ರಕ್ಷಣಾ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮೋದಿ ಸರಕಾರ ನಡೆಸುತ್ತಿರುವ ಪ್ರಯತ್ನಗಳು ದೇಶಕ್ಕೆ ಲಕ್ಷಾಂತರ ಡಾಲರನ್ನು ಉಳಿಸಿಕೊಡುತ್ತಿವೆ. ಮೊದಲು ಆಮದು ಮಾಡಿಕೊಳ್ಳುತ್ತಿದ್ದ ಘನ ರಕ್ಷಣಾ ಉಪಕರಣಗಳು ಈಗ ದೇಶದ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಾದ ಡಿಆರ್ಡಿಒ, ರಿಲಯನ್ಸ್ ಡಿಫೆನ್ಸ್ಗಳಲ್ಲಿ ತಯಾರಾಗುತ್ತಿದೆ. 2016ರ ರಕ್ಷಣಾ ಸ್ವಾಧೀನ ನೀತಿ, ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ‘ಇಂಡಿಜೀನಿಯಸ್ಲಿ ಡಿಸೈನ್ಡ್ ಡೆವಲಪ್ಡ್ & ಮ್ಯಾನುಫ್ಯಾಕ್ಚರ್ಡ್(ಐಡಿಡಿಎಂ) ‘ ನಿಬಂಧನೆಯನ್ನು ಪರಿಚಯಿಸಿದೆ. ‘ಮೇಕ್’ ವಿಧಾನವು ಸರ್ಕಾರ ಅನುದಾನಿತ ಉತ್ಪಾದನೆ ಮತ್ತು ಕೈಗಾರಿಕಾ ಅನುದಾನಿತ ಉತ್ಪಾದನೆ ಎಂಎಸ್ಎಂಇ ನಿಬಂಧನೆಗಳನ್ನು ಹೊಂದಿದೆ. ತಂತ್ರಜ್ಞಾನದ ಸುಲಭ ವರ್ಗಾವಣೆ ಮತ್ತು ದೇಶೀಯ ಉತ್ಪಾದನೆ ಹೆಚ್ಚಿಸಲು ಆಫ್ಸೆಟ್ ನೀತಿಯಲ್ಲಿ ಬದಲಾವಣೆಯನ್ನು ಮಾಡಲಾಯಿತು. 2018ರ ಕರಡು ರಕ್ಷಣಾ ಉತ್ಪಾದನಾ ನೀತಿಯು, ಭಾರತವನ್ನು ರಕ್ಷಣಾ ಉಪಕರಣಗಳ ಉತ್ಪಾದನಾ ಕೇಂದ್ರವಾಗಿ ಮಾಡುವ ಉದ್ದೇಶವನ್ನು ಒಳಗೊಂಡಿದೆ. ಫೈಟರ್ ಜೆಟ್ಗಳು, ದಾಳಿ ಹೆಲಿಕಾಪ್ಟರ್ಗಳು ಸೇರಿದಂತೆ ಸ್ಟೇಟ್-ಆಫ್-ಆರ್ಟ್ ಮಿಲಿಟರಿ ಸಾಧನಗಳನ್ನು ತಯಾರಿಸಲು ಬೇಕಾದ ನಿರ್ಣಾಯಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಮೂಲಗಳನ್ನು ಹೂಡುವಂತೆ ಮಾಡುವುದು ಡಿಪಿಪಿ-2018 ರ ಪ್ರಮುಖ ಗುರಿಯಾಗಿದೆ. ಕರಡು ನೀತಿಯ ಪ್ರಕಾರ ಮೋದಿ ಸರಕಾರವು 2025 ರ ಹೊತ್ತಿಗೆ ಮಿಲಿಟರಿ ಸರಕು ಮತ್ತು ಸೇವೆಗಳಲ್ಲಿ 1.7 ಟ್ರಿಲಿಯನ್ ರೂ. (ರೂ 1, 70,000 ಕೋಟಿ)ಗಳ ವಹಿವಾಟು ಸಾಧಿಸಲು ಪ್ರಯತ್ನಿಸುತ್ತಿದೆ.
ಕಳೆದ ಕೆಲವು ವರ್ಷಗಳಲ್ಲಿ, ರಕ್ಷಣಾ ಉಪಕರಣಗಳ ಸ್ಥಳೀಯ ತಯಾರಿಕೆಯು ಮಹತ್ವದ ದಿಕ್ಕಿನಲ್ಲಿ ಚಲಿಸುತ್ತಿದೆ. ಭಾರೀ ಶಸ್ತ್ರಾಸ್ತ್ರಗಳ ಅಭಿವೃದ್ಧಿಗಾಗಿ ಸಾರ್ವಜನಿಕ ವಲಯದ ರಕ್ಷಣಾ ತಯಾರಕರು, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಗಳು ಗೆದ್ದ ಒಪ್ಪಂದಗಳು ಮಿಲಿಯನ್-ಡಾಲರ್ ಗಡಿಯನ್ನು ತಲುಪಿದೆ. ಕೆಲ ವರ್ಷಗಳಿಂದ ರಕ್ಷಣಾ ಕ್ಷೇತ್ರದ ಉದಾರೀಕರಣದಿಂದ ಪುಟಿದೇಳುತ್ತಿರುವ ಹೊಸ ಖಾಸಗಿ ಕಂಪೆನಿಗಳು ಕೂಡ ರಕ್ಷಣಾ ಉತ್ಪಾದನೆಯಲ್ಲಿ ಪಾಲ್ಗೊಳ್ಳುತ್ತಿವೆ. ಒಂದು ವರದಿಯ ಪ್ರಕಾರ, ದೇಶೀಯ ರಕ್ಷಣಾ ತಯಾರಿಕೆಯ ಮೇಲಿನ ಉತ್ತೇಜನದಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ 1 ಲಕ್ಷ ಕೋಟಿ ರೂ. ಮೌಲ್ಯದ ವಿದೇಶಿ ವಿನಿಮಯ ಉಳಿತಾಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ, ಡಿಆರ್ಡಿಒ ಒಟ್ಟು ಆರು ವಾಯು ರಕ್ಷಣಾ ಮತ್ತು ಯುದ್ಧ ಟ್ಯಾಂಕ್ ನಿರೋಧಕ ಕ್ಷಿಪಣಿ ವ್ಯವಸ್ಥೆಗಳನ್ನು ನಿರ್ಮಾಣ ಮಾಡುತ್ತಿದೆ. ಮೋದಿ ಸರಕಾರದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ ಮನೋಹರ್ ಪರಿಕರ್, ಅರುಣ್ ಜೇಟ್ಲಿ ಮತ್ತು ನಿರ್ಮಲಾ ಸೀತಾರಾಮನ್ ವಿದೇಶಿ ಆಮದುಗಳ ಬದಲು ದೇಶೀಯ ರಕ್ಷಣಾ ಉಪಕರಣಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ.
ಹಿಂದೆಯೂ ಕ್ಷಿಪಣಿ ವ್ಯವಸ್ಥೆಗಳ ಬಿಡಿ ಭಾಗಗಳು, ಜಲಾಂತರ್ಗಾಮಿ ಇತ್ಯಾದಿಗಳನ್ನು ಭಾರತದಲ್ಲಿ ನಿರ್ಮಿಸಲಾಗುತ್ತಿತ್ತು, ಆದರೆ ಹೆಚ್ಚಿನ ತಂತ್ರಜ್ಞಾನವನ್ನು ಹೊಂದಿದ ಅತೀ ಪ್ರಮುಖ ಉಪಕರಣಗಳನ್ನು ಯುನೈಟೆಡ್ ಸ್ಟೇಟ್ಸ್, ರಷ್ಯಾ, ಫ್ರಾನ್ಸ್, ಮತ್ತು ಯುನೈಟೆಡ್ ಕಿಂಗ್ಡಮ್ ಮುಂತಾದ ಪಾಶ್ಚಾತ್ಯ ರಾಷ್ಟ್ರಗಳಿಂದ ತರಿಸಲಾಗುತ್ತಿತ್ತು. ರಕ್ಷಣಾ ಸೇವೆಗಳ ಉನ್ನತ ಅಧಿಕಾರಿಗಳು ಈ ಹಿಂದೆ ದೇಶೀಯವಾಗಿ ತಯಾರಿಸಿದ ಪರಿಕರಗಳ ಬದಲು ವಿದೇಶಿ ಶಸ್ತ್ರಾಸ್ತ್ರಗಳಿಗೆ ಮತ್ತು ಯುದ್ಧಸಾಮಗ್ರಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದರು, ಆದರೆ ಈಗ ಭಾರತೀಯ ಸಶಸ್ತ್ರ ಪಡೆಗಳ ಮೂರು ಸೇವೆಗಳ ಮುಖ್ಯಸ್ಥರುಗಳು ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುತ್ತಿದ್ದಾರೆ ಮತ್ತು ದೇಶೀಯ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳಾದ DRDO, ರಿಲಯನ್ಸ್ ಡಿಫೆನ್ಸ್ಗಳಿಗೆ ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ನೀಡಲು ಮುಂದಾಗುತ್ತಿದ್ದಾರೆ. ಸೈನ್ಯಕ್ಕೆ ಬೇಕಾದ ಹೆಲಿಕಾಪ್ಟರ್-ವಿರೋಧಿ ಕ್ಷಿಪಣಿ, ಟ್ಯಾಂಕ್ ವಿರೋಧಿ ನಿರ್ದೇಶಿತ ಕ್ಷಿಪಣಿಗಳು, ಕ್ವಿಕ್ ರಿಯಾಕ್ಷನ್ ಸರ್ಫೇಸ್ ಟು ಏರ್ ಮಿಸೈಲ್ (ಕ್ಯುಆರ್ಎಸ್ಎಎ) ಮತ್ತು ಇತರ ಶಸ್ತ್ರಾಸ್ತ್ರಗಳ ಉತ್ಪಾದನೆಯನ್ನು ಮೇಕ್ ಇನ್ ಇಂಡಿಯಾ ಅಡಿ ಪ್ರಾರಂಭಿಸಲಾಗಿದೆ.
ಡಿಆರ್ಡಿಒ ಸಣ್ಣ ವ್ಯಾಪ್ತಿಯ ರಕ್ಷಣಾ ಕ್ಷಿಪಣಿ ತಯಾರಿಸುವ ಪ್ರಸ್ತಾಪವನ್ನು ಪಡೆದಿದ್ದು, ಇದು ರೂ. 30,000 ಕೋಟಿ ಮೌಲ್ಯದ ವಿದೇಶಿ ವಿನಿಮಯವನ್ನು ಉಳಿಸಲು ಪ್ರಾರಂಭಿಸಿದೆ. ರಷ್ಯಾ, ಸ್ವೀಡೆನ್, ಅಥವಾ ಇಸ್ರೇಲ್ಗಳಿಂದ ಖರೀದಿಸಲು ಯೋಜಿಸಿದ್ದ ಎಸ್ಆರ್-ಎಸ್ಎಎಂಎಸ್ ಈಗ ಡಿಆರ್ಡಿಒಯಿಂದಲೇ ತಯಾರಿಸಲ್ಪಡುತ್ತಿದೆ. ಇದರಿಂದಾಗಿ ದೇಶದ ವಿದೇಶಿ ವಿನಿಮಯ ಮೌಲ್ಯ 20,000 ಕೋಟಿ ರೂಪಾಯಿಗಳಷ್ಟು ಉಳಿದಿದೆ.
ಭಾರತ 400 ಶತಕೋಟಿ ಡಾಲರ್ ಮೌಲ್ಯದ ವಿದೇಶಿ ವಿನಿಮಯ ಮೀಸಲನ್ನು ಸಂಗ್ರಹ ಮಾಡಿದೆ. ದೇಶಿಯ ಉತ್ಪಾದನೆಯಿಂದ ಉಳಿತಾಯವಾದ ವಿದೇಶಿ ವಿನಿಮಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಭಾರತದ ಸಹಾಯಕ್ಕೆ ಬರಲಿದೆ. ಒಂದು ವೇಳೆ ಭಾರತವು ದೃಢವಾದ ದೇಶೀಯ ರಕ್ಷಣಾ ಉತ್ಪಾದನಾ ಉದ್ಯಮವನ್ನು ನಿರ್ಮಿಸಲು ಯಶಸ್ವಿಯಾದರೆ, ಅದು ತನ್ನದೇ ಆದ ರಕ್ಷಣಾ ಅಗತ್ಯಗಳನ್ನು ಪೂರೈಸುವ ಜೊತೆಜೊತೆಗೆ ಇತರ ರಾಷ್ಟ್ರಗಳಿಗೂ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಲು ಭವಿಷ್ಯದಲ್ಲಿ ಸಾಧ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.