News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತದಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಸಲು ಶ್ರಮಿಸುತ್ತಿದೆ ಮೋದಿ ಸರ್ಕಾರ

ನಮ್ಮ ದೇಶದಲ್ಲಿ ಕ್ರೀಡೆ ಎಂಬುದು ಒಂದು ನಿರ್ಲಕ್ಷಕ್ಕೊಳಗಾದ ವಲಯ, ಹಿಂದೆ ಬಂದ ಸರ್ಕಾರಗಳೆಲ್ಲವೂ ಕ್ರೀಡೆ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸಿದವು. ಜನರ ಮನಸ್ಥಿಯೂ ಕೂಡ ಹಾಗೆಯೇ ಬೆಳೆಯಿತು. ನಾಲ್ಕು ಗೋಡೆಯೊಳಗೆ ಕೂತು ಕಲಿಯುವ ಶಿಕ್ಷಣವೊಂದೇ ಭವಿಷ್ಯಕ್ಕೆ ದಾರಿಯಾಗಬಲ್ಲದು ಎಂದು ಜನ ಅಂದುಕೊಂಡರು. ಹೀಗಾಗಿಯೇ ಕ್ರೀಡೆ ಮೂಲೆಗುಂಪಾಯಿತು. ಒಲಿಂಪಿಕ್ಸ್ ಕ್ರೀಡಾಕೂಟದ ಪದಕ ಪಟ್ಟಿಯನ್ನು ಗಮನಿಸಿದಾಗ ಯಾವಾಗಲೂ ಯುಎಸ್‌ಎ, ರಷ್ಯಾ, ಚೀನಾ ದೇಶಗಳೇ ಅಗ್ರಸ್ಥಾನದಲ್ಲಿರುತ್ತವೆ, ಅದನ್ನು ನೋಡಿ ಭಾರತ ಯಾವಾಗ ಅಗ್ರ ಸ್ಥಾನಕ್ಕೇರುತ್ತದೆ ಎಂದು ಪ್ರಶ್ನಿಸುತ್ತೇವೆ. ಆದರೆ ಅದಕ್ಕೆ ನಮ್ಮ ಮನಸ್ಥಿತಿಯೇ ಕಾರಣ ಎಂಬುದು ನಮಗೆ ಅನಿಸುವುದೇ ಇಲ್ಲ.

ಕ್ರೀಡಾ ಸಂಸ್ಕೃತಿಯನ್ನು ದೇಶದಲ್ಲಿ ಬೆಳೆಸುವ ಅಗತ್ಯವಿದೆ ಎಂಬುದನ್ನು ಮನಗಂಡಿರುವ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಅಂತಾರಾಷ್ಟ್ರೀಯ ವೇದಿಕೆಗಳ ಪದಕ ಪಟ್ಟಿಯಲ್ಲಿ ಭಾರತದ ಸ್ಥಾನವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಚೀನಾ ಮತ್ತು ಯುಎಸ್‌ಎನ ಕ್ರೀಡಾಳುಗಳಿಗೆ ಪೈಪೋಟಿ ನೀಡುವಂತಹ ಕ್ರೀಡಾಳುಗಳನ್ನು ಭಾರತದಲ್ಲಿ ಬೆಳೆಸುವತ್ತ ಕ್ರೀಡಾ ಸಚಿವಾಲಯ ಗಮನ ಹರಿಸಿದೆ. ಮಾಜಿ ಕ್ರೀಡಾಪಟುವಾಗಿರುವ ರಾಜ್ಯವರ್ಧನ್ ಸಿಂಗ್ ಅವರನ್ನೇ ಕ್ರೀಡಾ ಸಚಿವರನ್ನಾಗಿಸಿದ್ದು ಸರ್ಕಾರದ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು. ಓರ್ವ ಕ್ರೀಡಾಪಟುವಿಗೆ ಕ್ರೀಡೆಯ ಮಹತ್ವ, ಒಳಹೊರಹು ಗೊತ್ತಿದ್ದಷ್ಟು ಬೇರೆ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಕ್ರೀಡಾ ಸಚಿವರಾಗಿ ಅವರು, ತಳಮಟ್ಟದಿಂದಲೇ ಸಂವಾದ ಮತ್ತು ಭಾಗಿತ್ವವನ್ನು ತೋರಿಸುತ್ತಿದ್ದಾರೆ. ಕ್ರೀಡಾಪಟುಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದಾರೆ. ಹಿಂದಿನ ಕ್ರೀಡಾಪಟುಗಳೆಲ್ಲಾ ಕೇವಲ ತಮ್ಮ ಸಚಿವಾಲಯಗಳಲ್ಲಿ ಕುಳಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು.

ಕ್ರೀಡೆ ಮತ್ತು ಫಿಟ್‌ನೆಸ್‌ನ ಬಗ್ಗೆ ಅರಿವು ಮೂಡಿಸುವ ಸಲುವಾಗಿಯೇ 2018ರ ಜನವರಿ 31ರಂದು ಪ್ರಧಾನಿ ನರೇಂದ್ರ ಮೋದಿಯವರು ಖೇಲೋ ಇಂಡಿಯಾಗೆ ಚಾಲನೆಯನ್ನು ನೀಡಿದರು. ಕ್ರೀಡೆಯನ್ನು ಒಂದು ಧರ್ಮದಂತೆ ಪಾಲಿಸುವ ಆಸ್ಟ್ರೇಲಿಯಾದ ಮಾದರಿಯಲ್ಲೇ ಭಾರತದಲ್ಲೂ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಬೇಕು ಎಂಬ ಗುರಿಯೊಂದಿಗೆ, ಭಾರತೀಯ ತರುಣ ಸಮುದಾಯದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸಲು ಖೇಲೋ ಇಂಡಿಯಾವನ್ನು ಆಯೋಜಿಸಲಾಗುತ್ತಿದೆ. ಈ ಯೋಜನೆಗಾಗಿ ರೂ.1756 ಕೋಟಿಯನ್ನೂ ಒದಗಿಸಲಾಗಿದೆ. ಮಹಿಳೆಯರು, ಮಕ್ಕಳು, ಗ್ರಾಮೀಣ ಜನರು ಹೀಗೆ ಎಲ್ಲರೂ ಭಾರತದ ಕ್ರೀಡಾ ಸಂಸ್ಕೃತಿಯ ಭಾಗವಾಗಬೇಕು ಎಂಬುದು ಇದರ ಉದ್ದೇಶವಾಗಿದೆ.

ಖೇಲೋ ಇಂಡಿಯಾ ಎಂಬುದು ಒಂದು ಬಹುಮುಖಿ ಕಾರ್ಯಕ್ರಮ, ಪ್ರತಿಭಾವಂತ ಯುವಕರನ್ನು ಹುರಿದುಂಬಿಸಿ, ಅವರಿಗೆ ಉನ್ನತಮಟ್ಟದಲ್ಲಿ ತರಬೇತಿಯನ್ನು ಪಡೆಯಲು ಮೂಲಸೌಕರ್ಯವನ್ನು ಒದಗಿಸುವತ್ತ ಇದು ಗಮನಹರಿಸಿದೆ. ಶಾಲೆಗೆ ಹೋಗುವ ಮಕ್ಕಳಿಗೆ ಕ್ರೀಡೆಯ ಬಗ್ಗೆ ಸ್ಪಷ್ಟ ಅರಿವು ಮೂಡಿಸುವ ಮತ್ತು ಮುಂದಿನ ತಲೆಮಾರನ್ನು ಪದಕ ಜಯಿಸುವ ಅಭ್ಯರ್ಥಿಗಳನ್ನಾಗಿ ಮಾಡುವ ಮಹತ್ತರವಾದ ಕನಸು ಈ ಯೋಜನೆಯ ಹಿಂದಿದೆ.

ಭಾರತವನ್ನು ಸ್ಪೋರ್ಟ್ಸ್ ಸೂಪರ್ ಪವರ್ ಆಗಿಸುವ ದೂರದೃಷ್ಟಿಯೊಂದಿಗೆ ಪ್ರಸ್ತುತ ಸರ್ಕಾರ ಇಟ್ಟಿರುವ ಹೆಜ್ಜೆ ಇದಾಗಿದ್ದು, ಭವಿಷ್ಯದಲ್ಲಿ ಖಂಡಿತವಾಗಿಯೂ ಭಾರತದ ಪದಕ ಸಂಖ್ಯೆಯನ್ನು ವೃದ್ಧಿ ಮಾಡುವ ಭರವಸೆ ಇದೆ.

ಈ ಕಾರ್ಯಕ್ರಮದಡಿ, ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದ್ದು, ಇದು ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸುತ್ತದೆ ಮತ್ತು ಅವರಿಗೆ 8 ವರ್ಷಗಳ ಅವಧಿಗೆ ವಾರ್ಷಿಕ 5 ಲಕ್ಷ ರೂಪಾಯಿಗಳವರೆಗೆ ಹಣಕಾಸು ನೆರವನ್ನು ಒದಗಿಸುತ್ತದೆ. ಈ ಹಣಕಾಸು ನೆರವನ್ನು ನಾವು ಸುದೀರ್ಘ ಅವಧಿಯ ಹೂಡಿಕೆ ಎಂದು ಪರಿಗಣಿಸಬೇಕೇ ಹೊರತು ವೆಚ್ಚವೆಂದಲ್ಲ.

ಖೇಲೋ ಇಂಡಿಯಾ 2019 ಇತ್ತೀಚಿಗಷ್ಟೇ ಪುಣೆಯ ಶಿವಾಜಿ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಜರುಗಿದ್ದು, ವಿವಿಧ ರಾಜ್ಯಗಳ ಯುವ ಕ್ರೀಡಾಳುಗಳಿಗೆ ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ತೋರ್ಪಡಿಸಲು ಒಂದು ಉತ್ತಮ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಮಹಾರಾಷ್ಟ್ರದ ಕ್ರೀಡಾಳುಗಳು ಜಿಮ್ನಾಸ್ಟಿಕ್‌ನಲ್ಲಿ, ಕೇರಳ, ಪುಣೆ ಕ್ರೀಡಾಳುಗಳು ಫುಟ್ಬಾಲ್‌ನಲ್ಲಿ, ಕರ್ನಾಟಕದವರು ಈಜಿನಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ್ದಾರೆ. ಈ ಕ್ರೀಡಾಕೂಟ ಜನಸಾಮಾನ್ಯರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ಅಪಾರ ಪ್ರಮಾಣದ ಜನರು ಆಗಮಿಸಿ ಕ್ರೀಡೆಯನ್ನು ವೀಕ್ಷಿಸಿದ್ದಾರೆ. ಇದರಿಂದ ಕ್ರಿಕೆಟೇತರ ಕ್ರೀಡೆಗಳ ಬಗ್ಗೆಯೂ ಹೆಚ್ಚಿನ ಆಸಕ್ತಿಗಳು ಬೆಳಯಲು ಉತ್ತೇಜನ ಸಿಗುತ್ತದೆ.

ಪದಕ ಗೆಲ್ಲುವುದು ಮತ್ತು ವಿಶ್ವ ಕಪ್ ಗೆಲ್ಲುವುದರಾಚೆಯೂ ಕ್ರೀಡೆಗೆ ಮೌಲ್ಯವಿದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡಲು ಇದು ಸರಿಯಾದ ಸಂದರ್ಭವಾಗಿದೆ. ಶಾಲೆಗಳಲ್ಲಿನ ಕ್ರೀಡೆಯೂ, ಮಕ್ಕಳ ಆರೋಗ್ಯವನ್ನು ವೃದ್ಧಿಸುತ್ತದೆ ಮತ್ತು ಅವರಲ್ಲಿ ಆರೋಗ್ಯ ಕಾಳಜಿಯನ್ನೂ ಮೂಡಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆರೋಗ್ಯಕರ ಚಿಂತನೆ ಆರೋಗ್ಯಕರ ದೇಹದಲ್ಲಿ ಅಡಗಿರುತ್ತದೆ ಎಂಬ ಮಾತಿದೆ. ಕ್ರೀಡೆ ಯುವಜನತೆಯನ್ನು ಡ್ರಗ್ಸ್, ಜಂಕ್ ಫುಡ್‌ನಂತಹ ದುರಭ್ಯಾಸಗಳಿಂದ ದೂರವಿರಿಸುತ್ತದೆ ಮಾತ್ರವಲ್ಲ, ಅವರನ್ನು ಕೀಳರಿಮೆ ಮತ್ತು ಆತ್ಮವಿಶ್ವಾಸದ ಕೊರತೆಯಿಂದಲೂ ಎದ್ದು ಬರುವಂತೆ ಮಾಡುತ್ತದೆ ಎಂಬುದನ್ನು ಅಧ್ಯಯನಗಳೇ ತಿಳಿಸಿವೆ.

ಹೀಗಾಗಿ, ಕ್ರೀಡೆಯ ಸುದೀರ್ಘ ಅವಧಿಯ ಬೆಳವಣಿಗೆಗೆ ರೂಪುರೇಷೆಯನ್ನು ರಚಿಸಿದ ಮತ್ತು ಭಾರತ ಕ್ರೀಡೆಯಲ್ಲಿ ಆಸ್ಟ್ರೇಲಿಯಾ, ಚೀನಾದೊಂದಿಗೆ ಪೈಪೋಟಿಗಿಳಿಯಬೇಕು ಎಂಬ ಉದ್ದೇಶದೊಂದಿಗೆ ಹಲವಾರು ಕ್ರಮಗಳನ್ನು ಕೈಗೊಂಡು, ಆ ಮೂಲಕ ಆರೋಗ್ಯಯುತ ಯುವಜನತೆಯನ್ನು ವೃದ್ಧಿಸಿ, ದೇಶದ ಸಮಗ್ರ ಪ್ರಗತಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್‌ಡಿಎ ಸರ್ಕಾರಕ್ಕೆ ದೊಡ್ಡ ಕರತಾಡನ ಸಲ್ಲಬೇಕು.

source: www.inreportcard

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top