ್ವತಿ ಕುಂಡಗಳಿಗೆ ಭೇಟಿ ನೀಡುತ್ತಾರೆ. ಬಳಿಕ ಬಂಖಂಡಿ ಮಹಾದೇವ್, ಮೌಜ್ಗಿರಿ ಬಾಬಾಗಳಿಗೆ ಭೇಟಿ ನೀಡುತ್ತಾರೆ. ಬಳಿಕ ಭಕ್ತರು, ಸೋಮೇಶ್ವರ ಮಹಾದೇವ್ ಮಂದಿರ್ ತಲುಪಿ ಸೂರ್ಯ ತಂಕೇಶ್ವರ, ಚಕ್ರ ಮಾಧವ್, ಗದಾ ಮಾಧವ್ಗೆ ಭೇಟಿ ನೀಡಲಿದ್ದಾರೆ. ಮೊದಲ ದಿನದ ಪರಿಕರ್ಮ ದುರ್ವಾಸ ಋಷಿ ಮತ್ತು ಶಂಖ್ ಮಾಧವ್ ಮಂದಿರ್ಗೆ ಭೇಟಿ ಕೊಡುವ ಮೂಲಕ ಸಮಾಪಣಗೊಳ್ಳಲಿದೆ.
ಎರಡನೇ ದಿನದ ಪರಿಕರ್ಮ, ಕೋಟ್ವಾಲ್ ಹನುಮಾನ್ ಮತ್ತು ದತ್ತಾತ್ರೇಯ ಮಂದಿರಕ್ಕೆ ಸಾಗುತ್ತದೆ. ಅಲ್ಲಿಂದ ಪಾಂಡೇಶ್ವರ ಮಹದೇವ್ ಮಂದಿರ್ ಮತ್ತು ವಾಸುಕಿ ಮಂದಿರ್ಗೆ ಭೇಟಿ ನೀಡಿ, ಭಜನೆ ಕೀರ್ತನೆಯೊಂದಿಗೆ ಸಮಾಪಣಗೊಳ್ಳುತ್ತದೆ.
ಮೂರನೇ ದಿನದ ಪರಿಕರ್ಮ, ಸಂಗಮದಿಂದ ನೀರನ್ನು ಸಂಗ್ರಹಿಸಿ, ಋಷಿ ಭಾರಧ್ವಜರ ಆಶ್ರಮದಲ್ಲಿ ಅಭಿಷೇಕ ನೆರವೇರಿಸುವ ಮೂಲಕ ಸಮಾಪಣಗೊಳ್ಳುತ್ತದೆ.
ಸಾಧುಗಳ ಒತ್ತಾಯದ ಮೇರೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಪರಿಕರ್ಮ ಮಾರ್ಗವನ್ನು ನಿರ್ಧರಿಸಿದ್ದು, ಪರಿಕರ್ಮ ಸಾಂಗವಾಗಿ ಸಾಗುವ ಸಲುವಾಗಿ ಅಲ್ಲಿಗೆ ತೆರಳುವ ರಸ್ತೆಗಳನ್ನೂ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದಾರೆ.
ಪರಿಕರ್ಮ ಮಾತ್ರವಲ್ಲದೇ, ಈ ಕುಂಭಮೇಳದಲ್ಲಿ ಅಕ್ಬರ್ ಕೋಟೆಯನ್ನೂ ಭಕ್ತಾದಿಗಳ ಪ್ರವೇಶಕ್ಕೆ ಮುಕ್ತ ಮಾಡಲಾಗಿದೆ. ಕೋಟೆಯೊಳಗಿದ್ದ ಅಕ್ಷಯವಟ ಮತ್ತು ಸರಸ್ವತಿ ಕೂಪಗಳನ್ನು ಭಕ್ತರಿಗೆ ಲಭ್ಯವಾಗುವಂತೆ ಕಳೆದ ತಿಂಗಳು ಆದಿತ್ಯನಾಥ ಸರ್ಕಾರ ಮಾಡಿದೆ. ಇತ್ತೀಚಿಗಷ್ಟೇ ಸರ್ಕಾರ ಭಕ್ತರ ಪ್ರವೇಶಕ್ಕೆ ತೆರೆದಿದೆ. ಅಕ್ಷಯವಟ ಮರ ಮತ್ತು ಸರಸ್ವತಿ ಕೂಪಗಳನ್ನು ಬಾವಿಯೊಳಗೆ ಇರುವ ರೀತಿಯಲ್ಲಿ ಈ ಕೋಟೆಯನ್ನು ನಿರ್ಮಾಣ ಮಾಡಲಾಗಿದೆ.
ಯೋಗಿ ಸರ್ಕಾರ, ಮೊಘಲ್ ರಾಜರುಗಳು ನಾಶ ಮಾಡಿದ್ದ ಹಿಂದೂ ಸಂಸ್ಕೃತಿ, ಪದ್ಧತಿಗಳನ್ನು ಪುನಃಶ್ಚೇತನಗೊಳಿಸಿ ಅವುಗಳನ್ನು ಮುಂದಿನ ತಲೆಮಾರಿಗೂ ತಿಳಿಯುವಂತೆ ಮಾಡುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.