ನವದೆಹಲಿ: ಭಾರತದ ವಿರುದ್ಧದ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಬುದ್ಧಿಯನ್ನು ಪಾಕಿಸ್ಥಾನ ಕೈಬಿಡಬೇಕು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿದೆ.
ಒಂದು ಕಡೆ ಪಾಕಿಸ್ಥಾನಿಯರು ಭಾರತದೊಂದಿಗೆ ಮಾತುಕತೆ ನಡೆಸಲು ಉತ್ಸಾಹ ತೋರಿಸುತ್ತಿದ್ದಾರೆ, ಆದರೆ ಮತ್ತೊಂದು ಕಡೆ ಪಾಕಿಸ್ಥಾನ ಸರ್ಕಾರ ಹಾಲಿ ಸಚಿವರುಗಳು ಹಫೀಝ್ ಸಯೀದ್ನಂತಹ ಉಗ್ರರನ್ನು ಭೇಟಿಯಾಗುತ್ತಿದ್ದಾರೆ ಎಂದು ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಆರೋಪಿಸಿದ್ದಾರೆ.
ಅಲ್ಲದೇ ನಿಷೇಧಿತ ಉಗ್ರ ಸಂಘಟನೆಗಳು ಪಾಕಿಸ್ಥಾನದ ಬೆಂಬಲ ಮತ್ತು ಆಶ್ರಯವನ್ನು ನಿರಂತರವಾಗಿ ಪಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮೊದಲು ಪಾಕಿಸ್ಥಾನ ಭಯೋತ್ಪಾದನಾ ಸಂಘಟನೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಭಾರತದ ವಿರುದ್ಧ ಭಯೋತ್ಪಾದನೆ ಪ್ರಾಯೋಜಿಸುವುದನ್ನು ನಿಲ್ಲಿಸಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೇ, ಭಾರತದೊಂದಿಗೆ ಮಾತನಾಡಲು ಮುಂದಾಗುತ್ತಿರುವುದು ಪಾಕಿಸ್ಥಾನದ ನಾಟಕ ಎಂದಿರುವ ಅವರು, ಬಹುತ್ವ ಮತ್ತು ಅಂತರ್ಗತ ಆಡಳಿತದ ಬಗ್ಗೆ ನಮಗೆ ಬೋಧನೆ ಮಾಡುವ ಕೊನೆಯ ರಾಷ್ಟ್ರ ಅದು ಎಂದಿದ್ದಾರೆ.
source: www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.