ನವದೆಹಲಿ: 1949ರ ಜನವರಿ 15ರಂದು ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ ಅವರು ದೇಶದ ಮೊತ್ತ ಮೊದಲ ಸೇನಾ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಂಡ ಸ್ಮರಣಾರ್ಥ ಪ್ರತಿ ವರ್ಷ ಜನವರಿ 15ನ್ನು ಸೇನಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ಇಂದು ಸೇನೆಯು 71ನೇ ಸೇನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾರತೀಯ ಸೇನೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಟ್ವಿಟ್ ಮಾಡಿರುವ ಅವರು, ‘ಸೇನಾ ದಿನದ ಅಂಗವಾಗಿ ಸೇನೆಯಲ್ಲಿ ವೀರ ಪುರುಷ ಮತ್ತು ಮಹಿಳೆಯರಿಗೆ. ಮಾಜಿ ಸೈನಿಕರಿಗೆ, ಅವರ ಕುಟುಂಬದವರಿಗೆ ಶುಭಕಾಮನೆಗಳು.
ನೀವು ನಮ್ಮ ದೇಶದ ಹೆಮ್ಮೆ, ನಮ್ಮ ಸ್ವಾತಂತ್ರ್ಯದ ರಕ್ಷಕರು. ನೀವು ಎಚ್ಚರವಾಗಿದ್ದೀರಿ, ಕಣ್ಗಾವಲು ಇರಿಸಿದ್ದೀರಿ ಎಂಬುದನ್ನು ತಿಳಿದು ದೇಶದ ನಾಗರಿಕರು ನೆಮ್ಮದಿಯಿಂದ ನಿದ್ರಿಸುತ್ತಿದ್ದಾರೆ’ ಎಂದಿದ್ದಾರೆ.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರೂ ತಮ್ಮ ಶಸ್ತ್ರಾಸ್ತ್ರ ಪಡೆಗಳಿಗೆ ಸೇನಾ ದಿನದ ಅಂಗವಾಗಿ ಶುಭಾಶಯಗಳನ್ನು ಕೋರಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.