ಕೋಲ್ಕತ್ತಾ: ಕಳೆದ ಐದು ವರ್ಷಗಳಲ್ಲಿ ದೇಶದ ಸೆಣಬು ಉತ್ಪನ್ನಗಳ ರಫ್ತು ಶೇ.24 ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
‘ಈಗ ನಾವು ಸೆಣಬಿನ ಪರ್ವ ಕಾಲದಲ್ಲಿದ್ದೇವೆ. 2014 ರಿಂದ ಸೆಣಬು ಮತ್ತು ಅದರ ಉತ್ಪನ್ನಗಳ ವಸ್ತುಗಳ ರಫ್ತಿನ ಪ್ರಮಾಣ ಶೇ.24 ರಷ್ಟು ಏರಿಕೆಯಾಗಿದೆ’ ಎಂದಿದ್ದಾರೆ.
ಇತ್ತೀಚಿಗೆ ಪುನರ್ನಿರ್ಮಾಣಗೊಂಡಿರುವ 185 ವರ್ಷಗಳ ಹೆರಿಟೇಜ್ ಕರೆನ್ಸಿ ಬಿಲ್ಡಿಂಗ್ನಲ್ಲಿ ನಡೆದ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಈ ಮಾತನಾಡಿದರು. 14 ರಾಷ್ಟ್ರಗಳ ನಿಯೋಗ ಇದರಲ್ಲಿ ಭಾಗಿಯಾಗಿತ್ತು.
ಇದೇ ವೇಳೆ ಟೆಕ್ಸ್ಟ್ಟೈಲ್ಸ್ ಕಾರ್ಯದರ್ಶಿ ರಾಘವೇಂದ್ರ ಸಿಂಗ್ ಅವರು, ನೇಕಾರರ ಆದಾಯವನ್ನು ಹೆಚ್ಚಿಸಲು ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ, ಅವರನ್ನು ಗಾರ್ಮೆಂಟ್ಸ್ ಉತ್ಪಾದಕರೊಂದಿಗೆ ಕನೆಕ್ಟ್ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ದೇಶದ 40 ಜಿಲ್ಲೆಗಳಲ್ಲಿ ನೇಕಾರರ ಮತ್ತು ಕರಕುಶಲ ಕರ್ಮಿಗಳಿಗೆ ಸಚಿವಾಲಯದ ವತಿಯಿಂದ ಸಹಾಯ ಮಾಡಲಾಗುತ್ತಿದೆ ಎಂದರು.
ಸೆಣಬು ಉತ್ಪಾದಿಸುವ ರೈತರ ಹಿತಾಸಕ್ತಿ ಕಾಪಾಡಲೂ ಸರ್ಕಾರ ಬದ್ಧವಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.