2019ರ ಬಜೆಟ್ನಲ್ಲಿ ಪಿಎಂ-ಕಿಸಾನ್ (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ)ಯನ್ನು ಅನುಷ್ಠಾನಕ್ಕೆ ತರಲಾಗಿದೆ. ಸುಮಾರು 12 ಕೋಟಿ ರೈತರ ಕುಟುಂಬಗಳಿಗೆ ಸಕಾರಾತ್ಮಕ ಪರಿಣಾಮವನ್ನು ಬೀರುವ ಈ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು ಇಲ್ಲಿವೆ
ಪಿಎಂ-ಕಿಸಾನ್ನ ಉದ್ದೇಶಗಳು
ಸಣ್ಣ ಮತ್ತು ಮಧ್ಯಮ ರೈತರ ಆದಾಯವನ್ನು ಹೆಚ್ಚಳ ಮಾಡಲಿದೆ ಮತ್ತು ಅವರನ್ನು ಸಾಲದಾತರಿಂದ ರಕ್ಷಿಸಲಿದೆ.
ಬೆಳೆಯ ಆರೋಗ್ಯ ಪರೀಕ್ಷೆ ಮತ್ತು ಸಮರ್ಪಕ ಫಸಲಿನ ಬಗ್ಗೆ ಖಚಿತ ಮಾಹಿತಿಯನ್ನು ಪಡೆಯಲು ಸಣ್ಣ ಮತ್ತು ಮಧ್ಯಮ ರೈತರಿಗೆ ಬೇಕಾಗುವ ಹಣಕಾಸು ಅಗತ್ಯತೆಗಳನ್ನು ಪೂರೈಸುತ್ತದೆ, ಪ್ರತಿ ಬೆಳೆ ಚಕ್ರದ ಅಂತ್ಯದಲ್ಲಿ ಕೃಷಿ ಆದಾಯವನ್ನು ಅನುಗುಣವನ್ನಾಗಿಸುತ್ತದೆ.
ಫಲಾನುಭವಿಗಳು ಯಾರಾಗಿರುತ್ತಾರೆ?
ಎರಡು ಎಕರೆ ಭೂಮಿಯನ್ನು ಹೊಂದಿರುವ, ಪತಿ, ಪತ್ನಿ ಮತ್ತು ಅಪ್ರಾಪ್ತ ಮಕ್ಕಳನ್ನು ಒಳಗೊಂಡ ರೈತ ಕುಟುಂಬ ಈ ಯೋಜನೆಯ ಪ್ರಯೋಜನ ಪಡೆಯಬಹುದು.
2018-19ರಲ್ಲಿ ಈ ಯೋಜನೆಗೆ ಅರ್ಹತೆ ಪಡೆಯುವ ರೈತರ ಅಂದಾಜು ಲೆಕ್ಕಾಚಾರವನ್ನು 2015-16ರ ಕೃಷಿ ಗಣತಿಯನ್ನು ಆಧರಿಸಿ ಹಾಕಲಾಗಿದೆ.
2018-19ರ ಹಣಕಾಸು ವರ್ಷದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಸಂಖ್ಯೆ 13.15 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಆದರೆ ತಲಾ ಅರ್ಹ ಫಲಾನುಭವಿಗಳ ಸಂಖ್ಯೆ 12.50 ಕೋಟಿ, ಆರ್ಥಿಕವಾಗಿ ಸಬಲರಾಗಿರುವವರನ್ನು ಯೋಜನೆಯಿಂದ ಕೈಬಿಡಲಾಗುತ್ತದೆ.
ಫಲಾನುಭವಿಗಳಿಗೇನು ಸಿಗುತ್ತದೆ?
ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೂ.2000ದಂತೆ ವಾರ್ಷಿಕ ರೂ.6000 ರೈತರ ಆಧಾರ್ ಸಂಪರ್ಕಿತ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಲಿದೆ.
ಮೊದಲ ಕಂತಿನ ಅವಧಿ 2018ರ ಡಿಸೆಂಬರ್ 1ರಿಂದ 2019ರ ಮಾರ್ಚ್ 31, 2018-19ರ ಹಣಕಾಸು ವರ್ಷದಲ್ಲಿ ಈ ಮೊತ್ತ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಗೊಳ್ಳಲಿದೆ. ಫಲಾನುಭವಿಗಳ ಗುರುತಿಸುವಿಕೆಗಾಗಿ ಮೊದಲ ಕಂತು ತ್ವರಿತವಾಗಿ ವರ್ಗಾವಣೆಯಾಗಲಿದೆ.
ದಿನಾಂಕ ಕಡಿತ:
ಅರ್ಹ ಫಲಾನುಭವಿಗಳಿಗೆ ಲಾಭ ವರ್ಗಾವಣೆಗಾಗಿ ಯೋಜನೆ 2019ರ ಡಿಸೆಂಬರ್ 1ರಿಂದಲೇ ಅನುಷ್ಠಾನಗೊಳ್ಳಲಿದೆ
ಅರ್ಹ ಫಲಾನುಭವಿಗಳ ಗುರುತಿಸುವಿಕೆಯ ದಿನಾಂಕ ಕಡಿತ ಫೆ.2, 2019.
ಒಂದು ವೇಳೆ, ಮುಂದಿನ ಐದು ವರ್ಷಗಳಿಗೆ ಪ್ರಯೋಜನಾ ಪಡೆಯುವ ಅರ್ಹತೆಗಳಲ್ಲಿ ಬದಲಾವಣೆ, ದಿನಾಂಕ ಕಡಿತವನ್ನು ಸಂಪುಟದ ಅನುಮತಿಯ ಮೂಲಕವೇ ಮಾಡಲಾಗುತ್ತದೆ. ಆದರೆ, ಭೂಮಾಲೀಕ ಮರಣ ಹೊಂದಿದರೆ ಆತನ ಉತ್ತರಾಧಿಕಾರಿಗೂ ಪ್ರಯೋಜನ ವರ್ಗಾವಣೆಯ ಅವಕಾಶವಿದೆ.
ಕೇಂದ್ರ ಸರ್ಕಾರ ವ್ಯಯಿಸುವ ಮೊತ್ತ
ಈ ಯೋಜನೆಯನ್ನು ಕೇಂದ್ರೀಯ ವಲಯದ ಯೋಜನೆಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದ್ದು, ಶೇ.100ರಷ್ಟು ಹಣಕಾಸು ನೆರವನ್ನು ಭಾರತ ಸರ್ಕಾರವೇ ಭರಿಸಲಿದೆ.
2018-19ರ ಹಣಕಾಸು ವರ್ಷಕ್ಕೆ, ಅರ್ಹ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಲಾಭವನ್ನು ವರ್ಗಾವಣೆ ಮಾಡಲು ರೂ.20 ಸಾವಿರ ಕೋಟಿಯನ್ನು ಎತ್ತಿಡಲಾಗಿದೆ.
2019-10ರ ಹಣಕಾಸು ವರ್ಷಕ್ಕೆ ರೂ.75 ಸಾವಿರ ಕೋಟಿಗಳನ್ನು ಎತ್ತಿಡಲಾಗಿದೆ.
ಪಾರದರ್ಶಕತೆ ಮತ್ತು ಪರಿಶೀಲನೆ
ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಆಧಾರ್ ಕಡ್ಡಾಯ. ಆದರೆ, 2018-19ರಲ್ಲಿ ಫಲಾನುಭವಿಗಳು ಆಧಾರ್ ಹೊಂದಿಲ್ಲದಿದ್ದರೆ ಪರ್ಯಾಯ ದಾಖಲೆಗಳನ್ನು ಒದಗಿಸಿ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆದರೆ ಬಳಿಕ ಆಧಾರ್ಗೆ ನೋಂದಾವಣೆಗೊಳ್ಳುವುದು ಅತ್ಯಗತ್ಯ.
ಪ್ರಾಜೆಕ್ಟ್ ಮಾನಿಟರಿಂಗ್ ಯುನಿಟ್(ಪಿಎಂಯು) ಕೇಂದ್ರ ಮಟ್ಟದಲ್ಲಿ ಯೋಜನೆ ಅನುಷ್ಠಾನದ ಸಮರ್ಪಕತೆ ಮತ್ತು ಪ್ರಚಾರದ ಬಗ್ಗೆ ನಿಗಾ ವಹಿಸಲಿದೆ.
ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲೂ ಪರಿಶೀಲನಾ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.