ಗುಜರಾತಿನ ಕೆವಾಡಿಯಾದಲ್ಲಿ ನರ್ಮದಾ ನದಿಯ ದಡದಲ್ಲಿ ವಿಶ್ವದ ಅತೀ ಎತ್ತರದ ಪ್ರತಿಮೆ – ಸ್ಟ್ರ್ಯಾಚ್ಯು ಆಫ್ ಯೂನಿಟಿ ಅನಾವರಣಗೊಳ್ಳುವ ಕ್ಷಣಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಸ್ವತಂತ್ರ ಭಾರತವನ್ನು ಒಗ್ಗೂಡಿಸುವಲ್ಲಿ ಪ್ರಚಂಡ ಕೆಲಸವನ್ನು ಮಾಡಿದ್ದ, ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಈ ಪ್ರತಿಮೆಯ ನಿರ್ಮಾಣಕ್ಕೆ, ದೇಶದ ಪ್ರತಿಯೊಬ್ಬ ರೈತರು ಕೊಡುಗೆ ನೀಡಿದ್ದಾರೆ ಎಂಬುದು ಇದರ ವೈಶಿಷ್ಟ್ಯ. ರೈತರು ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟು, ಈ ದೊಡ್ಡ ಪ್ರತಿಮೆಯನ್ನು ತಯಾರಿಸಲು ತಮ್ಮ ಉಪಯೋಗಕ್ಕೆ ಇಲ್ಲದ ಕಬ್ಬಿಣದ ಸಾಧನಗಳನ್ನು, ಸಲಕರಣೆಗಳನ್ನು ಇತ್ಯಾದಿ ರೂಪದಲ್ಲಿ ದಾನ ಮಾಡಿದರು.
ಭಾರತದ ಭೌಗೋಳಿಕ ಪ್ರದೇಶದ ಕೊನೆಯ ತುದಿಯಲ್ಲಿ ಮಹಾನ್ ಸನ್ಯಾಸಿ ಸ್ವಾಮಿ ವಿವೇಕಾನಂದರ ನೆನಪಿಗಾಗಿ ನಿರ್ಮಿಸಲಾದ ಸ್ಮಾರಕಕ್ಕಾಗಿ ಇದೇ ರೀತಿಯ ಬೃಹತ್ ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಈ ದೇಶವು ನೋಡಿದೆ. ಹೌದು, ನಾನು ತಮಿಳುನಾಡಿನ ಕನ್ಯಾಕುಮಾರಿಯ ಬಳಿ ಇರುವ ’ಶ್ರೀಪಾದ್ ಶಿಲಾ’ ಎಂದು ಕರೆಯಲ್ಪಡುವ ಹಿಂದೂ ಮಹಾಸಾಗರದ ಮಧ್ಯದಲ್ಲಿ ಭಾರಿ ಬಂಡೆಗಳ ಮೇಲೆ ನಿರ್ಮಿತವಾದ ವಿವೇಕಾನಂದರ ಭವ್ಯವಾದ ರಾಕ್ ಸ್ಮಾರಕದ ಬಗ್ಗೆ ಮಾತನಾಡುತ್ತಿದ್ದೇನೆ. 2019ರಲ್ಲಿ ವಿವೇಕಾನಂದ ರಾಕ್ ಮೆಮೋರಿಯಲ್ (ವಿಆರ್ಎಂ) ಸುವರ್ಣ ಮಹೋತ್ಸವ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ವರ್ಷದ ಜನವರಿ 12 ರಂದು ಈ ಮಹಾನ್ ಸನ್ಯಾಸಿಯ 156 ನೇ ಜನ್ಮದಿನವನ್ನು ನಾವು ಆಚರಿಸುತ್ತಿದ್ದೇವೆ.
ದೀರ್ಘಕಾಲಿಕ ಪ್ರೇರಣೆಯ ಮೂಲ: 1970ರಲ್ಲಿ 49 ವರ್ಷಗಳ ಹಿಂದೆ ಈ ಸ್ಮಾರಕ ಉದ್ಘಾಟನೆಯಾಯಿತು, ಆದರೆ ಇಂದಿಗೂ ವಿವೇಕಾನಂದ ರಾಕ್ ಮೆಮೋರಿಯಲ್(ವಿಆರ್ಎಂ) ಪ್ರತಿ ಭಾರತೀಯ ಪ್ರಜೆಗಳಿಗೆ ಸ್ಫೂರ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಮೂಲವಾಗಿದೆ. ಈ ಜಗತ್ತಿನಿಂದ ಹೋದ ಬಳಿಕವೂ ಮುಂಬರುವ ಪೀಳಿಗೆಗೆ ಸ್ಫೂರ್ತಿಯಾಗಿರುತ್ತೇನೆಂದು ವಿವೇಕಾನಂದರು ಹೇಳಿದ್ದರು, ಅವರ ಆ ಮಾತುಗಳನ್ನು ವಿಆರ್ಎಂ ನಿಖರವಾಗಿ ಸಾಬೀತುಪಡಿಸುತ್ತಿದೆ ಮತ್ತು ಇದರ ಶ್ರೇಯಸ್ಸು ಅಂತಿಮವಾಗಿ ಏಕನಾಥ್ ರಾನಡೆಗೆಸಲ್ಲುತ್ತದೆ. ಜನರ ಮತ್ತು ರಾಷ್ಟ್ರ, ರಾಜ್ಯ ಸರ್ಕಾರಗಳ ಉದಾರವಾಗಿ ಕೊಡುಗೆಯ ನಡುವೆಯೂ ರಾನಡೆಯವರು ಈ ಅದ್ಭುತ ಸ್ಮಾರಕದ ನಿರ್ಮಾಣದ ಹಿಂದಿನ ಪ್ರೇರಣೆಯಾಗಿದ್ದಾರೆ.
ಆಶ್ಚರ್ಯವೆಂದರೆ, ಸ್ವಾತಂತ್ರ್ಯ ಚಳುವಳಿಯ ನಾಯಕರು ಅಥವಾ ಸ್ವತಂತ್ರ ಭಾರತದ ಮೊದಲ ಪ್ರಧಾನಿ – ಜವಾಹರ್ ಲಾಲ್ ನೆಹರು ಅಥವಾ ಅವರ ಪುತ್ರಿ ಇಂದಿರಾ ಗಾಂಧಿ ಮುಂತಾದವರ ನೆನಪಲ್ಲಿ ಬೃಹತ್ ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ದೊಡ್ಡ ಸ್ಮಾರಕವನ್ನು ನಿರ್ಮಿಸಲಾಗಿಲ್ಲ. ನೆಹರೂ ಕುಟುಂಬದವರ ಹೆಸರಿನಲ್ಲಿ ಹಲವಾರು ಪ್ರತಿಮೆಗಳನ್ನು ಮತ್ತು ಸ್ಮಾರಕಗಳನ್ನು ನಿರ್ಮಿಸಲಾಗಿದೆ, ಆದರೆ ಅವುಗಳಲ್ಲವನ್ನೂ ಸರ್ಕಾರದವರೇ ನಿರ್ಮಿಸಿದ್ದಾರೆ. ಇದುವೇ ವಿಆರ್ಎಂ ಮತ್ತು ಸ್ಟ್ರ್ಯಾಚ್ಯು ಆಫ್ ಯೂನಿಟಿಯ ಪ್ರತಿಮೆಗೆ ನಾ ಕಂಡಂತೆ ಇರುವ ಗಮನಾರ್ಹ ವ್ಯತ್ಯಾಸ. ತಾಯಿ ಭಾರತೀಯ ಈ ಇಬ್ಬರು ಮಹಾನ್ ಪುತ್ರರು ಜನರ ಮನಸ್ಸಿನ ಮೇಲೆ ತೀವ ಪ್ರಭಾವ ಬೀರಿದ್ದಾರೆ ಮತ್ತು ಇಂದಿಗೂ ಸಹ ಅವರ ಪ್ರಭಾವ ಮುಂದುವರೆದಿದೆ. ಭವಿಷ್ಯದಲ್ಲಿ ಉಳಿಯುವ ನೆರಳಿನ ಗಾಢತೆಯಿಂದ ನಾಯಕನ ಶ್ರೇಷ್ಠತೆಯನ್ನು ನಿರ್ಧರಿಸಲಾಗುತ್ತದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.
ಶ್ರೀಪಾದ ಶಿಲಾ: ಸ್ವಾಮಿ ವಿವೇಕಾನಂದನ ಜೀವನವನ್ನು ಅಧ್ಯಯನ ಮಾಡಿದವರಿಗೆ, ಅವರು ಜನರನ್ನು ತಿಳಿಯುವುದಕ್ಕಾಗಿ ಇಡೀ ದೇಶವನ್ನು ಪಾದಯಾತ್ರೆಯಲ್ಲಿ ಸುತ್ತಿದರು ಎಂಬುದು ತಿಳಿದಿರುತ್ತದೆ. ಈ ಯಾತ್ರೆ ಕೊನೆಯಲ್ಲಿ ಅವರು ನಮ್ಮ ತಾಯಿನಾಡಿನ ದಕ್ಷಿಣದ ತುದಿಯ ಕನ್ಯಾಕುಮಾರಿಯನ್ನು ತಲುಪಿದರು, ಅಲ್ಲಿ ಮೂರು ಸಮುದ್ರಗಳು ಒಂದುಗೂಡುವ ಸ್ಥಳವಿದ್ದು, ಅದನ್ನು “ತ್ರಿವೇಣಿ ಸಂಗಮ” ಎಂದು ಕರೆಯುತ್ತಾರೆ. ಸಮುದ್ರದ ತೀರದಿಂದ ಸ್ವಲ್ಪ ದೂರದಲ್ಲಿ, “ಶ್ರೀಪಾದ ಶಿಲಾ” ಎಂದು ಕರೆಯಲ್ಪಡುವ ಬೃಹತ್ ಬಂಡೆಯಿದೆ. ಈ ಬಂಡೆಯ ಮೇಲೆ ಕನ್ಯಾಕುಮಾರಿಯ ದೇವತೆಯ ಪಾದದ ಚಿತ್ರ ಇದೆ ಎಂದು ನಂಬಲಾಗಿದೆ.
ಸ್ವಾಮಿಜಿಯವರು ಆ ಕಲ್ಲಿನವರೆಗೆ ಈಜಿದರು ಮತ್ತು ಅಲ್ಲಿ ಮೂರು ದಿನಗಳ ಕಾಲ ಧ್ಯಾನ ಮಾಡಿದರು. ಆ ಧ್ಯಾನದ ಸಮಯದಲ್ಲೇ ಅವರು, ಅಮೆರಿಕಾದ ಚಿಕಾಗೋದಲ್ಲಿನ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೈವಿಕ ಸ್ಫೂರ್ತಿಯನ್ನು ಪಡೆದರು. ಅವರು ಆ ದೈವಿಕ ನಿರ್ದೇಶನವನ್ನು ಅನುಸರಿಸಿದರು, ಎಲ್ಲಾ ಅಡೆತಡೆಗಳನ್ನು ಕೆಡವಿ ಚಿಕಾಗೋವನ್ನು ತಲುಪಿದರು ಮತ್ತು ಧರ್ಮ ಸಂಸತ್ತಿನಲ್ಲಿ ಭಾಗವಹಿಸಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಪ್ರಾಬಲ್ಯ ಎಷ್ಟಿದೆ ಎಂಬುದನ್ನು ಜಗತ್ತಿಗೆ ತೋರಿಸಿದರು.
ಸ್ಮಾರಕದ ಯೋಜನೆ: ಸ್ವಾಮೀಜಿಯವರು ವಿಶ್ವ ಧರ್ಮ ಸಂಸತ್ತಿಗೆ ಹೋಗಲು ದೈವಿಕ ಸೂಚನೆಗಳನ್ನು ಪಡೆದ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದನ ಸ್ಮಾರಕವನ್ನು ನಿರ್ಮಾಣ ಮಾಡುವ ಪರಿಕಲ್ಪನೆ ಮೂಡಿದ್ದು, ಅವರ ಜನ್ಮ ಶತಮಾನೋತ್ಸವದ ವರ್ಷದಲ್ಲಿ ಮತ್ತು ಇದು ತುಂಬಾ ಸ್ವಭಾವಿಕವೇ ಆಗಿತ್ತು. ಜನ್ಮ ಶತಮಾನೋತ್ಸವವನ್ನು ಭಾರತದ ಸರ್ಕಾರ ಮತ್ತು ರಾಮಕೃಷ್ಣ ಮಿಷನ್ ಜಂಟಿಯಾಗಿ ಆಚರಿಸಿತು ಮತ್ತು ಸ್ವಾಮಿ ವಿವೇಕಾನಂದನ ಬೋಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಚರ್ಚೆಗಳು, ವಿಚಾರಗೋಷ್ಠಿಗಳು, ಭಾಷಣಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ರಾಷ್ಟ್ರವ್ಯಾಪಿ ಆಚರಣೆಯಿಂದ ಪ್ರೇರಣೆ ಪಡೆದ ಕನ್ಯಾಕುಮಾರಿಯ ಜನರು, ಅವರು ಧ್ಯಾನ ಮಾಡಿದ ಬಂಡೆಯ ಮೇಲೆ ಸ್ಮಾರಕವನ್ನು ನಿರ್ಮಿಸಲು, ಆ ಮೂಲಕ ದೇಶಭಕ್ತ ಸನ್ಯಾಸಿಯ ಜೀವನದ ಉದ್ದೇಶವನ್ನು ಜಗತತಿಗೆ ತೋರಿಸುವ ನಿರ್ಧಾರ ಮಾಡಿದರು. ಸ್ವಾಮೀಜಿಯವರ ಸ್ಮಾರಕ ರಚನೆಗಾಗಿ. ಹೈದೇವ ಸೇವಾ ಸಂಘ ಮತ್ತು ಅದರ ಅಧ್ಯಕ್ಷ ವೇಲಾಯುಧನ್ ಪಿಳ್ಳೈ ಅವರು ಸಮಿತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಕಾರ್ಯಕ್ಕೆ ಇತರರು ಕೈಜೋಡಿಸಿದರು ಮತ್ತು ಬಂಡೆಯ ಮೇಲೆ ಸ್ಮಾರಕವನ್ನು ಸ್ಥಾಪಿಸಿ, ಅಲ್ಲಿಗೆ ಹೋಗಲು ಪಾದಚಾರಿ ಸೇತುವೆಯನ್ನು ನಿರ್ಮಿಸಲು ಇವರು ಯೋಚಿಸಿದರು. ಅದೇ ಸಮಯದಲ್ಲಿ ಮದ್ರಾಸ್ನ ಆರ್ಕೆ ಮಿಷನ್ (ಈಗ ಚೆನ್ನೈ) ಕನ್ಯಾಕುಮಾರಿ ಜನರಿಗೆ ಈ ತರನಾದ ಸ್ಮಾರಕ ನಿರ್ಮಾಣದ ಬಗ್ಗೆ ಚಿಂತನೆ ನಡೆಸುತ್ತಿತ್ತು, ಇನ್ನೊಂದೆಡೆ ಸ್ವಾಮಿ ಚಿದ್ಭಾವನಂದಾದವರು ಈ ಸ್ಮಾರಕ ನಿರ್ಮಾಣಕ್ಕೆ ಕೈಜೋಡಿಸಿದರು.
ಕ್ಯಾಥೋಲಿಕರಿಂದ ವಿರೋಧ: ಆದಾಗ್ಯೂ, ಸ್ಮಾರಕ ನಿರ್ಮಾಣದ ಮಾರ್ಗವು ಸುಲಭದ್ದಾಗಿರಲಿಲ್ಲ. ಸೇಂಟ್ ಕ್ಸೇವಿಯರ್ ತಮ್ಮ ಪೂರ್ವಜರನ್ನು ಆತನ ಧರ್ಮಕ್ಕೆ ಮತಾಂತರ ಮಾಡಿದ ಎಂದು ಹೇಳುವ ಕ್ರಿಶ್ಚಿಯನ್ನರು, ಅದರಲ್ಲೂ ಹೆಚ್ಚಾಗಿ ಕ್ಯಾಥೊಲಿಕರು ಮತ್ತು ಮೀನುಗಾರರು, ಬಂಡೆಯ ಮೇಲೆ ಸ್ವಾಮೀಜಿಯ ಸ್ಮಾರಕವನ್ನು ನಿರ್ಮಿಸುವ ಸಮಿತಿಯ ಪ್ರಯತ್ನಕ್ಕೆ ತಡೆಯೊಡ್ಡಲು ನಿರ್ಧರಿಸಿದರು. ಸ್ಥಳೀಯ ಮತಾಂಧ ಕ್ಯಾಥೋಲಿಕ್ ಪಾದ್ರಿಯ ಪ್ರಚೋದನೆಯ ಮೇರೆಗೆ ಬಂಡೆಗೆ ತೆರಳಿ ಅದರ ಮೇಲೆ ಒಂದು ದೊಡ್ಡ ಕ್ರಾಸ್ ಅನ್ನು ನೆಟ್ಟರು. ಸಮುದ್ರ ತೀರದಿಂದ, ಹೆಚ್ಚಿನ ದೂರದಿಂದಲೂ ಈ ಕ್ರಾಸ್ ಗೋಚರಿಸುತ್ತದೆ. ಇದರಿಂದ ಅಲ್ಲಿನ ವಾತಾವರಣ ಹದಗೆಟ್ಟಿತು ಮತ್ತು ಹಿಂದುಗಳು ತಕ್ಷಣವೇ ಕಲೆಕ್ಟರ್, ಮುಖ್ಯಮಂತ್ರಿ ಮತ್ತು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಟೆಲಿಗ್ರಾಮ್ಗಳನ್ನು ಕಳುಹಿಸಿ, “ಶ್ರೀಪಾದಂ” (ದೇವಿಯ ಪವಿತ್ರ ಪಾದವನ್ನು) ಅಚ್ಚುಮೆಟ್ಟಿರುವ ಬಂಡೆಯು ಹಿಂದೂಗಳಿಗೆ ಪವಿತ್ರ ಪೂಜಾ ಸ್ಥಳವಾಗಿದೆ, ಅಲ್ಲಿ ದೊಡ್ಡ ಕ್ರಾಸ್ ಅನ್ನು ಇಡುವ ಮೂಲಕ ಕ್ಯಾಥೊಲಿಕರು ಅತಿಕ್ರಮಣ ಮಾಡಿದ್ದಾರೆ ಎಂದು ದೂರಿದರು.
ಏತನ್ಮಧ್ಯೆ, ’ಶ್ರೀಪಾದಂ’ ಇರುವ ಕಾರಣಕ್ಕೆ ಬಂಡೆಯ ಮಾಲೀಕತ್ವವನ್ನು ತನಗೆ ನೀಡಬೇಕು ಎಂದು ಕನ್ಯಾಕುಮಾರಿ ದೇವಾಲಯ ದೇವಸ್ವಮ್ ಬೋರ್ಡ್ ವಾದಿಸಿತು. ಪುರಾಣವನ್ನು ಓದಿದರೆ, ಕನ್ಯಾಕುಮಾರಿ ದೇವಿಯು ಶಿವನನ್ನು ತನ್ನ ಸಂಗಾತಿಯನ್ನಾಗಿ ಮಾಡಲು ಇಲ್ಲಿ ಸಾಧನ ಮಾಡಿದರು ಎಂಬ ಪ್ರತೀತಿ ಇದೆ. ತೀರದಲ್ಲಿ ಕನ್ಯಾಕುಮಾರಿಯ ದೊಡ್ಡ ದೇವಸ್ಥಾನವಿದೆ, ಹೀಗಾಗಿ ಅವರ ವಾದ ತರ್ಕಬದ್ಧವಾಗಿಯೇ ಇತ್ತು. ಸ್ಮಾರಕ ಸಮಿತಿ ಔಪಚಾರಿಕವಾಗಿ ವೇಲಾಯುಧನ್ ಪಿಳ್ಳೈ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿತು ಮತ್ತು ಈ ಸಮಿತಿಯು ಬಂಡೆಗಳಿಗೆ ಒಂದು ದೋಣಿ ಸೇವೆಯನ್ನು ನಡೆಸಲು ನಿರ್ಧರಿಸಿತು, ಇದರಿಂದಾಗಿ ಜನರು ಭೇಟಿ ನೀಡಿ, ಸ್ವಾಮೀಜಿಯವರ ಧ್ಯಾನ ಮಾಡಿದ ಸ್ಥಳವನ್ನು ನೋಡಬಹುದು ಎಂಬ ಉದ್ದೇಶ ಸಮಿತಿಯದ್ದಾಗಿತ್ತು. ಆದರೆ ಕ್ಯಾಥೊಲಿಕ್ ದೋಣಿಗಾರರು ಇದಕ್ಕೆ ನಿರಾಕರಿಸಿದರಿಂದ, ಅಲ್ಲಿಗೆ ಹೇಗೆ ನೌಕಾಯಾನವನ್ನು ಮಾಡುವುದು ಎಂಬುದು ಅವರ ದೊಡ್ಡ ಸಮಸ್ಯೆಯಾಗಿತ್ತು. ಆದ್ದರಿಂದ ಅವರು ಕೇರಳದ ಕ್ಯಾಲಿಕಟ್ನಿಂದ ಕೆಲವು ಯುವಕರನ್ನು ತರಿಸಿಕೊಂಡರು ಮತ್ತು ದೋಣಿ ಚಾಲನೆ ಮಾಡುವ ಕರ್ತವ್ಯದಲ್ಲಿ ಎದುರಾಗುವ ತೊಡಕುಗಳ, ಅಪಾಯಗಳ ಬಗ್ಗೆ ಸ್ಪಷ್ಟ ಕಲ್ಪನೆಯನ್ನು ಅವರಿಗೆ ನೀಡಿದರು. ಅಲ್ಲದೇ, ಸ್ಪಷ್ಟವಾದ ಪದಗಳಲ್ಲಿ “ಇಲ್ಲಿ ನಿಮಗೆ ಆಹಾರವನ್ನು ಹೊರತುಪಡಿಸಿ ಏನೂ ಸಿಗುವುದಿಲ್ಲ. ಅದಕ್ಕೂ ಮೀರಿ, ನಮ್ಮ ಬಳಿ ಈಗ ಏನೂ ಇಲ್ಲ” ಎಂದು ಅವರಿಗೆ ಹೇಳಲಾಗಿತ್ತು. ಆದರೂ ಆ ದೋಣಿಗಾರರು ಉತ್ಸುಕರಾಗಿದ್ದರು, ಸವಾಲನ್ನು ಒಪ್ಪಿಕೊಂಡರು ಮತ್ತು ಜನರನ್ನು ನಿತ್ಯ ರಾಕ್ನತ್ತ ಸುತ್ತಿಸಿದರು.
ಕ್ರಾಸ್ನಿಂದಾಗಿ ಹೋರಾಟ: ಜನರು ಬಂಡೆಯತ್ತ ಭೇಟಿ ನೀಡಲು ಪ್ರಾರಂಭಿಸಿದಾಗ, ಅಲ್ಲಿ ಕ್ರಾಸ್ ನೆಟ್ಟಿದ್ದನ್ನು ನೋಡಿ ಅವರ ಭಾವನೆಗಳು ಕಲಕಿಹೋದವು. ರಾಜ್ಯ ಸರ್ಕಾರವು ಇದನ್ನು ಅರ್ಥ ಮಾಡಿಕೊಂಡು ಅತಿಕ್ರಮಣ ಮತ್ತು ಕ್ರಾಸ್ ನೆಟ್ಟ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿತು. ಬಳಿಕ ಇದನ್ನು ವಿವೇಕಾನಂದ ರಾಕ್ ಎಂದು ಘೋಷಿಸಲಾಯಿತು ಮತ್ತು ಕ್ರಾಸ್ ಅನ್ನು ತೆಗೆದುಹಾಕಲು ಆದಾಯ ಇಲಾಖೆಗೆ ಆದೇಶಿಸಿತು.
ಕ್ಯಾಥೋಲಿಕರು ಈ ಆದೇಶದ ವಿರುದ್ಧ ಬೊಬ್ಬಿಟ್ಟರು, ಇದು ಸ್ವಾಭಾವಿಕವೇ ಆಗಿತ್ತು. ಕ್ರಾಸ್ 400 ವರ್ಷಗಳ ಹಿಂದೆಯೇ ಇತ್ತು, ಆದರೆ ಕೆಲವು ಹಿಂದೂಗಳು ಅದನ್ನು ತೆಗೆದು ಹಾಕಿದರು ಎಂದು ಸುಳ್ಳು ಹೇಳಲಾರಂಭಿಸಿದರು. ಸರ್ಕಾರವು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಕೂಗಾಡಿದರು. ಕೇರಳದಲ್ಲಿನ ಹಲವಾರು ಕ್ರಿಶ್ಚಿಯನ್ ಪತ್ರಿಕೆಗಳು ಸಹ ಅವರಿಗೆ ಬೆಂಬಲ ನೀಡಿದವು. ಇದು ಪ್ರಸ್ತುತ ಪರಿಸ್ಥಿತಿಯ ಬಾಬರಿ ಮಸೀದಿ-ಶ್ರೀರಾಮ ದೇವಾಲಯ ವಿವಾದದಂತೆಯೇ ಆಗಿತ್ತು.
ಒಂದು ಮುಂಜಾನೆ ರಾಕ್ನಲ್ಲಿ ಕ್ರಾಸ್ ಕಣ್ಮರೆಯಾಗಿದ್ದು ಜನರಿಗೆ ಗೋಚರಿಸಿತು. ಅದನ್ನು ಅಲ್ಲಿಂದ ತೆಗೆದುಹಾಕಲಾಗಿತ್ತು. ಯಾರು ತೆಗೆದರು ಎಂಬುದು ಇದುವರೆಗೆ ಯಾರಿಗೂ ತಿಳಿದಿಲ್ಲ. ಆದರೆ ಕ್ರಾಸ್ ಅಲ್ಲಿ ಇಲ್ಲ. ಇದರಿಂದ ಭಾರಿ ಗದ್ದಲ ಏರ್ಪಟ್ಟಿತು ಮತ್ತು ಎರಡೂ ಸಮುದಾಯಗಳ ಜನರು ಘರ್ಷಣೆಗೆ ಮುಂದಾದರು. ಭದ್ರತಾ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಂದು ಅಹಿತಕರ ದೃಶ್ಯವನ್ನು ತಪ್ಪಿಸಿದರು, ಬಂಡೆಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿದರು ಮತ್ತು ಅಲ್ಲಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದರು ಮತ್ತು ಬಳಿಕ ಅಲ್ಲಿನ ಸಮಸ್ಯೆಯು ತಾತ್ಕಾಲಿಕವಾಗಿ ನಿಂತುಹೋಯಿತು.
ರಾಜ್ಯ ಸರ್ಕಾರದ ತಂತ್ರಗಳು: ರಾಕ್ನಲ್ಲಿ ಸಮಸ್ಯೆಯಿದೆ ಎಂದು ಅರಿತುಕೊಂಡ ರಾಜ್ಯ ಸರ್ಕಾರವು ಅಲ್ಲಿ ಯಾವುದೇ ಸ್ಮಾರಕ ನಿರ್ಮಿಸದಂತೆ ನಿರ್ಧರಿಸಿತು. ದೋಣಿ ಸೇವೆ ನಡೆಸಲು ಸಮಿತಿಯು ಸರ್ಕಾರದಿಂದ ಸಮ್ಮತಿಯನ್ನು ತೆಗೆದುಕೊಳ್ಳಬೇಕು ಎಂದು ಸರ್ಕಾರ ಹೇಳಿತು, ಆದರೆ ಅನುಮತಿ ಪಡೆಯಲು ಹೋದಾಗ ಅನುಮತಿಯನ್ನು ನಿರಾಕರಿಸಲಾಯಿತು. ತೀರದಲ್ಲಿ ಸಮಿತಿ ಸ್ಮಾರಕವನ್ನು ನಿಮಿಸಬಹುದು ಆದರೆ ರಾಕ್ನಲ್ಲಿ ಬೆಡ ಎಂದಿತು. ಆಗ ಭಕ್ತವತ್ಸಳಂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು ಮತ್ತು ಅವರೇ ಧಾರ್ಮಿಕ ದತ್ತಿ ಸಚಿವರಾಗಿದ್ದರು., ಸ್ವಾಮಿ ವಿವೇಕಾನಂದರು ಬಂಡೆಗೆ ಬಂದು, ಅಲ್ಲಿ ಧ್ಯಾನ ಮಾಡಿರುವುದರಿಂದ ಅಲ್ಲಿ ಸ್ಮಾರಕ ನಿರ್ಮಾಣವಾಗಬೇಕು ಎಂದು ಅವರು ಬಲವಾಗಿ ವಾದಿಸಿದರು.
ರಾಕ್ ಸ್ಮಾರಕ ವಿಚಾರ ವಿಭಿನ್ನ ತಿರುವುಗಳನ್ನು ಪಡೆಯುತ್ತಿದೆ ಎಂದು ಭಾವಿಸಿದ ಜನರು, ಆಲ್ ಇಂಡಿಯಾ ಸಮಿತಿ ರಚನೆಯಾಗಬೇಕು ಎಂದು ನಿರ್ಧರಿಸಿದರು. ಕೇರಳದ ಹಳೆಯ ಅನುಭವಿ ನಾಯಕ ಮನ್ನಥ್ ಪದ್ಮನಾಭನ್ ಅವರ ಅನುಮತಿಯೊಂದಿಗೆ ಆಲ್ ಇಂಡಿಯಾ ಸಮಿತಿಯು ರಚನೆಯಾಯಿತು. ಕನ್ಯಾಕುಮಾರಿ ಜಿಲ್ಲಾಡಳಿತವು, ಸ್ಮಾರಕ ನಿರ್ಮಾಣದ ಮುಖ್ಯಮಂತ್ರಿಯ ಪ್ರಸ್ತಾಪವನ್ನು ಸ್ವೀಕರಿಸಿತು. ಆದರೆ ಆಲ್ ಇಂಡಿಯಾ ಸಮಿತಿಯ ಅನುಮೋದನೆಯ ನಂತರ ಸಮ್ಮತಿಸುದಾಗಿ ಹೇಳಿದರು. ಅಂತಿಮವಾಗಿ, 1963 ರ ಜನವರಿ 17 ರಂದು ಮನ್ನಥ್ ಪದ್ಮನಾಥನ್ ಅವರ ಉಪಸ್ಥಿತಿಯಲ್ಲಿ ಸಮಿತಿಯ ಸದಸ್ಯರು ಮತ್ತು ಜನರು, ಸ್ವಾಮೀಜಿ ಸ್ಮರಣಾರ್ಥ ರಾಕ್ನಲ್ಲಿ ಫಲಕ ಸ್ಥಾಪನೆ ಮಾಡಿದರು. ಫೆಬ್ರವರಿ 1963 ರಲ್ಲಿ ರಾಷ್ಟ್ರೀಯ ಮಟ್ಟದ ಸಮಿತಿಯ ಸಾಮಾನ್ಯ ಸಭೆಯನ್ನು ಮದ್ರಾಸ್ನಲ್ಲಿ ನಡೆಸಲಾಯಿತು. ಸ್ವಾಮಿ ಚಿನ್ಮಾನಯಾಂದ, ಗೋಲ್ವಾಲ್ಕರ್ ಗುರೂಜಿ, ಮನ್ನಥ್ ಪದ್ಮನಾಥನ್, ಡಾ. ಟಿ. ಪಿ. ಪಿ ಮಹಾದೇವನ್ ಮತ್ತು ಇತರರು ಇದರಲ್ಲಿ ಭಾಗವಹಿಸಿದ್ದರು.
ಆ ಸಭೆ ಅಂದು, ವಿವೇಕಾನಂದ ರಾಕ್ ಮೇಲೆ ಕೇವಲ ಸ್ಮಾರಕ ಫಲಕವಲ್ಲದೆ, ಪೂರ್ಣ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿತು. ಸ್ಮಾರಕಕ್ಕಾಗಿ ಸ್ವಾಮಿ ಚಿನ್ಮಯಾನಂದರು ರೂ. 10,000/ – ದ ಮೊತ್ತವನ್ನು ಮೊದಲನೇಯದಾಗಿ ದಾನ ಮಾಡಿದರು. ಏತನ್ಮಧ್ಯೆ, ಕ್ರಾಸ್ ಅನ್ನು ತೆಗೆದುಹಾಕಿದ ಪ್ರತೀಕಾರ ತೀರಿಸಲು ಮೇ 16 ರ 1926 ರಂದು ಕೆಲವು ಕ್ರಿಶ್ಚಿಯನ್ ಮತಾಂಧರುಗಳು ಫಲಕವನ್ನು ಕೆಡವಿ ಸಮುದ್ರಕ್ಕೆ ಎಸೆದರು. ಇದಕ್ಕೆ ಭಾರೀ ಆಂದೋಲನ, ಮೆರವಣಿಗೆಗಳು ಮತ್ತು ಪ್ರತಿಭಟನೆಗಳ ಮೂಲಕ ಪ್ರತಿಕ್ರಿಯೆಯನ್ನು ನೀಡಲಾಯಿತು.
ಏಕನಾಥ್ ರಾನಡೆ ಪ್ರವೇಶ: ತಮಿಳುನಾಡು ಸರಕಾರವು ರಾಕ್ನಲ್ಲಿ ಸ್ಮಾರಕವನ್ನು ನಿರ್ಮಿಸಲು ಅನುಮತಿಸಲಿಲ್ಲ; ಹೀಗಾಗಿ ಅವರು ಆಗಿನ ಆರ್ಎಸ್ಎಸ್ ಸರಸಂಘಚಾಲಕ ಎಮ್ ಎಸ್ ಗೋಲ್ವಾಲ್ಕರ್ ಅಲಿಯಾಸ್ ಶ್ರೀ ಗುರೂಜಿಯವರನ್ನು ಸಂಪರ್ಕಿಸಿದರು. ಸ್ಮಾರಕಕ್ಕಾಗಿ ಸರಕಾರವನ್ನು ಪ್ರಚೋದಿಸಲು ದೇಶಾದ್ಯಂತದ ಆಂದೋಲನವನ್ನು ನಡೆಸುವ ಸಾಮರ್ಥ್ಯದಲ್ಲಿ ತಾವಿಲ್ಲ ಎಂಬುದನ್ನು ಸಮಿತಿಯ ಸದಸ್ಯರು ಅರಿತಿದ್ದರು. ಇದಲ್ಲದೆ, ತಮಿಳುನಾಡಿನ ಕನ್ಯಾಕುಮಾರಿನಲ್ಲಿನ ಸಾಮಾನ್ಯ ವಾತಾವರಣವು “ಬೆಂಗಾಲಿ ವಿವೇಕಾನಂದ”ರಿಗೆ ಸರಿಹೊಂದುವಂತಿರಲಿಲ್ಲ. ಆದ್ದರಿಂದಲೇ, ಇವರುಗಳು ಶ್ರೀ ಗುರೂಜಿ ಅವರನ್ನು ಭೇಟಿ ಮಾಡಲು ಮತ್ತು ತಮ್ಮ ಯೋಜನೆಗೆ ಅವರ ಸಹಾಯವನ್ನು ಪಡೆಯಲು ನಾಗ್ಪುರಕ್ಕೆ ಬಂದರು. ಆರೆಸ್ಸೆಸ್ ಮುಖ್ಯಸ್ಥ ಏಕನಾಥ್ ರಾನಡೆ ಅವರನ್ನು ಕೇಳಿದರು. ಇವರು ಆಗ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಸಂಪೂರ್ಣ ವಿಚಾರವನ್ನು ತಿಳಿದುಕೊಂಡ ಬಳಿಕ ಅವರು ಸಹಾಯ ಮಾಡಲು ಒಪ್ಪಿದರು.
ಸಮಸ್ಯೆಯನ್ನು ಅಧ್ಯಯನ ಮಾಡಲು ರಾನಡೆ ಸ್ವಲ್ಪ ಸಮಯ ಕಳೆದರು, ಕನ್ಯಾಕುಮಾರಿ ಮತ್ತು ಮದ್ರಾಸ್ಗೆ ಭೇಟಿ ನೀಡಿದರು ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಬಳಿಕ ಕೊಲ್ಕತ್ತಾದ ಆರ್ ಕೆ ಮಿಷನ್ಗೆ ತೆರಳಿದರು ಮತ್ತು ಅದರ ಅಧ್ಯಕ್ಷ ಮಹಾರಾಜ್ ಸ್ವಾಮಿ ಮಾಧವನಂದ ಅವರನ್ನು ಭೇಟಿಯಾದರು ಮತ್ತು ಅವರ ಅಭಿಪ್ರಾಯ ಮತ್ತು ಆಶೀರ್ವಾದಗಳನ್ನು ಸುಲಭವಾಗಿ ಪಡೆದರು.
ರಾಜಕೀಯ ಬಿಗಿ ನಿಲುವಿನೊಂದಿಗೆ ವ್ಯವಹರಿಸುವಾಗ: ಏಕನಾಥ್ ರಾನಡೆ ಅವರು ಆಗಸ್ಟ್ 11, 1963 ರಂದು ವಿವೇಕಾನಂದ ರಾಕ್ ಸ್ಮಾರಕ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದರು. ಮನ್ನಥ್ ಪದ್ಮನಾಥನ್ ಅಧ್ಯಕ್ಷರಾಗಿದ್ದರು ಮತ್ತು ಪ್ರೊಫೆಸರ್ ಪಿ ಮಹಾದೇವನ್ ಕಾರ್ಯದರ್ಶಿಯಾಗಿದ್ದರು. ತಕ್ಷಣವೇ, ಅವರು, ತನ್ನನ್ನು ಕಾರ್ಯದಲ್ಲಿ ಮುಳುಗಿಸಿಕೊಂಡರು, ತನ್ನ ಯೋಜನಾ ಕಾರ್ಯವನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದರು. ಸ್ಮಾರಕಕ್ಕೆ ಪ್ರಮುಖವಾಗಿ ವಿರೋಧಿಸುತ್ತಿದ್ದ ಅಂದಿನ ಕೇಂದ್ರ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಹುಮಾಯೂನ್ ಕಬೀರ್ ಅವರೊಂದಿಗೆ ಮೊದಲ ಮುಖಾಮುಖಿ ನಡೆಸಿದರು. ಏಕನಾಥ್ ಅವರು ಪತ್ರಿಕೆಯ ಮೂಲಕ ಹುಮಾಯೂನ್ ಕಬೀರ್ ಅವರನ್ನು ವಿರೋಧಿಸಿದರು, ಅಂತಿಮವಾಗಿ ಸ್ಮಾರಕಕ್ಕಾಗಿ ಅವರ ಒಪ್ಪಿಗೆಯನ್ನು ಪಡೆದರು.
ತಮಿಳುನಾಡು ಮುಖ್ಯಮಂತ್ರಿ ಎಂ ಭಕ್ತವತ್ಸಳ ಅವರೊಂದಿಗೆ ವ್ಯವಹರಿಸುವುದು ಹೆಚ್ಚು ಸವಾಲಿನ ಕಾರ್ಯವಾಗಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಲಹೆಯ ಮೇರೆಗೆ ಅವರು ದೆಹಲಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದರು. ಅಲ್ಲಿ ಸ್ಮಾರಕಕ್ಕೆ ಒಪ್ಪಿಕೊಳ್ಳಲು ಮುಖ್ಯಮಂತ್ರಿಯನ್ನು ಮನವೊಲಿಸಲು ಅವರು ತಮ್ಮ ಕೌಶಲ್ಯಗಳನ್ನು ಬಳಸಿಕೊಳ್ಳಬೇಕಾಯಿತು.
ಸಂಸತ್ ಸದಸ್ಯರ ಸಹಿಗಳು: ಏತನ್ಮಧ್ಯೆ, ಅವರು ದೆಹಲಿಯಲ್ಲಿ ಶಾಸಕರನ್ನು ಭೇಟಿ ಮಾಡಲು ಮತ್ತು ರಾಕ್ ಸ್ಮಾರಕಕ್ಕೆ ಅವರ ಬೆಂಬಲವನ್ನು ಪಡೆಯಲು ನಿರ್ಧರಿಸಿದರು. ಏಕನಾಥ್ ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಕುಳಿತುಕೊಂಡು, ಅಲ್ಲಿ ಸದಸ್ಯರನ್ನು ಭೇಟಿಯಾಗಿ ಸಹಿ ಪಡೆಯಲು ಮುಂದಾದರು. ಒಂದು ತಿಂಗಳ ಅವಧಿಯಲ್ಲಿ ಅವರು ಎಲ್ಲಾ ಪಕ್ಷಗಳಿಗೆ ಸೇರಿದ 323 ಸಂಸತ್ ಸದಸ್ಯರ ಸಹಿಗಳನ್ನು ಸಂಗ್ರಹಿಸಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯದರ್ಶಿ ರಘುನಾಥ್ ಸಿಂಗ್, ಡಾ. ರಾಮ್ ಮನೋಹರ್ ಲೋಹಿಯಾ, ಕಮ್ಯುನಿಸ್ಟ್ ನಾಯಕ ರೆನು ಚಕ್ರವರ್ತಿ, ಸಿ ಎನ್ ಅನ್ನದೊರೈ, ರಿಪಬ್ಲಿಕನ್ ಪಾರ್ಟಿ ನಾಯಕ ಗಿಕ್ವಾಡ್ ಮತ್ತು ಖೊಬ್ರಾಗಡೆ ಮುಂತಾದವರು ಸಹಿ ಹಾಕಿದ್ದಾರೆ.
ಎಲ್ಲಾ ಪಕ್ಷಗಳಿಂದ 323 ಸಂಸದರ ಸಹಿ ಪಡೆದ ರಾನಡೆ, ಲಾಲ್ ಬಹದ್ದೂರ್ ಶಾಸ್ತ್ರಿ ಬಳಿ ಹೋದಾಗ ಅವರು ದಿಗ್ಭ್ರಮೆಗೊಂಡರು. ಈ ಮನವಿಗೆ ಕೇವಲ 10-20 ಮಂದಿ ಸಹಿಗಳನ್ನು ಹಾಕಬಹುದು ಎಂದು ಶಾಸ್ತ್ರೀ ನಿರೀಕ್ಷಿಸುತ್ತಿದ್ದರು. ಆದರೆ ಏಕನಾಥ್ ರಾನಡೆ ಅವರು ಬೆವರಿಳಿಸಿ 323 ಸಹಿಯನ್ನು ಪಡೆದುಕೊಂಡು ಆಶ್ಚರ್ಯ ಮೂಡಿಸಿದರು! ಶಾಸ್ತ್ರಿ ಇವರನ್ನು “ಉತ್ತಮ ಕೆಲಸ” ಮಾಡಿದಿರಿ ಎಂದು ಶ್ಲಾಘಿಸಿದರು ಮತ್ತು ಇವರಿಗೆ “ನಿನ್ನ ಕೆಲಸ ಮುಗಿದಿದೆ. ಈಗ ನನ್ನ ಕೆಲಸವು ಆರಂಭವಾಗುತ್ತದೆ ಮತ್ತು ನೀವು ಬಯಸಿದ್ದನ್ನು ಸಾಧಿಸಿದ್ದೀರಿ. ಈಗ ನೀವು ಹೋಗಿ ವಿಷಯದ ಬಗ್ಗೆ ಚಿಂತಿಸಬೇಡಿ. ರಾಕ್ ಮೆಮೋರಿಯಲ್ ಸ್ಥಾಪನೆಯ ಭರವಸೆ ನಾನು ನೀಡುತ್ತೇನೆ’ ಎಂದರು.
ನೆಹರೂ ಅವರಿಗೂ ಮನವರಿಕೆ ಆಯಿತು: ಭಾರತ ಸರಕಾರವು ಬಂಡೆಯ ಮೇಲೆ ಸ್ಮಾರಕ ನಿರ್ಮಾಣಕ್ಕೆ ವಿರುದ್ಧವಾಗಿಲ್ಲ ಎಂದು ಪ್ರಧಾನಿ ಜವಾಹರ್ ಲಾಲ್ ನೆಹರು ಹೇಳಿಕೆಯೊಂದನ್ನು ನೀಡಿದರು. ‘ಭಾರತ ಸರ್ಕಾರವಾಗಿ ನಾವು ರಾಕ್ನಲ್ಲಿ ಸ್ವಾಮೀಜಿಯ ಪ್ರತಿಮೆ ಹೊಂದಲು ಇಷ್ಟಪಡುತ್ತೇವೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ಇದು ಮದ್ರಾಸ್ ಸರ್ಕಾರಕ್ಕೆ ಬಿಟ್ಟಿದ್ದು’ ಎಂದರು. ಪ್ರಧಾನಿ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಮುಖ್ಯಮಂತ್ರಿಯೊಂದಿಗೆ ಈ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿದರು.
ಒಂದೆರಡು ದಿನಗಳ ನಂತರ ಆಗಿನ ಮುಖ್ಯಮಂತ್ರಿ ಭಕ್ತವತ್ಸಳ ಅವರು “ನಾವು ರಾಕ್ ಮೇಲೆ ಪ್ರತಿಮೆಯನ್ನು ಎಂದಿಗೂ ಆಕ್ಷೇಪಿಸಲಿಲ್ಲ. ಸಮುದ್ರದ ಮಧ್ಯೆ ಇರುವ ಕಲ್ಲುಗಳು ನಿರಂತರವಾಗಿ ಅಲೆಗಳ ಮೂಲಕ ತೊಳೆದುಕೊಂಡಿರುತ್ತವೆ. ಹಾಗಾಗೀ ಸ್ಮಾರಕ ಸುದೀರ್ಘ ಸಮಯ ನಿಲ್ಲಲಾರದು ಎಂಬುದು ಮಾತ್ರ ಆಕ್ಷೇಪಣೆ, ಆತಂಕ ಎಂದರು..
ಭಕ್ತವತ್ಸಳರನ್ನು ನಿಭಾಯಿಸಿದ್ದು: ಭಕ್ತವತ್ಸಳಮ್ ಅವರು ಬಂಡೆಯ ಮೇಲೆ ಪ್ರತಿಮೆ ಹೊಂದಲು ಒಪ್ಪಿಕೊಂಡರೂ, 15X15 ಆಯಾಮಗಳನ್ನು ಮೀರದಂತಹ ಕಟ್ಟಡವನ್ನು ನಿರ್ಮಿಸಬೇಕು ಎಂದು ಆದೇಶಿಸಿದರು. ಈಗ, ಏಕನಾಥ್ ಜೀ ಅವರು ಮತ್ತೊಂದು ಅಡಚಣೆ ಎದುರಿಸಿದರು. ಸಮಯ ಸಾಗುತ್ತಿದೆ ಮತ್ತು ಸ್ವಾಮೀಜಿ ಜನ್ಮ ಶತಮಾನೋತ್ಸವದ ವರ್ಷ ಶೀಘ್ರದಲ್ಲೇ ಅಂತ್ಯವಾಗಲಿದೆ. ಹಾಗಾಗಿ ಅಂದುಕೊಂಡದ್ದನ್ನು ಸಾಧಿಸಲು ಅವರು ನಿಧಾನವಾಗಿ ಚಲಿಸುವ ಆಡಳಿತ ಯಂತ್ರದ ವಿರುದ್ಧ ವೇಗವಾಗಿ ಚಲಿಸಬೇಕಾಯಿತು.
ಪ್ರಸ್ತಾವಿಸಿದಂತೆ, ಏಕಾನಾಥ್ಜಿ ಅವರು ತಾನು ಸ್ಮಾರಕದ ವಿನ್ಯಾಸ, ರಚನೆಯ ಬಗ್ಗೆ ಚರ್ಚಿಸಲು, ರಾಷ್ಟ್ರಪತಿ ಎಸ್. ರಾಧಾಕೃಷ್ಣನ್, ಪ್ರಧಾನಿ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ, ಎಂ.ಸಿ. ಚಾಗ್ಲಾ, ಆರ್.ಕೆ ಮಿಷನ್ ಅಧ್ಯಕ್ಷ ಮಹಾರಾಜ್ ಮತ್ತು ಕಾಂಚಿ ಕಾಂಕೋಟಿ ಪೀಠದ ಶಂಕರಾಚಾರ್ಯ ಸೇರಿದಂತೆ ಪ್ರಖ್ಯಾತ ಆರು ಜನರನ್ನು ಭೇಟಿಯಾಗಲು ಬಯಸುತ್ತಿರುವುದಾಗಿ ಭಕ್ತವತ್ಸಳ ಅವರಿಗೆ ತಿಳಿಸಿದರು. ಮುಖ್ಯಮಂತ್ರಿ ಈ ಪ್ರಸ್ತಾಪಕ್ಕೆ ಒಪ್ಪಿಕೊಂಡರು.
ಭಕ್ತವತ್ಸಳರು, ಕಾಂಚಿಯ ಶಂಕರಾಯಚರ್ಯರ ಮಹಾನ್ ಭಕ್ತರೆಂದು ಏಕನಾಥ್ ಅವರಿಗೆ ತಿಳಿದಿತ್ತು. ಮುಖ್ಯಮಂತ್ರಿಯಾದಾಗ ಅವರು ಮೊದಲು ಶಂಕರಚಾರ್ಯರ ಬಳಿ ಹೋಗಿ, ಆಶೀರ್ವಾದವನ್ನು ಪಡೆದಿದ್ದರು ಮತ್ತು ಅವರ ಪಾದಕ್ಕೆ ಎರಗಿದ್ದರು. ಆದ್ದರಿಂದಲೇ ಅವರು, ಆಚಾರ್ಯರನ್ನು ವಾಸ್ತುಶಿಲ್ಪಿ ಸ್ತಪತಿ ಅವರೊಂದಿಗೆ ಭೇಟಿಯಾಗಿ ವಿವಿಧ ವಿನ್ಯಾಸಗಳನ್ನು ತೋರಿಸಿದರು. ಅದರಲ್ಲಿ ಒಂದನ್ನು ಆಚಾರ್ಯರು ಅಂಗೀಕರಿಸಿದರು.
ಬಳಿಕ ರಾನಡೆ ಭಕ್ತವತ್ಸಳರನ್ನು ಭೇಟಿಯಾದರು ಮತ್ತು ಅನುಮೋದನೆಯ ವಿನ್ಯಾಸದೊಂದಿಗೆ ಅವರ ಸಭೆಗೆ ಮಾಹಿತಿ ನೀಡಿದರು. ಭಕ್ತವತ್ಸಳ ಯಾವುದೇ ಆಕ್ಷೇಪಣೆಯಿಲ್ಲದೆ ಅವರ ಹಿಂದಿನ 15X15 ಆಯಾಮದ ವಿನ್ಯಾಸವನನು ತಳ್ಳಿಹಾಕಿದರು. 91X32 ಅಳತೆ ಮಾಡಿದ ಆಚಾರ್ಯರು ಅಂಗೀಕರಿಸಿದನ್ನು ಒಪ್ಪಿಕೊಂಡರು.
ಸ್ಮಾರಕಕ್ಕಾಗಿ ಹಣವನ್ನು ಸಂಗ್ರಹಿಸುವುದು: ವಿನ್ಯಾಸವನ್ನು ಅನುಮೋದಿಸಿದ ನಂತರ ಅದರ ನಿರ್ಮಾಣಕ್ಕಾಗಿ ಹಣವನ್ನು ಸಂಗ್ರಹಿಸುವ ಕಾರ್ಯ ಆರಂಭವಾಯಿತು. ಏಕ್ನಾಥ್ ಅವರು ಉನ್ನತ ಉದ್ಯಮಿ ಮತ್ತು ಉದಾರಿ ವ್ಯಕ್ತಿಯಾದ ಜೆ ಕೆ ಬಿರ್ಲಾರನ್ನು ಸಂಪರ್ಕಿಸಿದರು. ಬಿರ್ಲಾ, ಈ ವಿಷಯ ಕೇಳಿದ ನಂತರ, 10,000 ರೂ. ಮೊತ್ತವನ್ನು ನೀಡಿದರು. ಆದರೆ ಇದನ್ನು ಏಕ್ನಾಥ್ ವಿನಂಬ್ರವಾಗಿ ತಿರಸ್ಕರಿಸಿ, ಕನಿಷ್ಠ 100,000/- ದಾನವನ್ನು ನೀಡಬೇಕೆಂದು ಕೇಳಿಕೊಂಡರು. ಆ ಸಮಯದಲ್ಲಿ ಸ್ಮಾರಕದ ಒಟ್ಟು ಬಜೆಟ್ ರೂ.30 ಲಕ್ಷ ಎಂದು ಅಂದಾಜಿಸಲಾಗಿತ್ತು. ಹೆಚ್ಚು ಮನವೊಲಿಸಿದ ನಂತರ, ಬಿರ್ಲಾ ರೂ. 50,000/- ಪಾವತಿಸಲು ಒಪ್ಪಿಕೊಂಡರು.
ಈ ಸ್ಮಾರಕದ ನಿರ್ಮಾಣದಲ್ಲಿ ಎಲ್ಲ ರಾಜ್ಯ ಸರಕಾರಗಳನ್ನು ಒಳಪಡಿಸುವ ಅದ್ಭುತವಾದ ಪರಿಕಲ್ಪನೆಯನ್ನು ಏಕ್ನಾಥ್ ಹೊಂದಿದ್ದರು. ಹಾಗಾಗಿ ಅವರು ಎಲ್ಲಾ ರಾಜ್ಯ ಸರ್ಕಾರಗಳಿಗೆ ಒಂದು ಲಕ್ಷ ರೂ. ನೀಡುವಂತೆ ಕೇಳಿದರು. ಆಗಿನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಜ್ಯೋತಿ ಬಸು ಅವರೊಂದಿಗಿನ ಅವರ ಸಭೆಯು ಸ್ಮರಣೀಯವಾಗಿತ್ತು. ಅವರನ್ನು ನೋಡಲು ಹೋದಾಗ ಬಸು ಅವರು ರಾನಡೆ ಅವರಿಗೆ: “ವಿಆರ್ಎಂ ಮತ್ತು ಈ ಎಲ್ಲಾ ಸಂಗತಿಗಳು ನನ್ನ ಮನಸ್ಸಿಗೆ ದೂರವಿದೆ. ನನ್ನೊಂದಿಗೆ ನಿಮಗೆ ಕೆಲಸವಿದೆ ಎಂದು ನನಗನಿಸುವುದಿಲ್ಲ’ ಎಂದಿದ್ದರು.
ವಿವೇಕಾನಂದ ಅವರ ತತ್ವ ಮತ್ತು ಕಮ್ಯೂನಿಸ್ಟ್ ತತ್ತ್ವಶಾಸ್ತ್ರದಲ್ಲಿನ ಹೋಲಿಕೆಗಳನ್ನು ಏಕನಾಥ್ ಬಸು ಅವರಿಗೆ ನೆನಪಿಸಿದರು, ಬಸು ತನ್ನ ವಿರೋಧದವನ್ನು ಮೃದುಗೊಳಿಸಿದರು. ಆದರೆ ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಿ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದರು. ಆದರೆ ನಿಮ್ಮ ಪತ್ನಿ ಕಮ್ಯುನಿಸ್ಟ್ ಪಕ್ಷದ ಸದಸ್ಯರಲ್ಲ ಮತ್ತು ಅಂತಹ ನಿರ್ಧಾರವನ್ನು ಅನುಸರಿಸಲು ಬದ್ಧರಾಗಿಲ್ಲ ಎಂದು ರಾನಡೆ ಅವರಿಗೆ ಹೇಳಿದರು. ಬಳಿಕ ರಾನಡೆ ಕಮಲಾ ಬಸು ಅವರೊಂದಿಗೆ ಮಾತನಾಡಿದರು, ಅವರಿಗೆ ಒಂದು ರಸೀದಿ ಪುಸ್ತಕವನ್ನು ನೀಡಿದರು. ಅವರು ರೂ 1100/- ವನ್ನು ಯೋಜನೆಗೆ ಕೊಡುಗೆಯಾಗಿ ನೀಡಿದರು.
ನಾಗಾಲ್ಯಾಂಡ್ ಅನುಭವ: ಹಣ ಸಂಗ್ರಹಣಾ ಚಾಲನಾ ಸಮಯದಲ್ಲಿ ಎಕ್ನಾಥ್ ಅವರು ನಾಗಾಲ್ಯಾಂಡ್ಗೆ ಭೇಟಿ ನೀಡಿದರು ಮತ್ತು ಅಲ್ಲಿನ ಮುಖ್ಯಮಂತ್ರಿ ಹೊಕೆಶೆ ಸೆಮಾರನ್ನು ಭೇಟಿಯಾದರು. ಹೊಕೆಶೆ ಅವರು ಪ್ರಶ್ನೆಯೊಂದನ್ನು ಇವರಿಗೆ ಕೇಳಿದರು: “ಶ್ರೀ ರಾನಡೆಯವರೆ ಏಕೆ ಹಣದ ಸಂಗ್ರಹಕ್ಕಾಗಿ ನೀವು ನಾಗಾಲ್ಯಾಂಡ್ ಅನ್ನು ಆಯ್ಕೆ ಮಾಡಿದ್ದೀರಿ? ನಾವು ಇಲ್ಲಿ ಹಣವನ್ನು ಹೊಂದಿದ್ದೇವೆ ಎಂದು ಯಾರು ಹೇಳಿದರು? ರಾಜ್ಯವು ಸಂಪೂರ್ಣವಾಗಿ ಕೇಂದ್ರದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಸರ್ಕಾರ ಅಥವಾ ಇಲ್ಲಿ ಜನರು ದಾನ ಮಾಡಲು ಸಾಧ್ಯವಾಗಲಾರದು’ ಎಂದರು. ರಾನಡೆಯವರು ನಾವು ಹಣಕ್ಕಾಗಿ ಕೇವಲ ಬಂದುದಲ್ಲ, ನಿಮ್ಮ ಭಾಗವಹಿಸುವಿಕೆಯನ್ನು ಮನವರಿಕೆ ಮಾಡಲು ಬಂದಿದ್ದೇವೆ ಎಂದರು. ಸ್ವಾಮಿ ವಿವೇಕಾನಂದ ಮತ್ತು ಅವರ ಆದರ್ಶಗಳು ಈ ದೇಶದ ಭವಿಷ್ಯಕ್ಕಾಗಿ ಅಗತ್ಯವಾದ ಭಾರತದ ಆತ್ಮವನ್ನು ಪ್ರತಿನಿಧಿಸುತ್ತವೆ ಎಂದು ಅವರು ಸೆಮಾಗೆ ತಿಳಿಸಿದರು. ಮುಖ್ಯಮಂತ್ರಿ ವಿವೇಕಾನಂದ ಮತ್ತು ಅವರ ತತ್ತ್ವಶಾಸ್ತ್ರದ ಬಗ್ಗೆ ರಾಜ್ಯದ ಜನರಿಗೆ ಕಡಿಮೆ ಜ್ಞಾನವಿಲ್ಲ ಎಂದು ಹೇಳಿದರು. ಅವರು ಸ್ವಾಮೀಜಿಯ ಬಗ್ಗೆ ತನ್ನ ಅಜ್ಞಾನವನ್ನು ಸಹ ಒಪ್ಪಿಕೊಂಡರು. ರಾನಡೆ ಅವರಿಗೆ ಸ್ವಾಮೀಜಿಯ ಬಗ್ಗೆ ಕೆಲವು ಪುಸ್ತಕಗಳನ್ನು ನೀಡಿದರು ಮತ್ತು ರಾಜ್ಯದ ಮಟ್ಟದ ಸಮಿತಿಯ ಅಧ್ಯಕ್ಷರಾಗಿ ಅವರನ್ನು ಒಪ್ಪಿಸಿದರು ಮತ್ತು ಈ ಸ್ಮಾರಕಕ್ಕಾಗಿ ಒಂದು ಲಕ್ಷ ರೂ. ದೇಣಿಗೆ ನೀಡಿದರು.
ಅಂತೆಯೇ ಸಮಿತಿಯು ರಚನೆಯಾಯಿತು, ವಿಶೇಷ ಫೋಲ್ಡರ್ಗಳನ್ನು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮುದ್ರಿಸಲಾಯಿತು ಮತ್ತು ಪ್ರಸಾರ ಮಾಡಲಾಯಿತು. ಕೆಲವು ರೂ. 7000/- ಗಳನ್ನು ಸಂಗ್ರಹಿಸಿ ರಾಜ್ಯ ಸರ್ಕಾರವು ರೂ. 15,000/- ನೀಡಿತು.
ಒಂದು ರೂಪಾಯಿ ಫೋಲ್ಡರ್ನ ನಾವೀನ್ಯ ಕಲ್ಪನೆ: ಸಾಮಾನ್ಯ ನಾಗರಿಕರಿಂದ ಸ್ಮಾರಕಕ್ಕಾಗಿ ಹಣ ಸಂಗ್ರಹಿಸಲು ವಿಆರ್ಎಂಸಿ ಒಂದು ರೂಪಿಯ ಫೋಲ್ಡರ್ ಮುದ್ರಿಸಲಾಯಿತು,. ಸ್ವಾಮಿ ವಿವೇಕಾನಂದರ ಮಹಾನ್ ವ್ಯಕ್ತಿತ್ವಕ್ಕೆ ದೇಶದ ಜನರನ್ನು ಒಳಪಡಿಸುವುದು ಮತ್ತು ಸಂಪರ್ಕಿಸುವ ಅತ್ಯಂತ ನಾವೀನ್ಯದ ಕಲ್ಪನೆ ಇದು. ರೂ.1,3 ಮತ್ತು 5 ರ ಸುಮಾರು 50 ಲಕ್ಷ ಫೋಲ್ಡರ್ಗಳನ್ನು ಮುದ್ರಿಸಲಾಯಿತು ಮತ್ತು ವ್ಯಾಪಕವಾಗಿ ಪ್ರಸಾರ ಮಾಡಲಾಯಿತು. ದೇಶದ ಮೂಲೆ ಮತ್ತು ಮೂಲೆಗೆ ಸ್ವಾಮೀಜಿಯ ಹೇಳಿಕೆಗಳನ್ನು ಮತ್ತು ಉಲ್ಲೇಖಗಳನ್ನು ಪ್ರಚಾರ ಮಾಡುವ ಸಾಧನವಾಗಿ ಫೋಲ್ಡರ್ಗಳನ್ನು ಮಾಡಲಾಯಿತು. ನಾಗಾಲ್ಯಾಂಡಿಗಾಗಿ ಪ್ರತ್ಯೇಕವಾದ ಫೋಲ್ಡರ್ಗಳನ್ನು ಮುದ್ರಿಸಲಾಗುತ್ತಿತ್ತು. ಸ್ವಾಮಿ ರಂಗನಾಥಾನಂದ ಅವರು ಕೊಹಿಮಾಕ್ಕೆ ಭೇಟಿ ನೀಡಿದ್ದರು ಮತ್ತು ಸ್ವಾಮಿ ವಿವೇಕಾನಂದ ಮತ್ತು ಅವರ ಮಿಶನ್ ಬಗ್ಗೆ ಉಪನ್ಯಾಸ ನೀಡಿದರು. ಈ ಕಾರ್ಯಾಚರಣೆಯಲ್ಲಿ ಸಮಾಜದ ಎಲ್ಲಾ ವಿಭಾಗಗಳನ್ನು ಸಂಪರ್ಕಿಸಲು ಇದು ಯೋಜಿಸಲಾಗಿತ್ತು. ಆರ್ಮಿ ಮುಖ್ಯಸ್ಥ, ಎಲ್ಲಾ ಪ್ರದೇಶದ ಕಮಾಂಡರ್ಗಳು, ಏರ್ ಫೋರ್ಸ್ನ ಮುಖ್ಯಸ್ಥರನ್ನು ಸಂಪರ್ಕಿಸಿ, ಜಮ್ಮು ಕಾಶ್ಮೀರದಲ್ಲಿ ಕಂಟೋನ್ಮೆಂಟ್ಗಳು ಅವರಿಗೆ ದೇಣಿಗೆ ಪಡೆಯಲು ಸಾಧ್ಯವಾಯಿತು.
ಎಲ್ಲಾ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು, ಉಪ-ಚಾನ್ಸೆಲರ್ಗಳು, ಮುಖ್ಯಸ್ಥರು, ಮುಖ್ಯೋಪಾಧ್ಯಾಯರು, ಟ್ರೇಡ್ ಯೂನಿಯನ್ಗಳು, ರಾಜಕೀಯ ಪಕ್ಷಗಳು, ಸಾಮಾಜಿಕ, ಧಾರ್ಮಿಕ ಗುಂಪುಗಳು ಮತ್ತು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸಂಪರ್ಕಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಸ್ವಯಂ ಸೇವಾ ಸಂಘ) ಸ್ವಯಂಸೇವಕರು ಈ ನಿಧಿ ಸಂಗ್ರಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ರೀತಿಯಾಗಿ, ಇಂದು ಭವ್ಯವಾಗಿ ನಿಂತು ಜನರಿಗೆ ಸ್ಫೂರ್ತಿ ನೀಡುವುದರ ಮೂಲಕ, ದೇಶ, ಸಮಾಜ ಮತ್ತು ಮಾನವೀಯತೆಯ ಸೇವೆಗೆ ಸಮರ್ಪಣೆ ಮಾಡಲು ಅವರಿಗೆ ಹಣವನ್ನು ಬೆಳೆಸಲಾಯಿತು.
ಪೀಪಲ್ಸ್ ಸ್ಮಾರಕ: ಸ್ವಾಮಿ ವಿವೇಕಾನಂದಕ್ಕೆ ಈ ಸ್ಮಾರಕದ ಹಿಂದೆ ಏಕನಾಥ ರಾನಡೆ ಪ್ರೇರಣಾಶೀಲ ಮತ್ತು ಶ್ರಮಿಕ ವ್ಯಕ್ತಿಯಾಗಿದ್ದರೂ, ದೇಶದ ಪ್ರತಿ ವ್ಯಕ್ತಿಯು ಅದರ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು. ಈ ಅರ್ಥದಲ್ಲಿ, ಇಂತಹ ಬೃಹತ್ ಪ್ರಮಾಣದ ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ನಿರ್ಮಿಸಲಾದ ಮೊದಲ ಸ್ಮಾರಕವಾಗಿದೆ. ಅಂತಹ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಎರಡನೇ ಉದಾಹರಣೆಯೆಂದರೆ ಏಕತಾ ಪ್ರತಿಮೆ. ಪ್ರಧಾನಮಂತ್ರಿಯ ಮನವಿಯನ್ನು ಪ್ರತಿಕ್ರಿಯಿಸಿ, ದೇಶದಾದ್ಯಂತದ ರೈತರು ಈ ಪ್ರತಿಮೆಗಾಗಿ ಬಳಸದ ಉಪಕರಣಗಳು, ಕಬ್ಬಿಣದ ಬ್ಲೇಡ್ಗಳು ಮತ್ತು ಫಲಕಗಳನ್ನು ದಾನ ಮಾಡಿದರು ಇದರಿಂದ ನರ್ಮದಾ ದಡದಲ್ಲಿ ಆಧುನಿಕ ವಿಸ್ಮಯವನ್ನು ನಿರ್ಮಿಸಲಾಗಿದೆ.
“ಇಂದು ನಿಂತಿರುವ ವಿವೇಕಾನಂದ ಸ್ಮಾರಕವು ಶ್ರೀ ಏಕನಾಥ ರಾನಡೆ ಅವರ ಸ್ಮರಣೆಯೂ ಹೌದು. ಅವರು ಮಾಡಿದ ಕೆಲಸ, ಅವರ ಭಕ್ತಿಯ ಸಮರ್ಪಣೆ, ನಂಬಿಕೆಯಿಂದ ಈ ಸ್ಮಾರಕ ಪ್ರೇರಿತವಾಗಿದೆ’ ಎಂದು ಭಾವನ ಜರ್ನಲ್ ಸರಿಯಾಗಿಯೇ ಹೇಳಿದೆ.
“ಪ್ರತಿ ಎದುರಾಳಿಯ ಪ್ರತಿ ತಂತ್ರಕ್ಕೂ ಪ್ರತಿತಂತ್ರ ಇರುತ್ತದೆ ಮತ್ತು ಪ್ರತಿ ಅಸ್ತ್ರಕ್ಕೂ ಪ್ರತಿ ಅಸ್ತ್ರ ಇರುತ್ತದೆ. ಬದ್ಧತೆಯಿದ್ದರೆ ಯಾವ ಅಡೆತಡೆಯೂ ಲೆಕ್ಕಕ್ಕಿಲ್ಲ’ ಎಂಬ ರಾನಡೆಯವರ ಮಾತನ್ನು ಇಲ್ಲಿ ಸ್ಮರಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.