ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ‘ಸಾಮಾನ್ಯ ಟ್ರ್ಯಾಕ್”ಗೆ ಹಿಂದಿರುಗಿದೆ ಮತ್ತು ಭಾರತೀಯ ಉತ್ಪನ್ನಗಳಿಗೆ ಬೀಜಿಂಗ್ ಮಾರುಕಟ್ಟೆಯನ್ನು ಒದಗಿಸುವಂತಹ ಧನಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ. ಆದರೆ ವ್ಯಾಪಕ ವ್ಯಾಪಾರ ಕೊರತೆಯನ್ನು ಪರಿಹರಿಸಲು ಇನ್ನೂ ಹೆಚ್ಚಿನ ಬೆಳವಣಿಗೆಗಳು ನಡೆಯಬೇಕಾಗಿದೆ ಎಂದು ಉನ್ನತ ಮೂಲಗಳಿಂದ ಅಭಿಪ್ರಾಯಗಳು ವ್ಯಕ್ತವಾಗಿವೆ.
ಕಳೆದ ವರ್ಷ ಸಿಕ್ಕಿಂ ವಲಯದ ದೋಕ್ಲಾಂ ಟ್ರೈ-ಜಂಕ್ಷನ್ನಲ್ಲಿ ಭಾರತೀಯ ಮತ್ತು ಚೀನೀ ಸೇನೆಗಳ ನಡುವೆ 73 ದಿನಗಳ ಮುಖಾಮುಖಿ ಏರ್ಪಟ್ಟ ಬಳಿಕ ಎರಡೂ ದೇಶಗಳ ನಡುವಿನ ಸಂಬಂಧವನ್ನು ತೀವ್ರವಾಗಿ ಹಳಸಿತ್ತು. ಆದರೆ ಬಳಿಕ ಎರಡು ರಾಷ್ಟ್ರಗಳ ನಡುವಿನ ರಾಜಕೀಯ ಸಂಬಂಧ ಪುನಃಸ್ಥಾಪನೆಗೊಂಡಿರುವುದು ಮಾತ್ರವಲ್ಲ, ಒಂದು ವರ್ಷಗಳಿಂದ ಉತ್ತುಂಗಕ್ಕೇರಿದೆ. ಇದು ಸಕಾರಾತ್ಮಕ ಬೆಳವಣಿಕೆ ಎಂದು ಅಭಿಪ್ರಾಯಿಸಲಾಗಿದೆ.
ಆದರೆ ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಬಗ್ಗೆ ಮತ್ತು ಯೋಜನೆಯ ಅಡಿಯಲ್ಲಿ ಒಪ್ಪಂದಗಳನ್ನು ಮಾಡುವಾಗ ಅಂತಾರರಾಷ್ಟ್ರೀಯ ಮಾನದಂಡಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಭಾರತವು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸುವ ಬಗ್ಗೆ ಕೊಟ್ಟ ಮಾತನ್ನು ಚೀನಾ ಉಳಿಸಿಕೊಳ್ಳಬೇಕು ಎಂದು ಭಾರತ ನಿರೀಕ್ಷೆ ಮಾಡುತ್ತಿದೆ ಎನ್ನಲಾಗಿದೆ.
2018 ರಲ್ಲಿ ಭಾರತದ ರಾಜತಾಂತ್ರಿಕ ನಿಶ್ಚಯದ ವೇಳೆ ಮಾತನಾಡಿದ್ದ ಹಿರಿಯ ಅಧಿಕಾರಿಯೊಬ್ಬರು ’ಚೀನಾದೊಂದಿಗೆ ಸಂಬಂಧಗಳು ಸಾಮಾನ್ಯ ಟ್ರ್ಯಾಕ್ಗೆ ಹಿಂದಿರುಗುತ್ತಿರುವುದು ಧನಾತ್ಮಕ ಬೆಳವಣಿಗೆಯಾಗಿದೆ’ ಎಂದಿದ್ದರು.
ಇಂಡೋ-ಪೆಸಿಫಿಕ್ ಭಾರತದ ಆಸಕ್ತಿಯ ಪ್ರಮುಖ ಭಾಗವಾಗಿದ್ದು, ಬೀಜಿಂಗ್ನೊಂದಿಗೆ ಈ ಪ್ರದೇಶದ ಬಗ್ಗೆ ಮಾತುಕತೆ ನಡೆಸಲು ಉತ್ಸುಕವಾಗಿದೆ ಮತ್ತು ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾತುಕತೆಗಳಲ್ಲಿ ಈ ವಿಷಯವು ನಿಯಮಿತವಾಗಿ ಉಲ್ಲೇಖವಾಗು ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಪ್ರಧಾನಿ ಕ್ಸಿ ಜಿನ್ಪಿಂಗ್ ಅವರು ಮೂರು ಬಾರಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದಾರೆ ಮತ್ತು ಈ ವರ್ಷವೂ ಚೀನಾದ ನಗರ ವೂಹಾನ್ನಲ್ಲಿ ಅನೌಪಚಾರಿಕ ಶೃಂಗಸಭೆಯನ್ನು ನಡೆಸಿದ್ದರು, ಇದು “ಅಭೂತಪೂರ್ವ” ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
2019 ರ ದ್ವಿತೀಯಾರ್ಧದಲ್ಲಿ ಎರಡು ದೇಶಗಳ ನಾಯಕತ್ವದ ನಡುವೆ ಎರಡನೇ ಅನೌಪಚಾರಿಕ ಸಮಾವೇಶವು ನಡೆಯಲಿದೆ ಎಂದು ಹೇಳಲಾಗಿದೆ.
ಒಟ್ಟಿನಲ್ಲಿ ಒಂದು ವರ್ಷಗಳಿಂದ ಭಾರತ ಮತ್ತು ಚೀನಾದ ನಡುವಣ ಸಂಬಂಧದಲ್ಲಿ ಸಾಕಷ್ಟು ವೃದ್ಧಿಯಾಗುತ್ತಿದೆ. ಇದು ಪ್ರದೇಶದ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ವಿಶ್ಲೇಷಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.