ಭಾರತದ ಜನಸಂಖ್ಯೆಯ ಬಹುತೇಕ ಪಾಲು ಯುವಕರದ್ದು, ಮುಂಬರುವ ಚುನಾವಣೆಯಲ್ಲಿ ಯುವಜನತೆಯೇ ಪಕ್ಷಗಳ ಸೋಲು ಮತ್ತು ಗೆಲುವನ್ನು ನಿರ್ಧರಿಸಲಿದ್ದಾರೆ. 2011 ರ ಜನಗಣತಿಯ ಪ್ರಕಾರ, ಪ್ರತಿ ವರ್ಷ 2 ಕೋಟಿ ಜನ 18 ನೇ ವಯಸ್ಸಿಗೆ ಕಾಲಿಡುತ್ತಾರೆ. ಮತದಾನ ಮಾಡುವ ಅರ್ಹತೆ ಪಡೆಯುತ್ತಾರೆ. 2019 ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ದೇಶದಲ್ಲಿ ಅಂದಾಜು 10 ಕೋಟಿ ಮೊದಲ ಬಾರಿ ಮತದಾನ ಮಾಡುವವರಿರಲಿದ್ದಾರೆ. ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಈಗಾಗಲೇ 18 ರಿಂದ 20 ವರ್ಷ ವಯಸ್ಸಿನ 2.6 ಕೋಟಿ ಯುವಜನತೆ ಮತದಾನಕ್ಕೆ ನೋಂದಣಿಯಾಗಿದ್ದಾರೆ. ಇದರಲ್ಲಿ 18-19 ವಯಸ್ಸಿನವರ ಸಂಖ್ಯೆ 1.38 ಕೋಟಿ.
ಮೊದಲ ಬಾರಿ ಮತದಾನ ಮಾಡುವವರ ಸಂಖ್ಯೆ ಅಪಾರವಾಗಿದ್ದು, ಯಾವುದೇ ರಾಜಕೀಯ ಪಕ್ಷಕ್ಕೂ ಇವರನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಕೇವಲ ಸಂಖ್ಯೆ ಮಾತ್ರವಲ್ಲ, ಮನೋಭಾವಗಳ ದೃಷ್ಟಿಯಿಂದಲೂ ಹೊಸ ಮತದಾರರು ಅತ್ಯಂತ ಪ್ರಮುಖ ಎನಿಸಿಕೊಳ್ಳುತ್ತಾರೆ. ಅವರಿಗೆ ಪಕ್ಕಾ ಮಾಹಿತಿ ಇರುತ್ತದೆ ಮತ್ತು ತಂತ್ರಜ್ಞಾನ ಸ್ನೇಹಿಗಳೂ ಆಗಿರುತ್ತಾರೆ. ರಾಜಕೀಯ ಪಕ್ಷಗಳ ತಂತ್ರಗಳಿಗೆ ಸುಲಭವಾಗಿ ಬಲಿಯಾಗಬಲ್ಲ ಸಾಂಪ್ರದಾಯಿಕ ಮತದಾರರಿಗಿಂತ ಇವರು ಭಿನ್ನ ಆಲೋಚನೆಯುಳ್ಳವರಾಗಿರುತ್ತಾರೆ. ಯಾವುದೇ ಒಂದು ಪಕ್ಷಕ್ಕೆ ಕಟ್ಟುಬೀಳುವ ಮನೋಭಾವ ಇವರಿಗೆ ಇರುವುದಿಲ್ಲ. ನಾಯಕ ಮತ್ತು ಆತನ ಮೌಲ್ಯಗಳಿಗೆ, ಅಭಿವೃದ್ಧಿಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವವರಾಗುತ್ತಾರೆ. ಧರ್ಮ ಮತ್ತು ಜಾತಿಯನ್ನು ಮೀರಿ ನಿಲ್ಲಬಲ್ಲ ಸಾಮರ್ಥ್ಯ ಹೊಸ ಮತದಾರರಿಗಿದೆ.
ನಾಯಕತ್ವದ ವಿಷಯಕ್ಕೆ ಬಂದರೆ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮೆಲ್ಲಾ ಪ್ರತಿಸ್ಪರ್ಧಿಗಳಿಗಿಂತ ಮುಂದಿದ್ದಾರೆ. ಅವರ ಆಡಳಿತದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ. ಯುವಕರ ಶ್ಲಾಘನೆಗೆ ಇವರು ಸದಾ ಪಾತ್ರರಾಗಿದ್ದಾರೆ.
ಮೂಲಸೌಕರ್ಯ
ಈಗಿನ ಸರ್ಕಾರ ನಿರ್ಮಿಸಿದಷ್ಟು ಪ್ರಮಾಣದಲ್ಲಿ ಹಿಂದಿನ ಯಾವ ಸರ್ಕಾರವೂ ರಸ್ತೆಗಳನ್ನು ನಿರ್ಮಾಣ ಮಾಡಿರಲಿಲ್ಲ. ಯುಪಿಎ ಸರ್ಕಾರ ದಿನಕ್ಕೆ ಕೇವಲ 11ಕಿಮೀ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿತ್ತು. ಮೋದಿ ಸರ್ಕಾರದ ಅಡಿಯಲ್ಲಿ ದಿನಕ್ಕೆ 27ಕಿಮೀ ರಸ್ತೆ ನಿರ್ಮಾಣವಾಗುತ್ತಿದೆ. ಮಾರ್ಚ್ 2019ರ ವೇಳೆಗೆ ದಿನಕ್ಕೆ 45ಕಿಮೀ ರಸ್ತೆ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಯ ಪ್ರಕಾರ, ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಮೋದಿ ಸರ್ಕಾರ ಮೊದಲ ನಾಲ್ಕು ವರ್ಷದಲ್ಲಿ ಶೇ.73ರಷ್ಟು ಹೆಚ್ಚು ಹೆದ್ದಾರಿಗಳನ್ನು ನಿರ್ಮಾಣ ಮಾಡಿದೆ. ಈ ಯಶಸ್ಸು ಮೋದಿ ಸರ್ಕಾರಕ್ಕೆ ಮಹತ್ವದ್ದಾಗಿದ್ದು, ಅದ ಆಡಳಿತ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ.
ಭಾರತೀಯ ರೈಲ್ವೇ 68 ಡಿವಿಶನ್ಗಳನ್ನು ಹೊಂದಿದ್ದು, ಅದ ಉನ್ನತೀಕರಣ ಅತೀದೊಡ್ಡ ಸವಾಲು. ಹಿಂದಿನ ಸರ್ಕಾರ ಇದನ್ನು ನಿರ್ಲಕ್ಷ್ಯ ಮಾಡಿತ್ತು ಆದರೆ ಮೋದಿ ಸರ್ಕಾರ ಈ ಬಗ್ಗೆ ಗಮನಹರಿಸಿ, ಉನ್ನತೀಕರಣಕ್ಕೆ ಅನುಮೋದನೆಯನ್ನು ನೀಡಿತು. ಭಾರೀ ಪ್ರಮಾಣದಲ್ಲಿ ಉನ್ನತೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ನಿಗದಿತ ಸಮಯದೊಳಗೆ ಕಾರ್ಯ ಪೂರೈಸಲು ಗುರಿ ಇಡಲಾಗಿದೆ. ಮೇಕ್ ಇಂಡಿಯಾ ಯೋಜನೆಯಡಿ ಡಿಸೇಲ್ ಲೊಕೋದಿಂದ ಎಲೆಕ್ಟ್ರಿಕ್ ಲೊಕೋಗೆ ಪರಿವರ್ತನೆ ತರಲಾಗಿದೆ. ಬುಲೆಟ್ ಟ್ರೈನ್ ಕಾಮಗಾರಿ ನಡೆಯುತ್ತಿದೆ. ಅತೀ ವೇಗದ ಟ್ರೈನ್ 18 ಈಗಾಗಲೇ ಕಾರ್ಯಾರಂಭ ಮಾಡಿದ್ದು ಅತೀದೊಡ್ಡ ಯಶಸ್ಸಾಗಿದೆ. ರೋಲಿಂಗ್ ಸ್ಟಾಕ್ಗಳನ್ನು ಹಿಂದೆ ವಿದೇಶದಿಂದ ಆಮದು ಮಾಡಲಾಗುತ್ತಿತ್ತು, ಆದರೀಗ ಭಾರತದಲ್ಲಿ ತಯಾರಿಸಲಾಗುತ್ತಿದೆ. 100 ವರ್ಷ ಹಳೆಯ ಸಿಗ್ನಲ್ ಸಿಸ್ಟಮ್ನ್ನು ಬದಲಾಯಿಸಲಾಗಿದೆ. ಮೋದಿ ಸರ್ಕಾರದ ಈ ಎಲ್ಲಾ ಕಾರ್ಯಗಳು ಮೊದಲ ಮತದಾರರನ್ನು ಸೆಳೆಯುವಲ್ಲಿ ಅನುಮಾನವಿಲ್ಲ.
ಆರ್ಥಿಕ ಸ್ಥಾನಮಾನ
ಕಳೆದ ಕೆಲವು ವರ್ಷಗಳಿಂದ ಭಾರತದ ಆರ್ಥಿಕತೆಯ ಬೆಳವಣಿಗೆ ಗಮನಾರ್ಹವಾಗಿದೆ. ವಿದೇಶಿ ಹರಿಯುವಿಕೆ ಅದರಲ್ಲೂ ಮುಖ್ಯವಾಗಿ ವಿದೇಶಿ ನೇರ ಬಂಡವಾಳದ ಬೆಳವಣಿಗೆ ಮಹತ್ವದ್ದಾಗಿದೆ. ನಾಲ್ಕು ವರ್ಷಗಳಲ್ಲಿ ಭಾರತ ವಿಶ್ವದ ಟಾಪ್ ಹೂಡಿಕೆ ತಾಣವಾಗಿದೆ. ಮೂಡಿಸ್ ಇನವೆಸ್ಟರ್ಸ್ ಸರ್ವಿಸ್ ರೇಟಿಂಗ್ ಹೆಚ್ಚಳವಾಗಿದೆ. ಜಿಎಸ್ಟಿ, ಹಣಕಾಸು ದಿವಾಳಿ ಪ್ರಕ್ರಿಯೆ ಮುಂತಾದುವುಗಳು ಹಣಕಾಸು ಸುಧಾರಣೆಗೆ ತೆಗೆದುಕೊಡ ಮಹತ್ವದ ಕ್ರಮಗಳು. ಹಿಂದಿನ ಸರ್ಕಾರ ಆರ್ಥಿಕತೆಯನ್ನು ಸಂಕಷ್ಟಕ್ಕೆ ದೂಡಿತ್ತು. ಹಣದುಬ್ಬರ, ಆರ್ಥಿಕ ಪ್ರಗತಿ ದರ ಕುಸಿತಗಳು ಜನಜೀವನದ ಮೇಲೆ ದೊಡ್ಡ ಹೊಡೆತ ನೀಡಿದ್ದವು. ಮೋದಿ ಸರ್ಕಾರ ತಂದ ನೋಟ್ ಬ್ಯಾನ್, ಬೇನಾಮಿ ಆಸ್ತಿ ಕಾಯ್ದೆಗಳು ಅತ್ಯಂತ ಯಶಸ್ಸು ಕಂಡಿದೆ.
ಉದ್ಯೋಗ ಮತ್ತು ಬಡತನ ನಿರ್ಮೂಲನೆ
ಕಳೆದ ನಾಲ್ಕೂವರೆ ವರ್ಷಗಳ ಮೋದಿ ಆಡಳಿತದಲ್ಲಿ ದೇಶದ ಅಟೊಮೊಬೈಲ್ ಮತ್ತು ಸಾರಿಗೆ ವಲಯ ಕ್ಷಿಪ್ರ ಪ್ರಗತಿಯನ್ನು ಕಂಡಿದೆ. ಮೋಹನ್ ದಾಸ್ ಪೈ ಮತ್ತು ಯಶ್ ಬೇಡಿ ಫಿನಾನ್ಶಿಯಲ್ ಎಕ್ಸ್ಪ್ರೆಸ್ನಲ್ಲಿ ಬರೆದ ಲೇಖನಗಳ ಪ್ರಕಾರ, ಸಾರಿಗೆ ವಲಯ 2018ರ ಹಣಕಾಸು ವರ್ಷದಲ್ಲಿ 34 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. 2019ರ ಹಣಕಾಸು ವರ್ಷದ ಆರಂಭದಲ್ಲಿ 28 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಮೋದಿ ನೇತೃತ್ವದ ಸರ್ಕಾರ ಸಾಮಾನ್ಯ ವರ್ಗಕ್ಕೆ ಶೇ.10ರಷ್ಟು ಮೀಸಲಾತಿಯನ್ನು ನೀಡಿರುವುದು ಮತ್ತೊಂದು ಮಹತ್ವದ ನಿರ್ಧಾರವಾಗಿದೆ.
ವರದಿಗಳ ಪ್ರಕಾರ, ಖಾಸಗಿ ನೇತೃತ್ವದ ಉನ್ನತ ಶಿಕ್ಷಣ ಸಂಸ್ಥೆಗಳನ್ನೂ ಒಳಗೊಳ್ಳಲಿದೆ. ಸುಮಾರು 8.5 ಮಿಲಿಯನ್ ಯುವ ಜನತೆ ಸರ್ಕಾರದ ಪ್ರಧಾನ್ ಮಂತ್ರಿ ರೋಜ್ಗಾರ್ ಪ್ರೋತ್ಸಾಹನ್ ಯೋಜನಾದಡಿ ಉದ್ಯೋಗವನ್ನು ಪಡೆದುಕೊಡಿದ್ದಾರೆ.
ಎಂಪ್ಲಾಯೀ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್ ಅಂಕಿಅಂಶಗಳ ಪ್ರಕಾರ, 2017ರ ಎಪ್ರಿಲ್ನಿಂದ 2018 ಎಪ್ರಿಲ್ವರೆಗೆ 45 ಲಕ್ಷಕ್ಕೂ ಅಧಿಕ ಔಪಚಾರಿಕ ಉದ್ಯೋಗಗಳು ಸೃಷ್ಟಿಯಾಗಿವೆ. ಕಳೆದ ನಾಲ್ಕು ವರ್ಷಗಳಲ್ಲಿ 5 ಕೋಟಿ ಮಂದಿ ಬಡತನದಿಂದ ಹೊರ ಬಂದಿದ್ದಾರೆ.
ಹಿಂದಿನವರಿಗೆ ಹೋಲಿಸಿದರೆ ಮೋದಿ ಎಲ್ಲಾ ವಿಷಯದಲ್ಲೂ ಒಂದು ಹೆಜ್ಜೆ ಮುಂದಿದ್ದಾರೆ. ಮೋದಿ ಸರ್ಕಾರದಡಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳು ಶ್ಲಾಘನಾರ್ಹ. ಇನ್ನೊಂದೆಡೆ ಮೋದಿ, ಯುವಜನತೆಯೊಂದಿಗೆ ಅತ್ಯಂತ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ಎಲ್ಲಾ ವಿಷಯಗಳ ಬಗ್ಗೆ ನಿಖರವಾದ ಮಾಹಿತಿ ಹೊಂದಿರುವ ಹೊಸ ಮತದಾರರು ಮತ್ತೊಮ್ಮೆ ಮೋದಿಯನ್ನೇ ಆರಿಸುವುದರಲ್ಲಿ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.